Thursday, September 19, 2024

ಪ್ರಾಯೋಗಿಕ ಆವೃತ್ತಿ

ಅಜ್ಞಾನ ಮತ್ತು ಮೋಹ ತ್ಯಜಿಸಲು ಭಗವಂತನಿಗೆ ಶರಣಾಗಬೇಕು: ಚುಂಚಶ್ರೀ

ಪ್ರತಿಯೊಬ್ಬ ಮನುಷ್ಯ ತನ್ನಲ್ಲಿರುವ ಅಜ್ಞಾನ ಮತ್ತು ಮೋಹವನ್ನು ತ್ಯಜಿಸಬೇಕಾ ದರೆ ಭಗವಂತನಲ್ಲಿ ಶರಣಾಗಬೇಕು. ಆ ಮೂಲಕ ಮಾನವ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬೇಕೆಂದು ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನುಡಿದರು.

ಮಂಡ್ಯ ತಾಲ್ಲೂಕಿನ ಚಂದಗಾಲು ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಮಾಸ್ತಮ್ಮ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ಮನುಷ್ಯನಲ್ಲೂ ಹಣ ಮತ್ತು ಅಧಿಕಾರದ ವ್ಯಾಮೋಹ ಮೇಳೈಸುತ್ತಿರುವುದು ಸುಜ್ಞಾನದ ಸಂಸ್ಕೃತಿಯಲ್ಲ. ಇವೆರೆಡರ ವ್ಯಾಮೋಹಕ್ಕೆ ಒಳಗಾಗಿರುವ ಮನುಷ್ಯನಲ್ಲಿ ಭಗವಂತನ ಸ್ಮರಣೆ ಕ್ಷೀಣಿಸುತ್ತಿರುವುದು ಸರಿಯಲ್ಲ ಎಂದು ತಿಳಿಸಿದರು.

ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ,
ಆದಿಚುಂಚನಗಿರಿ ಮಠವನ್ನು ಅಭಿವೃದ್ಧಿ ಪರ್ವದೆಡೆ ಕೊಂಡೊಯ್ದ ಕೀರ್ತಿ ಶಿವೈಕ್ಯ ಬಾಲಗಂಗಾಧರನಾಥ ಶ್ರೀಗಳಿಗೆ ಸಲ್ಲುತ್ತದೆ. ಅದೇ ದಾರಿಯಲ್ಲಿ ಶ್ರೀಮಠದ ಅಭ್ಯುದಯಕ್ಕೆ ನಿರ್ಮಲಾನಂದನಾಥ ಶ್ರೀಗಳು ಮುಂದಾಗಿರುವುದು ನಮ್ಮೆಲ್ಲರ ಭಾಗ್ಯ ಎಂದರು.

ವೇದಿಕೆಯಲ್ಲಿ ಸಾಫ್ಟವೇರ್ ಉದ್ಯಮಿ ಭರತ್, ಪ್ರಗತಿಪರ ರೇಷ್ಮೆ ಬೆಳೆಗಾರ ಕೀರಣಗೆರೆ ಜಗದೀಶ್, ಜಯದೇವ ಹೃದ್ರೋಗ ಸಂಸ್ಥೆಯ ಡಾ.ಸಿ.ಜೆ.ದೇವ ರಾಜ್ ಇತರ ನ್ನು ಅಭಿನಂದಿಸಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಗ್ರಾಮದ ಮುಖಂಡ ಸಿ.ಜೆ.ನಾಗರಾಜು, ಚಾ.ಮ.ಉಮೇಶ್ ಬಾಬು ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!