Thursday, May 16, 2024

ಪ್ರಾಯೋಗಿಕ ಆವೃತ್ತಿ

ಮಣಿಪುರದಲ್ಲಿ ಮರುಕಳಿಸಿದ ರಕ್ತಪಾತ: ಆದಿವಾಸಿ ಗೀತೆ ರಚನೆಕಾರ ಸೇರಿ 6 ಜನ ಗುಂಡಿಗೆ ಬಲಿ

ಮಣಿಪುರದಲ್ಲಿ ಹಿಂಸಾಚಾರ ಮುಂದುವರೆದಿದ್ದು, ಕುಕಿ ಪ್ರಾಬಲ್ಯದ ಚುರಾಚಂದ್‌ಪುರ ಮತ್ತು ಮೈತಿ ಪ್ರಾಬಲ್ಯದ ಬಿಷ್ಣುಪುರ್ ಜಿಲ್ಲೆಗಳ ಗಡಿಯಲ್ಲಿ ಭುಗಿಲೆದ್ದಿರುವ ಹಿಂಸಾಚಾರದಲ್ಲಿ ಖ್ಯಾತ ಆದಿವಾಸಿ ಗೀತ ರಚನೆಗಾರ- ಸಂಗೀತ ಸಂಯೋಜಕ ಸೇರಿದಂತೆ ಆರು ಮಂದಿ ಬಲಿಯಾಗಿದ್ದಾರೆ. ಈ ಘಟನೆಯಲ್ಲಿ 14 ಜನ ಗಾಯಗೊಂಡಿದ್ದಾರೆ.

ಈ ಗುಂಡಿನ ದಾಳಿ, ಸ್ಫೋಟಗಳು ಮತ್ತು ನಿರಂತರ ಶೆಲ್ಲಿಂಗ್ನಿಂದ, ಆದಿವಾಸಿ ಗೀತೆ “ಐ ಗಾಮ್ ಹಿಲೋ ಹಮ್” ರಚಿಸಿದ್ದ ಎಲ್.ಎಸ್.ಮಂಗ್ಬೋಯ್ ಲುಂಗ್ಡಿಮ್ (42) ಎಂಬ ಗೀತರಚನೆಕಾರ ಮೃತಪಟ್ಟಿದ್ದಾರೆ. ಈ ಮೂಲಕ ಕೆಲ ಸಮಯದವರೆಗೆ ಶಾಂತಿಯುತವಾಗಿದ್ದ ರಾಜ್ಯದಲ್ಲಿ ಮತ್ತೆ ರಕ್ತಪಾತ ಶುರುವಾಗಿದೆ.

ಮಂಗ್ಬೋಯ್ ಲುಂಗ್ಡಿಮ್ ಅವರು ಮೋರ್ಟರ್ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಮಿಜೋರಾಂ ರಾಜಧಾನಿ ಐಜ್ವಾಲ್‌ಗೆ ಚಿಕಿತ್ಸೆಗಾಗಿ ಕರೆ ತೆರುತ್ತಿದ್ದಾಗ ಗುರುವಾರ ಮಧ್ಯರಾತ್ರಿ ಬಳಿಕ 1 ಗಂಟೆಯ ವೇಳೆಗೆ ಅವರು ಕೊನೆಯುಸಿರೆಳೆದಿದ್ದಾರೆ.

ಕೊಯಿರೆಂಗ್ಟೆಕ್- ನರನ್ ಸೇನಿಯಾ ಪ್ರದೇಶದಲ್ಲಿ ನಡೆದ ಶೆಲ್ಲಿಂಗ್ ದಾಳಿಯಲ್ಲಿ ಗಾಯಗೊಂಡಿದ್ದ ರಿಚರ್ಡ್ ಹೆಮ್ ಕೊಲನ್ ಗಯಟೆ (31) ಬೆಳಿಗ್ಗೆ 9 ಗಂಟೆಯ ವೇಳೆಗೆ ಐಜ್ವಾಲ್ ಮೂಲಕ ಗುವಾಹತಿಗೆ ಕರೆದೊಯ್ಯುತ್ತಿದ್ದ ವೇಳೆ ಮೃತಪಟ್ಟರು.

ಈ ವೇಳೆ ಗಡಿಯ ಪಕ್ಕ ನಡೆದ ಗುಂಡಿನ ದಾಳಿಯಲ್ಲಿ ಗ್ರಾಮ ಸ್ವಯಂಸೇವಕರಿಬ್ಬರು ಸಾವಿಗೀಡಾಗಿದ್ದಾರೆ. ಚುರಚಂದನಪುರದ ಕೌಸಂಬಂಗ್ ಎಂಬಲ್ಲಿ ನಡೆದ ಶೆಲ್ಲಿಂಗ್ ದಾಳಿಯಲ್ಲಿ ಎಂಟು ಜನರು ಗಾಯಗೊಂಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!