Thursday, September 19, 2024

ಪ್ರಾಯೋಗಿಕ ಆವೃತ್ತಿ

ಹನಿಟ್ರ್ಯಾಪ್: ಮಂಡ್ಯದ ಚಿನ್ನದ ವ್ಯಾಪಾರಿಯಿಂದ 50 ಲಕ್ಷ ದೋಚಿದ್ರು

ಮಂಡ್ಯ ನಗರದ ಹೆಸರಾಂತ ಶ್ರೀನಿಧಿ ಗೋಲ್ಡ್ ಮಾಲೀಕ ಜಗನ್ನಾಥ ಶೆಟ್ಟಿ ಹನಿಟ್ರ್ಯಾಪ್ ವಂಚಕರ ಜಾಲಕ್ಕೆ ಸಿಲುಕಿ 50 ಲಕ್ಷ ರೂ.ಹಣ ಕಳೆದುಕೊಂಡಿದ್ದಾರೆ.

ಹನಿಟ್ರ್ಯಾಪ್ ಮಾಡಿ 50 ಲಕ್ಷ ರೂ.ಸುಲಿಗೆ ಮಾಡಿದ ಪ್ರಕರಣದಲ್ಲಿ ಮಂಡ್ಯ ಕೆರೆಯಂಗಳದ ವಾಸಿ ಸಲ್ಮಾಬಾನು, ಜಯಂತ್ ಸೇರಿದಂತೆ ಅವಳ ಗ್ಯಾಂಗಿನ ಏಳು ಮಂದಿ ವಿರುದ್ಧ ಮಂಡ್ಯ ಪಶ್ಚಿಮ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪ್ರಕರಣದ ಮುಖ್ಯ ರೂವಾರಿ ಸಲ್ಮಾಬಾನು ಬಂಧಿಸಿದ್ದು, ಉಳಿದವರು ನಾಪತ್ತೆಯಾಗಿದ್ದಾರೆ. ಸಲ್ಮಾಬಾನುವನ್ನು ಪೋಲಿಸರು ಬಂಧಿಸಿ 10 ದಿನಗಳ ಕಾಲ ಪೋಲಿಸ್ ಕಸ್ಟಡಿಗೆ ಪಡೆದಿದ್ದಾರೆ.

ಎಫ್ಐಆರ್ ಏನೇಳುತ್ತೆ

19/08/2022 ರಂದು ಬೆಳಿಗೆ 11-00 ಗಂಟೆಯ ಸಮಯದಲ್ಲಿ,ಜಗನ್ನಾಥ ಶೆಟ್ಟಿ ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ 26/02/2022 ರಂದು ರಾತ್ರಿ 10-45 ರ ರಾಜಹಂಸ ಬಸ್ಸಿನಲ್ಲಿ ಮಂಗಳೂರಿಗೆ ಹೋಗಲು ಟಿಕೆಟ್ ಕಾಯ್ದಿರಿಸಿದ್ದೆ.

ನಸುಕಿನ ಜಾವ ಮೈಸೂರಿನಿಂದ ಮಂಗಳೂರಿಗೆ ಹೋಗುವುದಾಗಿತ್ತು. ಅದಕ್ಕಾಗಿ ನಾನು ಮಂಡ್ಯದ ಕೆಎಸ್‌ಆರ್ ಟಿಸಿ ನಿಲ್ದಾಣದ ಮುಂದೆ ರಾತ್ರಿ 8ಗಂಟೆಯ ಸಮಯದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದೆ. ಆಗ ಅಲ್ಲಿಗೆ ಒಂದು ಕಾರು ಬಂದು ನಿಂತಿತು. ಅದರಲ್ಲಿದ್ದವರುತನೀವು ಶ್ರೀನಿಧಿಗೋಲ್ಡ್ ನವರಲ್ವಾ ಎಂದರು. ನಾನು ಹೌದು ಎಂದೆ, ನೀವೇನು ಇಲ್ಲಿ ಎಂದರು. ನಾನು ಮೈಸೂರಿಗೆ ಅಂದೆ, ಅದಕ್ಕೆ ಅವರು ಮೈಸೂರಿಗೆ ಹೋಗುವುದಾದರೆ ಬನ್ನಿ ಡ್ರಾಪ್ ಕೊಡುತ್ತೇವೆ ಎಂದರು. ನಾನು ಪರಿಚಯದವರು ಎಂದು ತಿಳಿದು ಅವರ ಕಾರು ಹತ್ತಿದೆ. ಕಾರಿನಲ್ಲಿ ಮೂರು ಜನ ಗಂಡಸರು ಒಬ್ಬಳು ಹೆಂಗಸು ಇದ್ದರು.

ಕಾರಿನಲ್ಲಿ ಹೋಗುವಾಗ ತುಂಬಾ ಹತ್ತಿರದವವರು, ತುಂಬಾ ಪರಿಚಯದವರು ಎಂಬಂತೆ ಕಾರಿನಲ್ಲಿದ್ದ ಸಲ್ಮಾಬಾನು ಎಂಬ ಮಹಿಳೆ ಮತ್ತು ಜಯಂತ್ ಎಂಬುವರು ನನ್ನನ್ನು ಪರಿಚಯಿಸಿ ಕೊಂಡು ಮಾತಾಡಿದರು.

ಸಲ್ಮಾಬಾನು

ಮೈಸೂರು ತಲುಪುತ್ತಿದ್ದಂತೆ ನಮ್ಮ ಸ್ನೇಹಿತರು ದರ್ಶನ್ ಪ್ಯಾಲೇಸ್ ಬನ್ನಿ, ಚಿನ್ನದ ಬಿಸ್ಕತ್ ಬಂದಿದೆ. ಇದು ಒರಜಿನಲ್ಲಾ ಎಂದು ನೋಡಿ ಹೇಳಿ ಎಂದರು. ಅದಕ್ಕೆ ನನಗೆ ಮಂಗಳೂರಿಗೆ ಬಸ್‌ ಮಿಸ್ ಆಗುತ್ತದೆ ಎಂದೆ. ಅದಕ್ಕೆ, ಅವರು ಇಲ್ಲೇ ಹತ್ತಿರ 5 ನಿಮಿಷ ನೋಡಿದ ತಕ್ಷಣ ಹೊರಡಬಹುದು ಅಂದರು. ಅವರ ಮಾತು ನಂಬಿ ದರ್ಶನ್ ಫ್ಯಾಲೇಸ್ ಗೆ ಅವರ ಜೊತೆ ಹೋದೆ.

ಆಗ ನನ್ನ ಕಾರಿನವರು ನನ್ನೊಂದಿಗೆ ಬಂದವರು ಪ್ರಾಣೇಶ್‌ ಲಾಡ್ಜ್ ಒಳಗೆ ಹೋಗುತ್ತಿದ್ದಂತೆಯೇ ನನ್ನ ಜೊತೆ ಬಂದಿದ್ದವರು ಅಲ್ಲಿಂದ ಮಾಯವಾದರು. ಆಗ ಅಲ್ಲಿಗೆ 22-25 ವರ್ಷದ ಹುಡುಗಿ ರೂಮಿನ ಒಳಗೆ ಬಂದಳು.

2 ನಿಮಿಷದ ನಂತರ ಕಾರಿನಲ್ಲಿ ಬಂದ ಸಲ್ಮಾಬಾನು ಜಯಂತ್, ಕಾರಿನಲ್ಲಿದ್ದ ಇತರರು ಬಂದು ರೂಮ್ ಸೇರಿದರು. ನೀವು ಈ ಹುಡುಗಿ ಜೊತೆಯಲಿ, ಇರುವುದನ್ನು ರೆಕಾರ್ಡ್ ಮಾಡುತ್ತಿದ್ದೇವೆ ಎಂದು, ಮತ್ತೊಬ್ಬ ಇವಳು ನನ್ನ ತಂಗಿ, ನೀನು ಇವಳನ್ನು ಲಾಡ್ಜ್ ಗೆ ಕರೆದುಕೊಂಡು ಬಂದಿದ್ದೀಯ ಎಂದು ಇನ್ನಿತರರು ಸೇರಿ ನನ್ನ ಮೇಲೆ ಕೈಯಿಂದ ಹಲ್ಲೆ ಮಾಡಿದರು. ಮೊಬೈಲ್ ರೆಕಾರ್ಡ್ ಮಾಡಿದ್ದೇವೆ. 4 ಕೋಟಿ ಹಣ ನೀಡಿದರೆ ನಿನ್ನನ್ನು ಬಿಡುಗಡೆಗೊಳಿಸುತ್ತೇವೆ ಇಲ್ಲಾ ಎಂದರೆ ಇಲ್ಲೇ ಕೊಲೆ ಮಾಡುತ್ತೇವೆ ಎಂದರು. ಕೊನೆಗೆ ರಾತ್ರಿ 12 ಗಂಟೆಗೆ ಸುಮಾರಿಗೆ ಮಾತುಕತೆ ಮಾಡಿ 50 ಲಕ್ಷ ನೀಡುವುದಾಗಿ ಒಪ್ಪಿದೆ.

ಮಾರನೇ ದಿನ 27/02/2022 ರಂದು ಬೆಳಗ್ಗೆ 10ರ ಸುಮಾರಿಗೆ ನನ್ನ ಸ್ನೇಹಿತರಾದ ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ಡಾ.ಎಸ್.ಶ್ರೀನಿವಾಸ ಶೆಟ್ಟಿ ಅವರ ಮುಖಾಂತರ ರಾಜಶ್ರೀ ಜ್ಯೂಯಲರ್ಸ್‌ ಅವರ ಬಳಿ 25 ಲಕ್ಷ ರೂಪಾಯಿಗಳನ್ನು, ಮೈಸೂರು ಜ್ಯೂ ಗೇಟ್ ಹತ್ತಿರ ಕಾರಿನಲ್ಲಿ, ತಂದು ಕೊಟ್ಟಿರುತ್ತಾರೆ. 23 ಲಕ್ಷ ರೂಪಾಯಿಗಳನ್ನು ಮೈಸೂರಿನ ಅಶೋಕ ರಸ್ತೆಯ ಸೂರ್ಯ ಜ್ಯೂಯಲರ್ಸ್ ನಿಂದ ನನ್ನ ಕಿಡ್ನಾಪ್ ಮಾಡಿ ಮಾಡಿಕೊಂಡು ಬಂದಿದ್ದವರ ಪೈಕಿ ಇಬ್ಬರು ಹೋಗಿ ಹಣ ಪಡೆದುಕೊಂಡು ಬಂದಿರುತ್ತಾರೆ.

ಇನ್ನುಳಿದ 2 ಲಕ್ಷ ರೂಪಾಯಿಗಳನ್ನು ಮೈಸೂರಿನ ಅಶೋಕ ರಸ್ತೆಯ ಕಲ್ಪತರು ಸ್ಯಾರಿಸ್ ಹೌಸ್‌ ನಿಂದ ಪಡೆದಿರುತ್ತಾರೆ. ಅವರಿಗೆ ಒಟ್ಟು 50 ಲಕ್ಷ ರೂಗಳನ್ನು ಒಪ್ಪಿಸಿದ ನಂತರ ನನ್ನನ್ನು ಬಿಡುಗಡೆಗೊಳಿಸಿದರು, ಮೇಲ್ಕಂಡವರು ಮೋಸದಿಂದ ಹಣ ಮಾಡುವ ಉದೇಶದಿಂದ ಸಂಚು ರೂಪಿಸಿ, ನನಗೆ ನಂಬಿಸಿ ಕಾರಿನಲಿ, ಅಪಹರಣ ಮಾಡಿಕೊಂಡು ಹೋಗಿ ಅಕ್ರಮವಾಗಿ ಬಂಧನಲ್ಲಿ, ಇಟ್ಟುಕೊಂಡು ಜೀವ ಬೆದರಿಕೆಯನ್ನುಂಟು ಮಾಡಿ, ಮೇಲ್ಕಂಡವರೆಲ್ಲರೂ ಸೇರಿಕೊಂಡು ದರೋಡೆ ಮಾಡುವ ಉದ್ದೇಶದಿಂದ ನನಗೆ ಹೆದರಿಸಿ ನನ್ನಿಂದ 50 ಲಕ್ಷ ಹಣವನ್ನು ದರೋಡೆ ಮಾಡಿರುತ್ತಾರೆ, ಅದ್ಧರಿಂದ ತಾವುಗಳು ಸಲ್ಮಾಬಾನು ಜಯಂತ್ ಮತ್ತು ಇತರರನ್ನು ಪತ್ತೆ ಮಾಡಿ ನನ್ನಿಂದ ವಸೂಲಿ ಮಾಡಿದ 50 ಲಕ್ಷ ರೂ.ಗಳನ್ನು ಹಿಂತಿರುಗಿಸಿಕೊಡಬೇಕಾಗಿ ಪ್ರಾರ್ಥನೆ ಹಾಗೂ ಏಳು ಮಂದಿ ವಂಚಕರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಜರುಗಿಸಬೇಕಾಗಿ ಕೋರುತ್ತೇನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅವರು ನನಗೆ ಜೀವ ಬೆದರಿಕೆ ಹಾಕಿದ್ದರಿಂದ ಭಯ ಪಟ್ಟು ಹಾಗೂ ಇನ್ನು ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಈ ದಿನ ತಡವಾಗಿ ದೂರು ನೀಡುತ್ತಿದ್ದೇನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಸರಿಯಾದ ತನಿಖೆ ನಡೆಯಬೇಕಿದೆ

ಇನ್ನು ಎಫ್ಐಆರ್ ನಲ್ಲಿರುವಂತೆ ನಂಬುವುದಕ್ಕೆ ಸಾಧ್ಯವಿಲ್ಲ.ಜಗನ್ನಾಥ ಶೆಟ್ಟರು ಹನಿಟ್ರ್ಯಾಪ್ ಹಿಂದೆ ಬೇರೆ ಕತೆಯೇ ಇದ್ದು, ಪೋಲಿಸರ ಸರಿಯಾದ ತನಿಖೆಯಿಂದಷ್ಟೇ ನಿಜವಾದ ಸತ್ಯ ಹೊರತರಬೇಕಿದೆ. ಪ್ರಕರಣ ನಡೆದು ಆರು ತಿಂಗಳ ನಂತರ ಈ ಪ್ರಕರಣ ಹೊರಬಂದಿದೆ ಎಂದರೆ ಅನುಮಾನ ಬರುತ್ತೆ. ಮಂಡ್ಯ ಪೋಲಿಸರು ನಿಜವಾದ ಕತೆ ಏನು ಎಂಬುದನ್ನು ಬಹಿರಂಗ ಪಡಿಸಲಿ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!