Monday, November 23, 2026

ಪ್ರಾಯೋಗಿಕ ಆವೃತ್ತಿ

ಆರೋಗ್ಯ ರಕ್ಷಣೆಯಲ್ಲಿ ಸ್ವಚ್ಛತೆಯದ್ದೇ ಪ್ರಮುಖ ಪಾತ್ರ

ಆರೋಗ್ಯ ರಕ್ಷಣೆಯಲ್ಲಿ ಸ್ವಚ್ಛತೆ ಕೂಡ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪುರಸಭೆ ಅಧ್ಯಕ್ಷೆ ಆಶಾ ವಿಜಯ್ ಕುಮಾರ್ ತಿಳಿಸಿದರು.

ನಾಗಮಂಗಲ ತಾಲ್ಲೂಕಿನ ಹೊನ್ನಬೆಟ್ಟದ ಹೊಸೂರು ಗೇಟ್ ಬಳಿ ಇರುವ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಿಂದ ಸೇವಾ ಪಕ್ವದ ಕಾರ್ಯಕ್ರಮದ ಪ್ರಯುಕ್ತ‌ ಇಂದು ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜನರಿಗೆ ಸ್ವಚ್ಛತೆಯ ಕುರಿತು ಅರಿವು‌ ಮೂಡಿಸುವ ಇಂತಹ ಕಾರ್ಯಕ್ರಮ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಆರೋಗ್ಯ ರಕ್ಷಣೆಯಲ್ಲಿ ಸ್ವಚ್ಛತೆಯು ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮ ಪರಿಸರವನ್ನು ಸ್ವಚ್ಛವಾಗಿ ಕಾಪಾಡಿಕೊಳ್ಳಲು ಹೆಚ್ಚಿನ ಆದ್ಯತೆ‌ ನೀಡಬೇಕು. ಇದರಿಂದ ಉತ್ತಮ ಆರೋಗ್ಯಕರ ಪರಿಸರ ಬೆಳೆಯಲು ಸಾಧ್ಯ ಎಂದರು.

ಉಪನ್ಯಾಸಕ ಯು.ವಿ.ಉಲ್ಲಾಸ್ ಮಾತನಾಡಿ,ಸ್ವಚ್ಛತೆ ಎಂಬುದು ಪ್ರತಿಯೊಬ್ಬರೂ ಅನುಸರಿಸಬೇಕಾದ ಆರೋಗ್ಯ ಮಾರ್ಗವಾಗಿದೆ. ಒಂದು ಸಮಾಜ ಸ್ವಚ್ಛತೆಯಿಂದ ಕೂಡಿರುವ ನಿಟ್ಟಿನಲ್ಲಿ ನೋಡಿದಾಗ ಸ್ವಚ್ಛತೆ ಎಂಬುದು ಮೊದಲು ನಮ್ಮಿಂದ ಪ್ರಾರಂಭವಾಗಬೇಕು. ನಾವು ನಮ್ಮ ವೈಯಕ್ತಿಕ ಸ್ವಚ್ಛತೆ, ನಮ್ಮ ಮನೆಯ ಸ್ವಚ್ಛತೆ, ಸುತ್ತಲಿನ ಪರಿಸರ ಸ್ವಚ್ಛತೆ ಮಾಡುತ್ತಾ ಬಂದರೆ ಇಡೀ ದೇಶವೇ ಸ್ವಚ್ಛವಾಗಿರುತ್ತದೆ ಎಂದರು.

ಡಾ.ಚೈತ್ರಾ ಮಾತನಾಡಿ, ನಮ್ಮೆಲ್ಲರಿಗೂ ತಾಯಿ ಭೂಮಿ. ಅಂತಹ ಭೂಮಿಯನ್ನು ಸ್ವಚ್ಛವಾಗಿಡದೆ ಮಾಲಿನ್ಯ ಮಾಡಿದರೆ ಭೂಮಿಯೂ ಸಹ ಮರಳಿ ಅದನ್ನೇ ನಮಗೆ ನೀಡುತ್ತದೆ. ನಮ್ಮ ಪಾಪದ ಫಲವನ್ನು ಆರೋಗ್ಯ ಸಮಸ್ಯೆ, ರೋಗರುಜಿನಗಳ ಮೂಲಕ ಅನುಭವಿಸಬೇಕಾಗಿದೆ. ಜೊತೆಗೆ ಆರೋಗ್ಯ ಎಂಬುದು ಎಲ್ಲ ಸಂಪತ್ತಿಗಿಂತಲೂ ಮುಖ್ಯವಾದುದ್ದು. ಆದ್ದರಿಂದ ವೈಯಕ್ತಿಕ ಸ್ವಚ್ಛತೆಯ ಜೊತೆಗೆ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

 

 

 

 

ನಂತರ ಕಾರ್ಯಕ್ರಮದಲ್ಲಿ ಯೋಗಗುರು ಸಿದ್ಧಪ್ಪ ನರಗಟ್ಟಿ ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ಜನರಿಗೆ ಮಾಹಿತಿ ನೀಡಿದರು. ನಂತರ ಆಸ್ಪತ್ರೆಯ ಸಿಬ್ಬಂದಿಗಳು ಪ್ರಕೃತಿ ಚಿಕಿತ್ಸಾ ಕೇಂದ್ರದ ಆವರಣದಲ್ಲಿ ಸ್ವಚ್ಛತಾ ಕೆಲಸ ನಡೆಸಿದರು.

ಸಮಾರಂಭದಲ್ಲಿ ಪುರಸಭೆ ಸದಸ್ಯ ಶ್ರೀಧರ್ ಆಚಾರ್ಯ, ಡಾ.ಅಖಿಲಾ, ಯೋಗ ಥೆರಪಿಸ್ಟ್ ಮುತ್ತುರಾಜ್, ಕಚೇರಿ ಸಹಾಯಕಿ ಚೈತ್ರಾ, ಸಿಬ್ಬಂದಿ ಯಶ್ವಂತ್, ಶಿವರಾಜು, ನಾಗೇಶ್ ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ