Thursday, September 19, 2024

ಪ್ರಾಯೋಗಿಕ ಆವೃತ್ತಿ

ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಉದಯ್ ಗುದ್ದಲಿ ಪೂಜೆ

ಮದ್ದೂರು ತಾಲ್ಲೂಕಿನ ಬೆಸಗರಹಳ್ಳಿ ಗ್ರಾಮದಲ್ಲಿ 2 ಕೋಟಿ ರೂ ವೆಚ್ಚದ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಕೆ.ಎಂ.ಉದಯ್ ಗುದ್ದಲಿ ಪೂಜೆ ನೆರವೇರಿಸಿದರು.

ಕಳೆದ ಹಿಂದಿನ ಬಿಜೆಪಿ ಸರ್ಕಾರ 2022-23 ನೇ ಶೈಕ್ಷಣಿಕ ವರ್ಷದಲ್ಲಿ 2 ಕೋಟಿ ರೂ ಹಣವನ್ನು ಕೊಠಡಿ ನಿರ್ಮಾಣ  ಹಾಗೂ ವಿವಿಧ ಕಾಮಗಾರಿಗಳಿಗೆ ಬಿಡುಗಡೆಗೊಳಿಸಲಾಗಿತ್ತು. ಅಂದಿನ ಶಾಸಕ ಡಿ.ಸಿ.ತಮ್ಮಣ್ಣ ಅವರು ಕೆಲವು ಕಾಮಗಾರಿಗಳ ಬದಲಾವಣೆಗಾಗಿ ಸಮಗ್ರ ಶಿಕ್ಷಣ ಕರ್ನಾಟಕ ಶಿಕ್ಷಣ ಇಲಾಖೆ ಮೂಲಕ ಬೇಡಿಕೆ ಇಟ್ಟಿದ್ದರು. ಅದರಂತೆ ಕಾಮಗಾರಿ ಬದಲಾವಣೆಗೆ ಅನುಮತಿ ನೀಡುವುದು ತಡವಾದ ಹಿನ್ನೆಲೆಯಲ್ಲಿ ಗುದ್ದಲಿ ಪೂಜೆ ನೆರವೇರಿಸುವಷ್ಟರಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿ ಬಂದಿದ್ದರಿಂದ ಇಂದಿನ ಶಾಸಕ ಕೆ.ಎಂ.ಉದಯ್ ಅವರು ಸೋಮವಾರ ಗುದ್ದಲಿ ಪೂಜೆ ನೆರವೇರಿಸಿದರು.

ನಂತರ ಶಾಸಕ ಕೆ.ಎಂ.ಉದಯ್ ಅವರು ಮಾತನಾಡಿ, ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಹೆಚ್ಚಿನ ಒತ್ತು ನೀಡುವ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುವುದಾಗಿ ತಿಳಿಸಿದರು.

ಈ ವೇಳೆ ಬಿಇಓ ಸಿ.ಎಚ್.ಕಾಳೀರಯ್ಯ, ಸ್ಥಳೀಯ ಮುಖಂಡರಾದ ಕೆರೆಮೇಳಗಳದೊಡ್ಡಿ ಶೇಖರ್, ಪಣ್ಣೇದೊಡ್ಡಿ ಸುಧಾಕರ್, ರಮೇಶ್, ಜಯರಾಮು, ದೇವರಾಜು ಸೇರಿದಂತೆ ಇತರರರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!