Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಹೊನಗಾನಹಳ್ಳಿ ಬಳಿ ತಲೆಯೆತ್ತಿದ ಶಾಸಕ ರವಿಕುಮಾರ್ ಬಡಾವಣೆ

ಮಂಡ್ಯ ತಾಲ್ಲೂಕಿನ ಹೊನಗಾನಹಳ್ಳಿ ಗ್ರಾಮದ ಬಳಿ ಮಂಡ್ಯ ಶಾಸಕ ರವಿಕುಮಾರ್ ಹೆಸರಿನಲ್ಲಿ ಬಡಾವಣೆಯೊಂದು ತಲೆಯೆತ್ತಿದೆ, ನೂತನ ಬಡಾವಣೆಯ ನಿವೇಶನದಾರರಿಗೆ ಸ್ವತಃ ಶಾಸಕ ರವಿಕುಮಾರ್ ಹಕ್ಕುಪತ್ರ ಹಾಗೂ ಪಹಣಿ ವಿತರಣೆ ಮಾಡಿದರು.

ಖಾಸಗಿ ಬಡಾವಣೆಯಲ್ಲಿ ನಿರಾಶ್ರಿತ ಎಂಟು ಬಡ ಕುಟುಂಬಗಳಿಗೆ ಉಚಿತವಾಗಿ ನಿವೇಶನ ವಿತರಣೆ ಮಾಡಿದರು. ಖಾಸಗಿ ಒಡೆತನದಲ್ಲಿ ಈ ರೀತಿ ಸಮಾಜಮುಖಿ ಕಾರ್ಯ ಮಾಡಿರುವುದು ಶ್ಲಾಘಿಸುವ ವಿಚಾರ, ಇದೇ ಮಾದರಿಯಲ್ಲಿ ಎಲ್ಲಾ ಗ್ರಾಮದ ಮುಖಂಡರು ನಡೆದುಕೊಂಡರೆ ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಲಿದೆ ಎಂದರು.

ಪ್ರತಿ ತಿಂಗಳು ಐದು ಕೆಜಿ ಅಕ್ಕಿ ಮತ್ತು ಹಣವನ್ನು ನೀಡಲಾಗುತ್ತಿತ್ತು ಇನ್ನು ಮುಂದೆ 10 ಕೆಜಿ ಅಕ್ಕಿಯನ್ನು ವಿತರಣೆ ಮಾಡಲಾಗುವುದು ಅದಕ್ಕೆ ಶೀಘ್ರದಲ್ಲೇ ಚಾಲನೆ ನೀಡಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಬಡವರ ಪರ ಜನಪದ ಕಾರ್ಯ ಮಾಡುವುದು, ವಿರೋಧಿಗಳು ಯಾರೇ ಏನೇ ಮಾತನಾಡಿದರು, ನಾವು ಬಡವರ ಪರ ಕೆಲಸ ಮಾಡುತ್ತೇವೆ. ನನ್ನ ಹೆಸರಿನಲ್ಲಿ ಬಡಾವಣೆ ಮಾಡಿದ್ದೀರಿ, ಹಾಗಾಗಿ ಮನೆ ಮಾಡಿಕೊಡುವುದು ನನ್ನ ಜವಾಬ್ದಾರಿ ಹಾಗೂ ಬಡಾವಣೆ ಬಳಿ ಬಸ್ ಸ್ಟಾಂಡ್ ಬೇಕು ಎಂದು ಕೇಳಿದ್ದೀರಿ, ಅದಕ್ಕೆ 5 ಲಕ್ಷ ಮಂಜೂರು ಮಾಡಿದ್ದೇನೆ, ಎಸಿಪಿ ಗ್ರ್ಯಾಂಟ್ ನಲ್ಲಿ 10 ಲಕ್ಷಕ್ಕೆ ನೀವು ಬೇಡಿಕೆ ಇಟ್ಟಿದ್ದೀರಿ, ಆದರೆ ನಾನು 25 ಲಕ್ಷ ರೂ ನೀಡುತ್ತಿದ್ದೇನೆ ಎಂದು ತಿಳಿಸಿದರು.

ವಿವಿಧೆಡೆ ನಿವೇಶನ ವಿತರಣೆ

ಈಗಾಗಲೇ ಜಿಲ್ಲಾಧಿಕಾರಿಗಳು ಹಾಗೂ ತಹಸೀಲ್ದಾರ್ ನೇತೃತ್ವದಲ್ಲಿ ಸಭೆ ನಡೆಸಿ ಇಡೀ ಕ್ಷೇತ್ರದಲ್ಲಿ 25 ಕಡೆ ಸರ್ಕಾರಿ ಸ್ಥಳವನ್ನು ಗುರುತಿಸಿ ಬಡ ಕುಟುಂಬಗಳು ಮತ್ತು ನಿವೇಶನ ವಂಚಿತರಿಗೆ ಹಂಚುವ ಕಾರ್ಯಕ್ಕೆ ಮುಂದಾಗಲಾಗಿದೆ. ತಂಗಳಗೆರೆ ಗ್ರಾಮದಲ್ಲಿ 300 ಕುಟುಂಬಗಳಿಗೆ ಮನೆಯನ್ನು ಹಂಚಲಾಗುವುದು, ಕೆರಗೋಡು ಗ್ರಾಮದಲ್ಲಿ 50 ಕುಟುಂಬಗಳಿಗೆ ನಿವೇಶನ ನೀಡಲಾಗಿದೆ. ಮಂಡ್ಯ ನಗರದಲ್ಲಿ 75 ವರ್ಷಗಳಿಂದ ಆಗದ ನ್ಯೂ ತಮಿಳು ಕಲೋನಿಯ 265 ಜನಕ್ಕೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ ಎಂದು ಶಾಸಕ ರವಿಕುಮಾರ್ ಹೇಳಿದರು.

ಲೇಬರ್ ಕಾಲೋನಿ ಮತ್ತು ಮುಸ್ಲಿಂ ಬ್ಲಾಕ್ ನಲ್ಲಿ 600 ಜನರಿಗೆ ಹಕ್ಕುಪತ್ರ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಈ ಹಕ್ಕುಪತ್ರ ವಿತರಣಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳನ್ನ ಆಹ್ವಾನ ಮಾಡಿ ವಿತರಣೆ ಮಾಡಲಾಗುವುದು. ನನ್ನ ಶಾಸಕ ಅವಧಿಯಲ್ಲಿ ಆದಷ್ಟು ಬಡ ಕುಟುಂಬಗಳಿಗೆ ನಿವೇಶನವನ್ನು ನೀಡುವುದು ನನ್ನ ಉದ್ದೇಶವಾಗಿದೆ ಎಂದರು. ಶಾಸಕರ ಜನಪರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಾತನೂರು ಗ್ರಾಮ ಪಂಚಾಯಿತಿ ಸದಸ್ಯರಾದ ಎಸ್.ಎನ್.ವೆಂಕಟೇಶ್, ಪ್ರಕಾಶ್, ಸುರೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲೇಶ್, ಮುಖಂಡರಾದ ಕೋನಪ್ಪ ಹೊನಗಾನಹಳ್ಳಿ ಗ್ರಾಮಸ್ಥರು ಸೇರಿದಂತೆ ಇತರರು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ