✍️ ಆನಂದಿ_ಕಲರ್_ಪದ್ಯಗಳು
ಚಿದಂಬರ ನರೇಂದ್ರ
ಪ್ರೇಮದಲ್ಲಿ
ಏನಾದರೂ ಗಳಿಸಿದ್ದೇನೆಂದರೆ
ಅದು ಮೊದಲೂ ನನ್ನೊಳಗಿತ್ತು.
ಪ್ರೇಮದಲ್ಲಿ
ಏನಾದರೂ ಕಳೆದುಕೊಂಡಿದ್ದೇನೆಂದರೆ
ಅದು ನನ್ನೊಳಗಿರಲಿಲ್ಲ ಯಾವತ್ತೂ.
ಗಳಿಸುವುದು ಕಳೆದುಕೊಳ್ಳುವುದು ಎಲ್ಲ
ದಲ್ಲಾಳಿಗಳ ಭಾಷೆ.
ಪ್ರೇಮದ ಮಾರುಕಟ್ಟೆಯಲ್ಲಿ
ಕೊಟ್ಟದಕ್ಕೆ ರಸೀದಿಯಿಲ್ಲ,
ಪಡೆದುಕೊಂಡದಕ್ಕೆ ಲೆಕ್ಕವಿಲ್ಲ.
ಆದರೂ ಸಪ್ಪೆಯಾದಂತೆಲ್ಲ ಪ್ರೀತಿ
ಇರಿಯುತ್ತಾರೆ ಪ್ರೇಮಿಗಳು
ಒಬ್ಬರನ್ನೊಬ್ಬರು
ಮತ್ತು ಹಾತೊರೆಯುತ್ತಾರೆ
ನೋವಿನ ಚಿತ್ಕಾರದಲ್ಲಿ
ಸಾನುರಾಗ ಕಂಡುಕೊಳ್ಳುವ
ಹುಚ್ಚು ಸಾಹಸಕ್ಕೆ
ಸವಾಲಾಗುತ್ತಾರೆ ಜಗತ್ತಿಗೆ ಮತ್ತು
ಕೊನೆಗೆ ತಮಗೆ ತಾವೇ.