Friday, November 20, 2026

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ಮೈಕ್ರೋ ಫೈನಾನ್ಸ್ ಸಿಬ್ಬಂದಿಯಿಂದ ಮನೆ ಜಪ್ತಿ ; ವಿಷ ಕುಡಿದಿದ್ದ ಮಹಿಳೆ ಸಾವು

ಮೈಕ್ರೋ ಫೈನಾನ್ಸ್ ಕಂಪನಿಯಿಂದ ಪಡೆದಿದ್ದ ಸಾಲಕ್ಕೆ ಮನೆಯನ್ನೇ ಜಪ್ತಿ ಮಾಡಿದ ಕಂಪನಿಯ ಸಿಬ್ಬಂದಿಯವರ ಕಿರುಕುಳದಿಂದ ಮನನೊಂದ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಯ ಯತ್ನಿಸಿ ಇಂದು ಸಾವನ್ನಪ್ಪಿರುವ ಘಟನೆ ಮಳವಳ್ಳಿ ತಾಲ್ಲೂಕು ಕೊನ್ನಾಪುರ ಗ್ರಾಮದಲ್ಲಿ ಜರುಗಿದೆ.

ಗ್ರಾಮದ ಅಂದಾನಯ್ಯ ಎಂಬುವರ ಪತ್ನಿಯಾದ 52 ವರ್ಷದ ಪ್ರೇಮ ಎಂಬುವರೇ ಮಂಗಳವಾರ ಬೆಳಿಗ್ಗೆ 11.30 ರ ಸಮಯದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಮಹಿಳೆಯಾಗಿದ್ದು ಸಾವು ಬದುಕಿನೊಡನೆ ಹೋರಾಟ ನಡೆಸುತ್ತಿದ್ದ ಇವರಿಗೆ ಹಲಗೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ತೀವ್ರ ನಿಗಾ ಘಟಕದಲ್ಲಿ ಇವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ  ಇಂದು ಮರಣ ಹೊಂದಿದ್ದಾರೆ.

ಖಾಸಗಿ ಫೈನಾನ್ಸ್ ಕಂಪನಿಯೊಂದರಿಂದ 6 ಲಕ್ಷ ರೂ ಸಾಲ ಪಡೆದಿದ್ದ ಪ್ರೇಮ ಅವರು, ಕಳೆದ 5-6 ವರ್ಷಗಳಿಂದ ಸಾಲದ ಕಂತಿನ ಹಣ ಕಟ್ಟುತ್ತ ಬಂದಿದ್ದರು ಸಹ ಆ ಹಣ ಬಡ್ಡಿಗೆ ಜಮಾ ಆಗಿದೆ ಎಂದು ಹೇಳಿ 6 ಲಕ್ಷ ಹೊಸ ಸಾಲ ಎಂದು ನವೀಕರಿಸಿ ಕೊಂಡು ಉಳಿಕೆ ಬಡ್ಡಿ ಸೇರಿ 8 ಲಕ್ಷ ಕಟ್ಟಬೇಕೆಂದು ಕಂಪನಿಯವರು ಪಟ್ಟು ಹಿಡಿದಿದ್ದರು, ಇದಕ್ಕಾಗಿ ಕಂಪನಿಯವರು ನೋಟೀಸ್ ನೀಡಿದ್ದರು ಎನ್ನಲಾಗಿದೆ.

ಹಣ ಕಟ್ಟಲು ವಿಳಂಬವಾದ ಕಾರಣಕ್ಕೆ ಒಂದು ವಾರದ ಹಿಂದೆ ಕಂಪನಿಯವರು ಈ ಕುಟುಂಬ ವಾಸವಿದ್ದ ಮನೆಯನ್ನು ಸೀಜ್ ಮಾಡಿದ್ದರು. ಕಳೆದ ಒಂದು ವಾರದಿಂದ ಪ್ರೇಮ ಹಾಗೂ ಕುಟುಂಬದವರು ತಮ್ಮ ಸಂಬಂಧಿಕರ ಮನೆಯಲ್ಲಿ ವಾಸವಿದ್ದು ಇದರಿಂದ ಮನನೊಂದ ಪ್ರೇಮ ಅವರು ಮಂಗಳವಾರ ಬೆಳಿಗ್ಗೆ 11.30 ರ ಸಮಯದಲ್ಲಿ ವಿಷ ಸೇವಿಸಿದ್ದು ಅಸ್ವಸ್ಥಗೊಂಡಿದ್ದು ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದರು.ಹಲಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ