Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯದಲ್ಲಿ ಬೃಹತ್ ಉದ್ಯೋಗ ಮೇಳ

ಮಂಡ್ಯ ಜಿಲ್ಲಾ ಉದ್ಯೋಗ ವಿನಮಯ ಕಚೇರಿ ಹಾಗೂ ಬೆಂಗಳೂರು ಸಮರ್ಥನಂ ಅಂಗವಿಕಲರ ಸಂಸ್ಥೆ ಹಾಗೂ ಎಸ್.ಬಿ.ಏಜುಕೇಷನ್ ಟ್ರಸ್ಟ್ ಹಾಗೂ ಬಾಕ್ಲೇನ್ ಸಹಯೋಗದಲ್ಲಿ ಮಂಡ್ಯ ನಗರದ ಎಸ್.ಬಿ.ಸಮುದಾಯ ಭವನದಲ್ಲಿ  ಸೆ.21ರಂದು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಎಸ್.ಬಿ.ಏಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಹೇಳಿದರು.

ಮಂಡ್ಯದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಳದಲ್ಲಿ ಸುಮಾರು 1500 ಉದ್ಯೋಗಾಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆ ಇದ್ದು, 30 ರಿಂದ 35 ಕಂಪನಿಗಳು ಭಾಗವಹಿಸಲಿವೆ, 18 ವರ್ಷದಿಂದ 35 ವರ್ಷದೊಳಗಿನ ಯುವ ಜನರು ಭಾಗವಹಿಸಬಹುದು ಎಂದರು.

ಎಸ್.ಎಸ್.ಎಲ್.ಸಿ, ಪಿಯುಸಿ, ಡಿಪ್ಲೊಮಾ, ಮತ್ತು ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವವರು ಭಾಗಹಿಸಬಹದು, ಅಭ್ಯರ್ಥಿಗಳು ತಮ್ಮ ಎಲ್ಲಾ ಮೂಲ ಪ್ರಮಾಣ ಪತ್ರಗಳು, ಸ್ವ ವಿವರ (Rsume) ಪತ್ರ (8 ಪ್ರತಿಗಳು) ಹಾಗೂ ವಿದ್ಯಾರ್ಹತೆಯ ಪ್ರಮಾಣ ಪತ್ರಗಳ ಜೆರಾಕ್ಸ್ ಜೊತೆಗೆ ಆಧಾರ್ ಪ್ರತಿಗಳು ಹಾಗೂ 5 ಪಾಸ್ ಪೋರ್ಟ್ ಆಳತೆಯ ಭಾವಚಿತ್ರಗಳನ್ನು ತೆಗೆದುಕೊಂಡು ಬರಬೇಕೆಂದು ಹೇಳಿದರು.

ಹೆಚ್ಚಿನ ವಿವರಗಳಿಗೆ ದೂ.08232-295124, ಮೊ.9480812121, 9972587838 ಹಾಗೂ 6364867818 ಸಂಪರ್ಕಿಸಬಹುದು ಎಂದರು.

ಗೋಷ್ಠಿಯಲ್ಲಿ ಸಮರ್ಥಂ ಅಂಗವಿಕಲ ಸಂಸ್ಥೆಯ ಉದ್ಯೋಗಾಧಿಕಾರಿ ಸತೀಶ್, ಕೆ., ತಾವರಗೆರೆ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಂಶುಪಾಲ ಎಂ.ಸಿ.ಪ್ರವೀಣ್ ಕುಮಾರ್, ಮಾಂಡವ್ಯ ಐಟಿಐ ಕೇಂದ್ರದ ಪ್ರಾಂಶುಪಾಲ ಲೋಹಿತ್ ಕುಮಾರ್, ಸಮರ್ಥನಂ ಸಂಸ್ಥೆಯ ವೀರಭದ್ರ ಪಾಟೇಲ್, ಜಾಬ್ ಡೆವಲಪ್ ಮೆಂಟ್ ಎಕ್ಸಿಕ್ಯೂಟಿವ್ ಜಾನವಿ ಉಪಸ್ಥಿತರಿದ್ದರು.

 

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ