Wednesday, April 17, 2024

ಪ್ರಾಯೋಗಿಕ ಆವೃತ್ತಿ

ನಿಗಮ ಮಂಡಳಿಗೆ ನೇಮಕ| ಗೊಂದಲಕ್ಕೆ ಕಾರಣವಾದ 2 ಪಟ್ಟಿಗಳು; ನರೇಂದ್ರಸ್ವಾಮಿ ಹುದ್ದೆ ನಿರಾಕರಿಸಿದರೆ ?

ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನ ಪಡೆಯುವ ನಿಟ್ಟಿನಲ್ಲಿ ಕರ್ನಾಟಕ ಕಾಂಗ್ರೆಸ್‌ ಭರ್ಜರಿ ತಯಾರಿ ನಡೆಸಿದ್ದು, ಅಳೆದು ತೂಗಿ ನಿಗಮ ಮಂಡಳಿಗಳ ಪಟ್ಟಿ ಬಿಡುಗಡೆ ಮಾಡಿದೆ. ಆದರೆ ಏಕಕಾಲದಲ್ಲಿ 2 ಪಟ್ಟಿಗಳು ಬಿಡುಗಡೆಯಾಗಿದ್ದು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸೇರಿದಂತೆ ಸಾರ್ವಜನಿಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ.

ಒಂದು ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ ಸಹಿ ಮಾಡಿದ್ದು 36 ಹೆಸರುಗಳನ್ನು ಅಂತಿಮ ಮಾಡಲಾಗಿದೆ, ಈ ಪಟ್ಟಿಯು ಅಧಿಕೃತವಲ್ಲ ಎನ್ನಲಾಗಿದೆ. ಮತ್ತೊಂದು ಪಟ್ಟಿಯಲ್ಲಿ 34 ಶಾಸಕರ ಹೆಸರನ್ನು ಅಂತಿಮ ಮಾಡಲಾಗಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧೀನ ಕಾರ್ಯದರ್ಶಿ ಪಿ.ಎಸ್.ನಾಗ ಪ್ರಶಾಂತ್ ಸಹಿ ಮಾಡಿದ್ದು, ಈ ಪಟ್ಟಿಯೂ ಅಧಿಕೃತ ಎಂದು ತಿಳಿದು ಬಂದಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಶಾಸಕ ಎಂ.ಬಿ.ರಮೇಶ್ ಬಾಬು ಬಂಡೀಸಿದ್ಧೇಗೌಡ ಅವರಿಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಚೆಸ್ಕಾಂ) ಅಧ್ಯಕ್ಷ ಸ್ಥಾನ ನೀಡಲಾಗಿದೆ. ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಅವರಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ನೀಡಲು ವರಿಷ್ಟರು ಸಿದ್ದವಿದ್ದರೂ, ಅದು ತಮಗೆ ಬೇಡ ಎಂದು ಶಾಸಕ ನರೇಂದ್ರಸ್ವಾಮಿ ತಿಳಿಸಿದ್ದಾರೆ, ಸಚಿವರ ಸ್ಥಾನದ ಮೇಲೆ ಕಣ್ಣಿಟ್ಟಿರುವ ಶಾಸಕ ನರೇಂದ್ರಸ್ವಾಮಿ ಅವರು ನಿಗಮ ಮಂಡಳಿ ಅಧ್ಯಕ್ಷ ಸ್ಥಾನದಿಂದ ದೂರ ಉಳಿದಿದ್ದಾರೆಂದು ತಿಳಿದು ಬಂದಿದೆ

ನಿಗಮ ಮಂಡಳಿಗಳಿಗೆ ನೇಮಕವಾದ ಅಧಿಕೃತ ಪಟ್ಟಿ 


Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!