Friday, October 18, 2024

ಪ್ರಾಯೋಗಿಕ ಆವೃತ್ತಿ

ಲೋಕಸಭಾ ಚುನಾವಣೆ| ಬಿಜೆಪಿಯ ಪ್ರಮುಖ ನಾಯಕರು ಪಡೆದ ಮತಗಳೆಷ್ಟು ಗೊತ್ತಾ ?

ಅಚ್ಚರಿಯ ತಿರುವಿನಲ್ಲಿ, ಭಾರತೀಯ ಜನತಾ ಪಕ್ಷ (ಬಿಜೆಪಿ) ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭೆ ಚುನಾವಣೆಯಲ್ಲಿ 240 ಸ್ಥಾನಗಳನ್ನು ಗಳಿಸಿತ್ತು. ಆದರೆ ಬಿಜೆಪಿ 2019 ರಲ್ಲಿ 303 ಸ್ಥಾನಗಳನ್ನು ಗೆದ್ದು ಬೀಗಿತ್ತು. ಈ ಚುನಾವಣೆಯಲ್ಲಿ 60ಕ್ಕೂ ಹೆಚ್ಚು ಸ್ಥಾನ ಕುಸಿತ ಕಂಡಿರಿವುದು ಆ ಪಕ್ಷದ ನಾಯಕರ ಕಮಾಂಡಿಂಗ್ ಕಾರ್ಯಕ್ಷಮತೆ ಗಣನೀಯ ಕುಸಿತವಾಗಿರುವುದನ್ನು ಸೂಚಿಸುತ್ತದೆ.

ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸಹ ತನ್ನ ಒಟ್ಟಾರೆ ಲೆಕ್ಕಾಚಾರದಲ್ಲಿ ಇಳಿಕೆ ಕಂಡಿದೆ. 2019 ರಲ್ಲಿ 353 ಸ್ಥಾನಗಳಿಗೆ ಹೋಲಿಸಿದರೆ 292 ಕ್ಷೇತ್ರಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕೇಸರಿ ಪಕ್ಷವು ಕೇಂದ್ರದಲ್ಲಿ ಮತ್ತೊಮ್ಮೆ ಸರ್ಕಾರವನ್ನು ರಚಿಸುವ ನಿರೀಕ್ಷೆಯಲ್ಲಿರುವುದರಿಂದ, ಈ ಚುನಾವಣೆಯಲ್ಲಿ ಬಿಜೆಪಿ ತಾರೆಯರು ಹೇಗೆ ಕಾರ್ಯನಿರ್ವಹಿಸಿದರು ಎಂಬುದನ್ನು ನೋಡಬಹುದು.

1. ನರೇಂದ್ರ ಮೋದಿ: ವಾರಣಾಸಿಯ ಬಿಜೆಪಿ ಅಭ್ಯರ್ಥಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ವಾರಣಾಸಿ ಲೋಕಸಭಾ ಕ್ಷೇತ್ರವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ, ಆದರೆ ಗೆಲುವು ಸಾಧಿಸಿರುವುದು ಕಡಿಮೆ ಮತಗಳ ಅಂತರದಲ್ಲಿ ಎಂಬುದು ಗಮನಾರ್ಹ ವಿಚಾರವಾಗಿದೆ. ಈ ಲೋಕಸಭೆ ಚುನಾವಣೆಯಲ್ಲಿ ಒಟ್ಟು 6.12 ಲಕ್ಷ ಮತಗಳನ್ನು ಗಳಿಸಿದ ಮೋದಿ, ಕಾಂಗ್ರೆಸ್‌ನ ಅಜಯ್ ರೈ ವಿರುದ್ಧ 1.52 ಲಕ್ಷ ಮತಗಳ ಅಂತರದಲ್ಲಷ್ಟೇ ಗೆಲುವು ಕಂಡಿದ್ದಾರೆ.

2. ಅಮಿತ್ ಶಾ: ಅಮಿತ್ ಶಾ ಗುಜರಾತ್‌ನ ಗಾಂಧಿನಗರ ಲೋಕಸಭಾ ಸ್ಥಾನವನ್ನು 7.44 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ. ಇದು ಈ ಚುನಾವಣೆಯಲ್ಲಿ ಅತಿ ಹೆಚ್ಚು ಬಹುಮತ ಪಡೆದ ಅಭ್ಯರ್ಥಿಯ ದಾಖಲೆಯಾಗಿದೆ. ಶಾ 2019 ಗೆಲುವಿನ ಅಂಕಿ-ಅಂಶಗಳಿಗಿಂತ ಹೆಚ್ಚು ಮತಗಳನ್ನು ಗಳಿಸಿಕೊಂಡಿದ್ದಾರೆ.

3. ಶಿವರಾಜ್ ಸಿಂಗ್ ಚೌಹಾಣ್: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಧ್ಯಪ್ರದೇಶದ ವಿದಿಶಾ ಲೋಕಸಭಾ ಕ್ಷೇತ್ರದಿಂದ 8.21 ಲಕ್ಷ ಮತಗಳಿಂದ ಗೆದ್ದಿದ್ದಾರೆ, ಈ ಕ್ಷೇತ್ರದಿಂದ ಅವರು ಆರನೇ ಬಾರಿ ವಿಜಯಿಶಾಲಿಯಾಗಿದ್ದಾರೆ. ಅವರ ಸಮೀಪದ ಪ್ರತಿಸ್ಪರ್ಧಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಪ್ರತಾಪ್ ಭಾನು ಶರ್ಮಾ 2.95 ಲಕ್ಷ ಮತಗಳನ್ನು ಪಡೆದಿದ್ದಾರೆ

4. ಜ್ಯೋತಿರಾದಿತ್ಯ ಸಿಂಧಿಯಾ: ಮಧ್ಯಪ್ರದೇಶದ ಗುಣ ಲೋಕಸಭಾ ಕ್ಷೇತ್ರದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ತಮ್ಮ ಪ್ರತಿಸ್ಪರ್ಧಿ ಮತ್ತು ಕಾಂಗ್ರೆಸ್ ನಾಯಕ ಯದ್ವೇಂದ್ರ ರಾವ್ ದೇಶರಾಜ್ ಸಿಂಗ್ ವಿರುದ್ಧ 5.4 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ. ಸಿಂಧಿಯಾ 9.23 ಲಕ್ಷ ಮತಗಳನ್ನು ಗಳಿಸಿ ಜಯಭೇರಿ ಭಾರಿಸಿಸಿದ್ದಾರೆ.

5. ಪಿಯೂಷ್ ಗೋಯಲ್: ಮುಂಬೈ ಉತ್ತರ ಕ್ಷೇತ್ರದಿಂದ ಪಿಯೂಷ್ ಗೋಯಲ್ ತಮ್ಮ ಸಮೀಪದ ಪ್ರತಿಸ್ಪರ್ಧಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಭೂಷಣ್ ಪಾಟೀಲ್ ಅವರನ್ನು 3.57 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದಾರೆ.

6. ಕಿರಣ್ ರಿಜಿಜು: ಇವರು ಅರುಣಾಚಲ ಪಶ್ಚಿಮ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ನಬಮ್ ತುಕಿ ಅವರನ್ನು 1,00,738 ಮತಗಳ ಅಂತರದಿಂದ ಸೋಲಿಸಿದರು. ರಿಜಿಜು 2,05,417 ಮತಗಳನ್ನು ಪಡೆದಿದ್ದಾರೆ.

7. ಅನುರಾಗ್ ಠಾಕೂರ್: ಅನುರಾಗ್ ಸಿಂಗ್ ಠಾಕೂರ್ ಅವರು ಸತತ ಐದನೇ ಬಾರಿಗೆ ಹಮೀರ್‌ಪುರ ಸಂಸದೀಯ ಕ್ಷೇತ್ರದಲ್ಲಿ ಗೆದ್ದಿದ್ದಾರೆ, ಕಾಂಗ್ರೆಸ್‌ನ ಸತ್ಪಾಲ್ ರೈಜಾದಾ ಅವರನ್ನು 1,82,357 ಮತಗಳ ಅಂತರದಿಂದ ಸೋಲಿಸಿದರು.

8. ನಿತಿನ್ ಗಡ್ಕರಿ: ಜೂನ್ 4 ರಂದು ನಿತಿನ್ ಗಡ್ಕರಿ ಅವರು ನಾಗ್ಪುರ ಲೋಕಸಭಾ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಗೆಲುವು ಸಾಧಿಸಿದರು, ಅವರ ಹತ್ತಿರದ ಕಾಂಗ್ರೆಸ್ ಪ್ರತಿಸ್ಪರ್ಧಿ ವಿಕಾಸ್ ಠಾಕ್ರೆ ಅವರನ್ನು 1,37, 603 ಮತಗಳ ಅಂತರದಿಂದ ಸೋಲಿಸಿದರು.

9. ರಾಜನಾಥ್ ಸಿಂಗ್: ಉತ್ತರ ಪ್ರದೇಶದ ಲಕ್ನೋ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಜನಾಥ್ ಸಿಂಗ್ ಅವರು ತಮ್ಮ ಪ್ರತಿಸ್ಪರ್ಧಿ ಎಸ್ಪಿಯ ರವಿದಾಸ್ ಮೆಹ್ರೋತ್ರಾ ವಿರುದ್ಧ 1,35,159 ಮತಗಳ ಅಂತರದಿಂದ ಗೆದ್ದಿದ್ದಾರೆ. ಇದು ಲಕ್ನೋದಿಂದ ಸಿಂಗ್ ಅವರ ಸತತ ಮೂರನೇ ಗೆಲುವು.

10. ಗಿರಿರಾಜ್ ಸಿಂಗ್: ಗಿರಿರಾಜ್ ಸಿಂಗ್ ಬಿಹಾರದ ಬೇಗುಸರಾಯ್ ಲೋಕಸಭಾ ಕ್ಷೇತ್ರವನ್ನು 81,480 ಮತಗಳ ಅಂತರದಿಂದ ಉಳಿಸಿಕೊಂಡಿದ್ದಾರೆ. 5.67 ಲಕ್ಷ ಮತಗಳನ್ನು ಗಳಿಸಿದ ಸಿಪಿಐ ಅಬ್ದೇಶ್ ಕುಮಾರ್ ರಾಯ್ ಅವರಿಗೆ ಹೋಲಿಸಿದರೆ ಅವರು 6.49 ಲಕ್ಷ ಮತಗಳನ್ನು ಪಡೆದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!