Friday, September 20, 2024

ಪ್ರಾಯೋಗಿಕ ಆವೃತ್ತಿ

ದೇಶದಲ್ಲಿ ಕಾಂಗ್ರೆಸ್ ಗ್ಯಾರಂಟಿ ಜಾರಿ| ಜುಲೈ 5ರಂದಲೇ ಬಡ ಮಹಿಳೆಯರ ಖಾತೆಗೆ ₹8,500: ರಾಹುಲ್ ಗಾಂಧಿ

ಮಹಾಲಕ್ಷ್ಮೀ ಯೋಜನೆ ದೇಶದಲ್ಲಿರುವ ಬಡ ಮಹಿಳೆಯರ ಬ್ಯಾಂಕ್ ಖಾತೆಗೆ ಜುಲೈ 5ರಂದು 8,500 ರೂಪಾಯಿ ಜಮೆ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ನಾಯಕ, ವಯನಾಡು ಸಂಸದ ರಾಹುಲ್ ಗಾಂಧಿ ಘೋಷಿಸಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ರಾಹುಲ್ ಗಾಂಧಿ ಕಾಂಗ್ರೆಸ್‌ ಗ್ಯಾರಂಟಿಗಳಲ್ಲಿ ಒಂದಾದ ವಾರ್ಷಿಕವಾಗಿ ಬಡ ಮಹಿಳೆಯರಿಗೆ ಒಂದು ಲಕ್ಷ ರೂಪಾಯಿ ನೀಡುವ ಮಹಾಲಕ್ಷ್ಮೀ ಯೋಜನೆಯ ಪ್ರಕ್ರಿಯೆ ಯಾವ ರೀತಿ ನಡೆಯಲಿದೆ ಎಂದು ವಿವರಿಸಿದರು.

“ದೇಶದಲ್ಲಿರುವ ಬಡವರ ಪಟ್ಟಿಯನ್ನು ಸಿದ್ಧಪಡಿಸಲಾಗುವುದು. ಪ್ರತಿ ಬಡ ಕುಟುಂಬದಿಂದ ಮಹಿಳೆಯ ಹೆಸರನ್ನು ಆಯ್ಕೆ ಮಾಡಲಾಗುವುದು. ಜುಲೈ 5ರಂದು ದೇಶದ ಕೋಟಿಗಟ್ಟಲೆ ಬಡ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ 8,500 ರೂಪಾಯಿ ಮೊತ್ತವನ್ನು ಜಮೆ ಮಾಡಲಾಗುವುದು” ಎಂದು ತಿಳಿಸಿದ್ದಾರೆ.

“>

 

“ಜುಲೈನಿಂದ ಆಗಸ್ಟ್‌ವರೆಗೆ, ಹೀಗೆ ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್, ಡಿಸೆಂಬರ್‌ನಲ್ಲಿ ‘ಟಖಾ ಟಖ್, ಟಖಾ ಟಖ್’ ಎಂದು ನಿಮ್ಮ ಖಾತೆಗೆ ಹಣ ಜಮೆಯಾಗುವುದು ಮುಂದುವರಿಯಲಿದೆ” ಎಂದು ಹೇಳಿದ್ದಾರೆ.

“ಈ ಯೋಜನೆಯ ಮೊತ್ತವನ್ನು ನಾವು ಜಮೆ ಮಾಡಿದಾಗ ಭಾರತದ ಮಾಧ್ಯಮಗಳು ‘ಇಂಡಿಯಾ ಒಕ್ಕೂಟ ಬಡವರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿ ಅವರನ್ನು ಹಾಳು ಮಾಡುತ್ತಿದೆ’ ಎಂದು ಹೇಳಬಹುದು. ಮಾಧ್ಯಮಗಳು ಹೆಚ್ಚು ಮಾತನಾಡಿದರೆ ನಾವು ಈ ಮೊತ್ತವನ್ನು ಡಬಲ್ ಮಾಡುತ್ತೇವೆ ಎಂದು ಪ್ರತ್ಯುತ್ತರ ನೀಡುತ್ತೇವೆ” ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!