Thursday, September 19, 2024

ಪ್ರಾಯೋಗಿಕ ಆವೃತ್ತಿ

HSRP ನಂಬರ್‌ ಪ್ಲೇಟ್‌; ಅಳವಡಿಕೆಗೆ ಕಾಲಾವಕಾಶ ವಿಸ್ತರಣೆ

ಬೆಂಗಳೂರು: HSRP ನಂಬರ್‌ ಪ್ಲೇಟ್‌ ಆಳವಡಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಹೊಸ ಆದೇಶವೊಂದನ್ನು ಹೊರಡಿಸಿದೆ.

ಈ ಹಿಂದೆ 2019ರ ಮೊದಲು ನೋಂದಾಯಿಸಿದ ವಾಹನಗಳಿಗೆ hsrp ನಂಬರ್‌ ಪ್ಲೇಟ್ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು, ಹಳೆಯ ನಂಬರ್ ಪ್ಲೇಟ್‌ಗಳನ್ನು ಕಾರು ಕಳ್ಳರು ಟ್ಯಾಂಪರ್ ಮಾಡದಂತೆ ಮತ್ತು ದುರ್ಬಳಕೆ ಮಾಡದಂತೆ ತಡೆಯುವುದು ಇದರ ಹಿಂದಿನ ಉದ್ದೇಶವಾಗಿತ್ತು. HSRP ಸಂಖ್ಯೆಗಳು ಕೇಂದ್ರೀಕೃತ ಡೇಟಾಬೇಸ್‌ನಲ್ಲಿ ಎಂಜಿನ್ ಮತ್ತು ಚಾಸಿಸ್ ಸಂಖ್ಯೆಗಳಂತಹ ವಿವರಗಳನ್ನು ಒಳಗೊಂಡಿರುತ್ತವೆ. ಕದ್ದ ಕಾರನ್ನು ಗುರುತಿಸಲು ಈ ಡೇಟಾ ಸಹಾಯ ಮಾಡುತ್ತದೆ.

ಆದರೆ ಗಡುವು ಮೀರುತ್ತಿದ್ದರೂ ಸಾಕಷ್ಟು ಜನರು ಈ ನಂಬರ್‌ ಪ್ಲೇಟುಗಳನ್ನು ಆಳವಡಿಸಿಕೊಂಡಿರಲಿಲ್ಲ. ಈ ನಿಟ್ಟಿನಲ್ಲಿ ಜನರಿಗೆ ಅನುಕೂಲವಾಗುವಂತೆ ಆಳವಡಿಕೆಗೆ ನೀಡಿದ್ದ ಗಡುವನ್ನು ಮುಂದಕ್ಕೆ ಹಾಕಿ ಸರ್ಕಾರ ಆದೇಶ ಹೊರಡಿಸಿದೆ. ಹೊಸ ಆದೇಶದಂತೆ ಜನರಿಗೆ ಈ ನಂಬರ್‌ ಪ್ಲೇಟುಗಳನ್ನು ಆಳವಡಿಸಿಕೊಳ್ಳಲು ಇನ್ನೂ ಮೂರು ತಿಂಗಳ ಅವಧಿಯನ್ನು ನೀಡಲಾಗಿದೆ.

ಅಧಿಕೃತ ಹೇಳಿಕೆಯ ಪ್ರಕಾರ, ವಾಹನ ತಯಾರಕರು ಸ್ಪರ್ಧಾತ್ಮಕ ಬೆಲೆ ವ್ಯವಸ್ಥೆಯ ಮೂಲಕ ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳ (ಎಚ್‌ಎಸ್‌ಆರ್‌ಪಿ) ಅಧಿಕೃತ ಪೂರೈಕೆದಾರರನ್ನು ನೇಮಿಸಿಕೊಳ್ಳುತ್ತಾರೆ. ನಾಲ್ಕು ಚಕ್ರದ ವಾಹನಗಳಿಗೆ ಎಚ್‌ಎಸ್‌ಆರ್‌ಪಿಗಳ ಬೆಲೆ 400 ರಿಂದ 500 ರೂ.ವರೆಗೆ ಇರಬಹುದು, ಆದರೆ ದ್ವಿಚಕ್ರ ವಾಹನಗಳ ಬೆಲೆ 250 ರಿಂದ 300.5  ಇರುತ್ತದೆ ಎನ್ನಲಾಗಿದೆ

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಈ ಕುರಿತು ಹೇಳಿಕೆ ನೀಡಿ “ವಾಹನಗಳಿಗೆ ಅತಿ ಸುರಕ್ಷತಾ ನೋಂದಣಿ ಫಲಕ ಅಳವಡಿಸಲು ನಿಗದಿ ಮಾಡಿದ್ದ ಗಡುವನ್ನು ಮತ್ತೆ ಮೂರು ತಿಂಗಳು ವಿಸ್ತರಿಸಲಾಗುವುದು” ಎಂದು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!