Friday, May 17, 2024

ಪ್ರಾಯೋಗಿಕ ಆವೃತ್ತಿ

ಹುತ್ತಕ್ಕೆ ಹಾಲೆರೆಯುವ ಬದಲು ಮಕ್ಕಳಿಗೆ ವಿತರಿಸಿ – ಧನಂಜಯ ದರಸಗುಪ್ಪೆ

ಕಲ್ಲು ನಾಗರ -ನಿಜ ನಾಗರದ ಹುತ್ತಕ್ಕೆ ಹಾಲೆರೆಯುವ ಬದಲು ಪ್ರೊಟೀನ್ ಅವಶ್ಯಕತೆ ಇರುವ ಮಕ್ಕಳಿಗೆ- ವೃದ್ಧರಿಗೆ- ದೀನ ದಲಿತರಿಗೆ ಹಾಲನ್ನು ನೀಡುವ ಮೂಲಕ ವಿಶೇಷವಾಗಿ “ನಾಗರ ಪಂಚಮಿ” ಆಚರಿಸಬೇಕೆಂದು ಸಾರ್ವಜನಿಕರಲ್ಲಿ ವಲಯಾಧ್ಯಕ್ಷ ಲ.ಜಿ ಧನಂಜಯ ದರಸಗುಪ್ಪೆ ಮನವಿ ಮಾಡಿದರು

ಮಂಡ್ಯ ನಗರದ ಪ್ರೇರಣಾ ವಿಶೇಷ ಚೇತನ ಶಾಲಾ ಆವರಣದಲ್ಲಿ ನಡೆದ ಸೇವಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನಾಲ್ವಡಿ -ಬೆಳಕು -ಬಸರಾಳು ಲಯನ್ಸ್ ಕ್ಲಬ್ಬುಗಳ ವತಿಯಿಂದ ಸಂಸ್ಥೆಯ ಮಕ್ಕಳಿಗೆ, ಹಾಲು, ಬಿಸ್ಕೆಟ್,ದಾಳಿಂಬೆ, ಕಿತ್ತಳೆ ಹಾಗೂಬಾಳೆ ಮುಂತಾದ ಹಣ್ಣುಗಳನ್ನು ವಿತರಿಸುವ ಮೂಲಕ ನಾಗರ ಪಂಚಮಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.

ಲಯನ್ಸ್ ಜಿಲ್ಲೆ 317-ಜಿ,ಎರಡನೇ ಉಪ -ಜಿಲ್ಲಾ ರಾಜ್ಯಪಾಲ ಲ.ಕೆ ಎಲ್. ರಾಜಶೇಖರ್ ಲಯನ್ಸ್ ವತಿಯಿಂದ ವಿಶಿಷ್ಟ -ವಿನೂತನ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ, ಲಯನ್ಸ್ ಕ್ಲಬ್ಬುಗಳ ವತಿಯಿಂದ ಸ್ನೇಹದಿಂದ ಸೇವೆ ಮಾಡಲಾಗುವುದು ಎಂದರು

ಈ ಸಂದರ್ಭದಲ್ಲಿ ಲಯನ್ಸ್ ಜಿಲ್ಲೆ 317-ಜಿ ಯ ಜಿ ಎಂ ಟಿ ಕೋ -ಅರ್ಡಿನೆಟರ್ ಲ.ಟಿ ನಾರಾಯಣಸ್ವಾಮಿ, ಜಿ ಇ ಟಿ ಕೋ -ಅರ್ಡಿನೆಟರ್ ಲ.ಹನುಮಂತಯ್ಯ, ನಾಲ್ವಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಲ.ಕೆ ಶಿವಲಿಂಗಯ್ಯ, ಬೆಳಕು ಲಯನ್ಸ್ ಕ್ಲಬ್ ಅಧ್ಯಕ್ಷ ಲ.ಎಂ. ಸಿ.ಭಾಸ್ಕರ್, ಬಸರಾಳು ಲಯನ್ಸ್ ಕ್ಲಬ್ ಅಧ್ಯಕ್ಷ ಲ ಪ್ರದೀಪ್, ಲ. ಶಿವಣ್ಣ (ಜಿಲ್ಲಾಧ್ಯಕ ), ಲ. ಡಿ. ಹೆಚ್ ನವೀನ್,ಲ ವಿನಯ್ ಕುಮಾರ್ ಹಾಗೂ ಸಂಸ್ಥೆಯ ಟ್ರಸ್ಟಿ ರವಿಕುಮಾರ್, ಶಿಕ್ಷಕಿ ರಕ್ಷಿತಾ ಆನಂದ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!