Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ ಜಿಲ್ಲಾ ಹಾಪ್ ಕಾಮ್ಸ್ ಸೇವೆ ಬಳಸಿಕೊಳ್ಳಿ: ರೂಪಶ್ರೀ

ರೈತರು ಬೆಳೆದಂತಹ ತೋಟಗಾರಿಕಾ ಉತ್ಪನ್ನಗಳನ್ನು ಖರೀದಿಸಿ ಗ್ರಾಹಕರಿಗೆ ತಾಜಾತನದಲ್ಲಿ- ನ್ಯಾಯಯುತ ಬೆಲೆ ಹಾಗೂ ಕರಾರುವಕ್ಕಾದ ತೂಕದಲ್ಲಿ ಮಾರಾಟ ಮಾಡುವ ಸೇವೆ ಸಲ್ಲಿಸುವುದೇ “ಮಂಡ್ಯ ಜಿಲ್ಲಾ ಹಾಪ್ ಕಾಮ್ಸ್ “ನ ದ್ಯೇಯೋದ್ದೇಶವಾಗಿದ್ದು, ಈ ಸೇವೆಯನ್ನು ಗ್ರಾಹಕರು ಬಳಸಿಕೊಳ್ಳಬೇಕೆಂದು ಎಂದು ಮಂಡ್ಯ ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕಿ ಕೆ. ಎನ್. ರೂಪಶ್ರೀ ತಿಳಿಸಿದರು.

ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳ, ಬೆಂಗಳೂರು ರವರು ನೀಡಿರುವ ಅನುದಾನದಲ್ಲಿ ,ತೂಬಿನಕೆರೆ ಕೈಗಾರಿಕಾ ವಲಯ ಪ್ರದೇಶದಲ್ಲಿರುವ ಹಾಪ್ ಕಾಮ್ಸ್ ನ ಹಣ್ಣು ತರಕಾರಿ ಸಂಗ್ರಹಣಾ ಕೇಂದ್ರದ ಹತ್ತಿರ ನಿರ್ಮಿಸಿರುವ ನೂತನ “ಮಾರಾಟ ಮಳಿಗೆ”ಗಳನ್ನು ಉದ್ಘಾಟಿಸಿ ಮಾತನಾಡಿ,  ಜಿಲ್ಲೆಯಾದ್ಯಂತ ಇರುವ ರೈತರು ಬೆಳೆದ ತೋಟಗಾರಿಕಾ ಉತ್ಪನ್ನಗಳನ್ನು, ಅವಶ್ಯಕತೆಗೆ ಅನುಗುಣವಾಗಿ ಖರೀದಿಸಿ, ಜಿಲ್ಲಾದ್ಯಂತ ಇರುವ ಹಾಪ್ ಕಾಮ್ಸ್ ಮಾರಾಟ ಮಳಿಗೆಗಳ ಮುಖಾಂತರ ಗ್ರಾಹಕರಿಗೆ ತಾಜಾತನದಲ್ಲಿ -ಕರಾರುವಕ್ಕಾದ ತೂಕದಲ್ಲಿ- ನಿಗದಿತ ಬೆಲೆಯಲ್ಲಿ ಮಾರಾಟ ಮಾಡುವ ಸೇವೆ ಸಲ್ಲಿಸಲ್ಲಿಸುತ್ತಿದ್ದು, ಜಿಲ್ಲೆಯ ರೈತರು ಹಾಗೂ ಗ್ರಾಹಕರು ಈ ಸಂಸ್ಥೆಯು ಪ್ರಯೋಜನವನ್ನು ಪಡೆಯಬೇಕೆಂದು ರೈತ ಬಾಂಧವರಲ್ಲಿ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ ಡಿ. ಕೃಷ್ಣೇಗೌಡ, ಉಪಾಧ್ಯಕ್ಷ ಕಾಳಯ್ಯ, ಬೆಂಗಳೂರು ಕೆ. ಹೆಚ್. ಎಫ್ ಹಾಗೂ ಮಂಡ್ಯ ಜಿಲ್ಲಾ ಹಾಪ್ ಕಾಮ್ಸ್ ನಿರ್ದೇಶಕ ಯು. ಸಿ. ಶೇಖರ್, ಇತರೆ ನಿರ್ದೇಶಕರಾದ ಎಸ್.ನಾಗೇಂದ್ರ, ಕೆ. ಜಿ. ತಮ್ಮಣ್ಣ, ಬಿ. ಎಸ್.. ಚಂದ್ರಶೇಖರ್, ಎಸ್. ಬಿ. ಸಿದ್ದರಾಮೇಗೌಡ, ಕೆ. ಮಹೇಶ್, ಪುಟ್ಟಬಸವೇಗೌಡ, ಭೋಜನಾಯಕ ಹಾಗೂ ಸಂಘದ ವ್ಯವಸ್ಥಾಪಕ ನಿರ್ದೇಶಕ ಸಿ.ಎಂ.ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ