ಮಳವಳ್ಳಿ ತಾಲ್ಲೂಕಿನ ಮಾರೇಹಳ್ಳಿ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದ ಆವರಣದಲ್ಲಿ ಡಾ.ರಾಜ್ ಕುಮಾರ್ ಕಲಾಸಂಘದ ವತಿಯಿಂದ ಹಿರಿಯ ನಿರ್ದೇಶಕ ದಿ ಹೆಚ್.ಎಲ್.ಎನ್ ಸಿಂಹರವರ 119 ನೇ ಜನ್ಮ ದಿನೋತ್ಸವ ಆಚರಿಸಲಾಯಿತು.
ಹಿರಿಯ ನಿರ್ದೇಶಕ ದಿ ಹೆಚ್ ಎಲ್ ಎನ್ ಸಿಂಹರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ವೇಳೆ ಡಾ.ರಾಜ್ ಕುಮಾರ್ ಕಲಾಸಂಘದ ಅಧ್ಯಕ್ಷ ದೊಡ್ಡಯ್ಯ ಮಾತನಾಡಿ, ವರನಟ ಡಾ.ರಾಜ್ ಕುಮಾರ್ ಅವರನ್ನು ಚಿತ್ರರಂಗಕ್ಕೆ ಕೊಟ್ಟ ನಿರ್ದೇಶಕರೆಂದರೆ ಹೆಚ್ ಎಲ್ ಎನ್ ಸಿಂಹರವರು ಎಂದು ಸ್ಮರಿಸಿದರು.
ಇಂತಹ ವ್ಯಕ್ತಿಯನ್ನು ಭಾರತ ಸರ್ಕಾರ ಗೌರವದಿಂದ ಕಾಣದೆ ಇರುವುದು ವಿಷಾದನೀಯ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು. ಡಾಕ್ಟರ್ ರಾಜಕುಮಾರ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಹಿರಿಮೆ ನಮ್ಮ ತಾಲೂಕಿನ ಎಚ್ ಎಲ್ ಸಿಂಹ ರವರು ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಎಂ ಹೆಚ್ ಕೆಂಪಯ್ಯ, ಟೈಲರ್ ಬಸವರಾಜು, ಶಿವಣ್ಣ,ಮೆಡಿಕಲ್ ಬಸವರಾಜು, ಮಾರ್ಕೇಂಡಯ್ಯ,ಮಾದೇಶ್, ಸೇರಿದಂತೆ