Friday, November 20, 2026

ಪ್ರಾಯೋಗಿಕ ಆವೃತ್ತಿ

ನಾಗಮಂಗಲ| ಐಸ್’ಕ್ರೀಮ್ ವಾಹನ ಅಡ್ಡಗಟ್ಟಿ 1.90 ಲಕ್ಷ ರೂ. ದರೋಡೆ

ಹಾಡಹಗಲೇ ಐಸ್’ಕ್ರೀಮ್ ಡೆಲಿವರಿ‌ ವಾಹನ ಅಡ್ಡಗಟ್ಟಿ ದರೋಡೆ ಮಾಡಿರುವ ಘಟನೆ ಮಂಡ್ಯ ತಾಲ್ಲೂಕಿನ ನರಗಲು ಗೇಟ್ ಬಳಿ ನಡೆದಿದ್ದು ತಡವಾಗಿ ವರದಿಯಾಗಿದೆ.

ಈ ಕುರಿತು ಭಾನುವಾರ ಬೆಳಿಗ್ಗೆ ಬಸರಾಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಅಶೋಕ್ ಲೈ ಲ್ಯಾಂಡ್ ವಾಹನದಲ್ಲಿ ಆದಿಚುಂಚನಗಿರಿಗೆ ಐಸ್’ಕ್ರೀಮ್ ಡೆಲಿವರಿ ಮಾಡಿ, ಮಂಡ್ಯಕ್ಕೆ ವಾಪಸ್ ಬರುತ್ತಿರುವ ವೇಳೆ 2 ಬೈಕ್’ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳ ತಂಡ ವಾಹನದ ಗಾಜು ಹೊಡೆದು ವಾಹನದಲ್ಲಿದ್ದವರ ಮೇಲೆ ಕಾರದ ಪುಡಿ ಎರಚಿ ಲಾಂಗ್’ನಿಂದ ಬೆದರಿಸಿ ₹ 1.90 ಲಕ್ಷ ಹಣ ಹಾಗೂ ಹೆಲ್ಪರ್ ವರುಣ್ ಕುಮಾರ್ ಎಂಬುವವರ ಮೊಬೈಲ್ ಕಸಿದು ನಾಗಮಂಗಲ ಪಟ್ಟಣ ಕಡೆಗೆ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ದೂರು ದಾಖಲಿಸಿಕೊಂಡಿರುವ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ