Friday, November 20, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು| ಪುರಸಭೆ ಆಯ-ವ್ಯಯ ಮಂಡನೆ; ₹42.04 ಲಕ್ಷ ಆದಾಯ ನಿರೀಕ್ಷೆ

ವರದಿ: ಪ್ರಭು ವಿ ಎಸ್

2024- 25 ನೇ ಹಣಕಾಸು ವರ್ಷದಲ್ಲಿ ಮದ್ದೂರು ಪುರಸಭೆ ಆಡಳಿತ ಒಟ್ಟು 42.04
ಲಕ್ಷ ರೂ ಗಳ ಉಳಿತಾಯ ನಿರೀಕ್ಷಿಸಲಾಗಿದೆ.

ಮದ್ದೂರು ಪಟ್ಟಣದ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಮಂಗಳವಾರ ಪರಸಭೆ ಆಡಳಿತಾದಿಕಾರಿ ಮಹೇಶ್ ಮುಂದಿನ ಸಾಲಿನ ಆಯ-ವ್ಯಯ ವರದಿಯನ್ನು ಸಾಮಾನ್ಯ ಸಭೆವೇಳೆ ಹಾಜರಿದ್ದ ಸದಸ್ಯರ ಸಮ್ಮುಖದಲ್ಲಿ ಮಂಡಿಸಿದರು.

ಈ ಪೈಕಿ ಆರಂಭ ಶಿಲ್ಕು 64.32 ಲಕ್ಷ, ರಾಜಸ್ವ ಸ್ವೀಕೃತಿಗಳು 12.76 ಕೋಟಿ, ರಾಜಸ್ವ ಪಾವತಿಗಳು 12.49 ಕೋಟಿ, ಹೆಚ್ಚುವರಿ ಬಾಬ್ತು 27.04 ಲಕ್ಷ ರೂ ನಿರೀಕ್ಷಿತ ವೆಂದರು, ಬಂಡವಾಳ ಸ್ವೀಕೃತಿಗಳು 7.10 ಕೋಟಿ, ಬಂಡವಾಳ ಪಾವತಿಗಳು 6.95 ಕೋಟಿ ರೂ ಗಳಾಗಿದ್ದು ಈ ಪೈಕಿ ಬಂಡವಾಳ ಖಾತೆಯಲ್ಲಿ ಉಳಿತಾಯ 15 ಲಕ್ಷ ಹಣ ನಿರೀಕ್ಷಿಸಲಾಗಿದೆ ಎಂದರು. ಎಲ್ಲಾ ಸ್ವೀಕೃತಿಗಳು ಮತ್ತು ಪಾವತಿಗಳ ಹೊರತಾಗಿ ಒಟ್ಟು 42.04 ಲಕ್ಷ ರೂಪಾಯಿಗಳನ್ನು ಮುಂಬರುವ ಹಣಕಾಸು ವರ್ಷದಲ್ಲಿ ಉಳಿತಾಯ ರೂಪದಲ್ಲಿ ನಿರೀಕ್ಷಿಸಲಾಗಿದೆ ಎಂದರು,

ಪ್ರಮುಖ ಆದಾಯಗಳು

ಆಸ್ತಿ ತೆರಿಗೆ ಮತ್ತು ದಂಡ 2.85 ಕೋಟಿ, ಮಳಿಗೆಗಳ ಬಾಡಿಗೆ 15 ಲಕ್ಷ.ಉದ್ದಿಮೆ ಪರವಾನಗಿ ಶುಲ್ಕ15. ಲಕ್ಷ.
ನೀರಿನ ಶುಲ್ಕ ಮತ್ತು ಒಳ ಚರಂಡಿ ಸಂಪರ್ಕ ಶುಲ್ಕಗಳ ಠೇವಣಿಗಳ ಬಾಬ್ತು 1.05 ಕೋಟಿ, ಘನತ್ಯಾಜ್ಯ ನಿರ್ವಹಣೆ ಶುಲ್ಕ 20.ಲಕ್ಷ. ಖಾತಾ ಬದಲಾವಣೆ ಖಾತಾ ಪ್ರತಿ ವಿತರಣೆ ಬಾಬ್ತು 13 ಲಕ್ಷ. ಬ್ಯಾಂಕ್ ಖಾತೆಗಳಿಂದ ಬಡ್ಡಿಹಣ ನಿರೀಕ್ಷಿತ 12.ಲಕ್ಷ. ಇತರೆ ಶುಲ್ಕಗಳ ಬಾಬ್ತು 52.45 ಲಕ್ಷ ಗಳ ನಿರೀಕ್ಷಿಸಲಾಗಿದೆ.

ರಾಜ್ಯ ಮತ್ತು ಕೇಂದ್ರದ ಅನುದಾನವನ್ನು ಕೆಳಕಂಡಂತೆ ನಿರೀಕ್ಷಿಸಲಾಗಿದೆ

ಎಸ್.ಎಫ್. ಸಿ ಮುಕ್ತನಿಧಿ 45 ಲಕ್ಷ.
ಎಸ್.ಎಫ್.ಸಿ ವೇತನ ಅನುದಾನ 2.92 ಕೋಟಿ.
ಎಸ್ ಎಫ್ ಸಿ ವಿದ್ಯುತ್ ಅನುದಾನ 3.60.ಕೋಟಿ.
ಸ್ವಚ್ಚ ಭಾರತ್ ಮಿಶನ್ ಅನುದಾನ 10.50 ಕೋಟಿ.
15.ನೇ ಹಣಕಾಸು ಅನುದಾನ 1.25 ಕೋಟಿ.
ವಿಶೇಷ ಅನುದಾನ 5.5 ಕೋಟಿ ಒಳಗೊಂಡಿದೆ ಎಂದು ಸಭೆಗೆ ವಿವರಿಸಿದರು,

ಪ್ರಮುಖ ವೆಚ್ಚಗಳು

ಕಟ್ಟಡ ನಿರ್ಮಾಣ ರೂ 1.70 ಕೋಟಿ.
ಕಛೇರಿ ಉಪಕರಣ ಸಲಕರಣೆ ಖರೀದಿ 15.ಲಕ್ಷ.
ಸ್ವಾಗತ ಕಮಾನು. ಮಾರ್ಗ ಸೂಚಿ ಫಲಕ ಅಳವಡಿಕೆ 12 ಲಕ್ಷ.
ರಸ್ತೆ.ಚರಂಡಿ. ಪಾದಚಾರಿ ರಸ್ತೆ ನಿರ್ಮಾಣ 1.25 ಕೋಟಿ..
ಸ್ಮಶಾನ ಗಳ ಅಭಿವೃದ್ಧಿ ಗೆ 30 ಲಕ್ಷ.
ಬೀದಿ ದೀಪ ಕಾಮಗಾರಿಗಳಿಗೆ 12 ಲಕ್ಷ.
ಸಾರ್ವಜನಿಕ ಶೌಚಾಲಯ ಕಟ್ಟಡ ನಿರ್ಮಾಣಕ್ಕೆ 15. ಲಕ್ಷ.
ನೈರ್ಮಲ್ಯ ವಾಹನ .ಸಲಕರಣೆಗಳ ಖರೀದಿಗಾಗಿ 45 ಲಕ್ಷ ಹಣ ಕಾಯ್ದಿರಿಸಲಾಗಿದೆ ಎಂದರು.
ಪತ್ರಕರ್ತರ ಕ್ಷೇಮಾಭಿವೃದ್ಧಿ ನಿದಿಗೆ 5 ಲಕ್ಷ .ಘನತ್ಯಾಜ್ಯ ವಸ್ತು ನಿರ್ವಹಣೆ ಬಾಬ್ತು 30 ಲಕ್ಷ.
ನೀರು ಸರಬರಾಜು.ಕಟ್ಟಡಗಳ ನಿರ್ಮಾಣ. ಯಂತ್ರೋಪಕರಣಗಳ ಖರೀದಿಗೆ 70 ಲಕ್ಷ ಹಣ ನಿಗದಿಗೊಳಿಸಿದ್ದಾಗಿ ವಿವರಿಸಿದರು.
ಒಟ್ಟಾರೆ ಮುಂದಿನ ಹಣಕಾಸು ವರ್ಷದಲ್ಲಿ ಉಳಿತಾಯ ಬಜೆಟ್ ಮಂಡಿಸಿದ್ದು ಪುರಸಭೆ ಚುನಾಯಿತ ಸದಸ್ಯರು ಸ್ಥಳೀಯ ನಾಗರೀಕರ ಮೂಲ ಸೌಲಭ್ಯ ಪೂರೈಸಲು ಸಹಕರಿಸಲು ಮನವಿ ಮಾಡಿದರು,

ಅಭಿನಂದನೆ
ಸಭೆ ಆರಂಭಕ್ಕೂ ಮುನ್ನ ಪರಸಭೆ ಸದಸ್ಯರಾಗಿ ಸರಕಾರಿ ನಾಮನಿರ್ದೇಶನ ಸದಸ್ಯರಾದ ಕೃಷ್ಣಪ್ಪ,ಶಾಂತಮ್ಮ, ಮೋಹನ್, ವೆಂಕಟೇಶ್ ಹಾಗೂ ಅಜ್ಲಾನ್ ಖಾನ್, ಅವರನ್ನು ಪುರಸಭೆ ವತಿಯಿಂದ ಸ್ವಾಗತಿಸಿ ಅಭಿನಂದಿಸಲಾಯಿತು.

ಮುಖ್ಯಾಧಿಕಾರಿ ಕರಿಬಸವಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆ ವೇಳೆ ಸದಸ್ಯರಾದ ಎಂ ಐ ಪ್ರವೀಣ್, ಕೋಕಿಲಾ,ಬಿ ಸಿ ಸರ್ವ ಮಂಗಳ,ಎಸ್ ಮಹೇಶ್, ಟಿ ಆರ್ ಪ್ರಸನ್ನ, ಬಸವರಾಜು, ಲತಾ ರಾಮು,
ಶೋಭ,ರತ್ನಮ್ಮ,ವನಿತಾ,ಪ್ರಿಯಾಂಕಅಪ್ಪು ಪಿ ಗೌಡ, ಆದಿಲ್ ,ಸೇರಿದಂತೆ ಇತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ