Thursday, November 19, 2026

ಪ್ರಾಯೋಗಿಕ ಆವೃತ್ತಿ

ಅಕ್ರಮ ಖಾತೆ ವಿರೋಧಿಸಿ ಶ್ರಮಿಕ ನಿವಾಸಿಗಳ ಪ್ರತಿಭಟನೆ

ಮಂಡ್ಯ ನಗರದ ಹಾಲಹಳ್ಳಿ ನ್ಯೂ ತಮಿಳ್ ಕಾಲೋನಿಯ ನಿವಾಸಿಗಳ ಜಾಗವನ್ನು ಅಕ್ರಮವಾಗಿ ಶ್ರೀಮಂತರಿಗೆ ಖಾತೆ ಮಾಡಿ ಕೊಟ್ಟಿರುವುದನ್ನು ರದ್ದು ಮಾಡಬೇಕೆಂದು ಆಗ್ರಹಿಸಿ ಶ್ರಮಿಕ(ಸ್ಲಂ)ನಿವಾಸಿಗಳು ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಮಂಡ್ಯ ಜಿಲ್ಲಾ ಶ್ರಮಿಕ ನಿವಾಸಿಗಳ ಒಕ್ಕೂಟ, ಮಹಿಳಾ ಮುನ್ನಡೆ, ಕರ್ನಾಟಕ ಜನಶಕ್ತಿ ನೇತೃತ್ವದಲ್ಲಿ ಸಿಲ್ವರ್ ಜ್ಯುಬಿಲಿ ಪಾರ್ಕ್ ನಿಂದ ಮೆರವಣಿಗೆ ಮೂಲಕ ನಗರಸಭೆಗೆ ಮುತ್ತಿಗೆ ಹಾಕಿದರು.

ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಸಿದ್ದರಾಜು ಮಾತನಾಡಿ, ನ್ಯೂ ತಮಿಳು ಕಾಲೋನಿಯ 1.39 ಎಕರೆ ಜಾಗವನ್ನು 1979 ರಲ್ಲಿ ಸ್ಲಂ ಜಾಗ ಎಂದು ಘೋಷಣೆ ಮಾಡಲಾಗಿದೆ. ಆದರೆ ಅಲ್ಲಿಯ ನಿವಾಸಿಗಳಿಗೆ ಇನ್ನೂ ಹಕ್ಕು ಪತ್ರಗಳಾಗಲಿ ವಾಸಕ್ಕೆ ಯೋಗ್ಯವಾದ ಮನೆಗಳಾಗಲಿ ಪಡೆದುಕೊಳ್ಳಲು ಸಾಧ್ಯವಾಗಿಲ್ಲ.ಸ್ಲಂ ಎಂದು ಘೋಷಣೆ ಆಗಿದ್ದರೂ ನಗರಸಭೆ ಅಧಿಕಾರಿಗಳು ಶ್ರೀಮಂತರ ಪರವಾಗಿ ನಿಂತು 34 ಅಕ್ರಮ ಖಾತೆಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದರು.

1979 ರಲ್ಲಿ ಸ್ಲಂ ಜನರಿಗೆಂದು ಘೋಷಣೆಯಾದ ಜಾಗವನ್ನು,1983 ರಲ್ಲಿ ನಗರಸಭೆ ವತಿಯಿಂದ ಅಲ್ಲಿ ವಾಸವಿಲ್ಲದ 34 ಜನರಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದೆ,ಇದರಿಂದಲೇ ಕಾಣಬಹುದು ಬಡವರ ಭೂಮಿಯನ್ನು ಕಸಿದು ಶ್ರೀಮಂತರಿಗೆ ನೀಡುವ ಹುನ್ನಾರದಲ್ಲಿ ಅಧಿಕಾರಿಗಳೆ ದಳ್ಳಾಳಿಗಳ ರೀತಿ ಕೆಲಸ ಮಾಡುತ್ತಿದ್ದಾರೆ ಎಂದರು.

ನಗರಸಭೆ ಅಧಿಕಾರಿಗಳ ಇಂತಹ ಧೋರಣೆಯನ್ನು ಎಂದಿಗೂ ಸಹಿಸಲು ಸಾಧ್ಯವಿಲ್ಲ, ಈಗಾಗಿ ಇದನ್ನು ಸರಿಪಡಿಸಬೇಕು. ಅಕ್ರಮ ಖಾತೆಯನ್ನು ಈ ಕೂಡಲೇ ರದ್ದು ಪಡಿಸಿ ಅಲ್ಲಿನ ನಿವಾಸಿಗಳಿಗೆ ಹಕ್ಕು ಪತ್ರ ಮತ್ತು ವಸತಿಯ ಸೌಲಭ್ಯವನ್ನು ಕಲ್ಪಿಸಬೇಕೆಂದು ಒತ್ತಾಯಿಸಿದರು.

ಈಗಾಗಲೇ ಹಲವಾರು ಹೋರಾಟಗಳನ್ನು ಮಾಡಿ ನೂರಾರು ಹಕ್ಕೊತ್ತಾಯಗಳನ್ನು ನೀಡಿದರು ಸಹ ಅಕ್ರಮ ಖಾತೆ ರದ್ದಾಗಿಲ್ಲ. ಸರಿಪಡಿಸದೆ ನಿರ್ಲಕ್ಷ್ಯ ತೋರಿದರೆ ಶ್ರಮಿಕ ನಿವಾಸಿಗಳೊಂದಿಗೆ ನಗರಸಭೆಗೆ ಬೀಗ ಹಾಕುವುದಾಗಿ ಎಚ್ಚರಿಕೆ ನೀಡಿದರು.

ಮಳೆಯ ಕಾರಣದಿಂದಾಗಿ ಅಲ್ಲಿ ವಾಸಿಸುತ್ತಿರುವ ಜನರಿಗೆ ಸರಿಯಾದ ಮೂಲಭೂತ ಸೌಲಭ್ಯ ಕಲ್ಪಿಸಿ ಕೊಡಬೇಕು ಎಂಬುದು ಆಗ್ರಹಿಸಿದರು.

ಶ್ರಮಿಕ ನಿವಾಸಿಗಳ ಒಕ್ಕೂಟದ ಅಧ್ಯಕ್ಷ ಪ್ರಕಾಶ್,ಮಹಿಳಾ ಮುನ್ನಡೆಯ ಪೂರ್ಣಿಮಾ,ನಿಂಗಮ್ಮ,ಮಾರಿ ಸೇರಿದಂತೆ ನೂರಾರು ಶ್ರಮಿಕ ನಿವಾಸಿಗಳಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

1 COMMENT

  1. ಶ್ರಮಿಕ ನಿವಾಸಿಗಳ ವೋರಾಟ ಸರಿಯಾಗಿದೆ.ಆದರೆ ಒಂದು ಮಾಹಿತಿ ಹಂಚಿಕೊಳ್ಳುತ್ತೇನೆ.ನ್ಯೂ ತಮಿಳು ಕಾಲೋನಿ ಸೇರಿದಂತೆ ಇಡೀ ಪ್ರದೇಶ ಹಾಲಹಳ್ಳಿ ಕೆರೆ ಪ್ರದೇಶವಾಗಿದ್ದು ಕೆರೆ ಒಣಗಿಸ ನಂತರ ಸಾಮಾಜಿಕ ಅರಣ್ಯ ಬೆಳೆಸಲು ಈ ಸ್ಥಳವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ.ಈ ನಡುವೆ ನಗರಸಭೆ ಅಕ್ರಮವಾಗಿ ಕೆರೆ ಜಾಗವನ್ನು ಅಕ್ರಮ ಮಂಜೂರಾತಿ ಮಾಡಿದೆ.ನಗರಸಭೆಗೆ ಯಾವುದೇ ಮಾಲೀಕತ್ವ ಇಲ್ಲವಾಗಿದೆ.ಗುರುಮಠ ಸ್ಲಂ ಸಹ ಹೊಸಳ್ಳಿ ಕೆರೆಯಾಗಿದ್ದು ೨೪ಎಕರೆ ಕೆರೆಯನ್ನು ಸಾಮಾಜಿಕ ಅರಣ್ಯಕ್ಮಾಗಿ ಅರಣ್ಯ ಇಲಾಖೆಗೆ ವರ್ಗಾವಾಗಿದೆ.ಈ ಕುರಿತು ಪ್ರಜಾವಾಣಿಯಲ್ಲಿ ಲೇಖನ ಪ್ರಕಟವಾಗಿದೆ.ಈ ಕುರಿತು ಆಸಕ್ತಿ ಇದ್ದರೆ ಒಂದೊಳ್ಳೆ ಸ್ಟೋರಿ ಮಾಡಬಹುದು ನಿಮ್ಮ ವರದಿಗಾರರ ಗಮನ ಸೆಳೆಯಿರಿ

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ