Friday, September 20, 2024

ಪ್ರಾಯೋಗಿಕ ಆವೃತ್ತಿ

ರಾಜ್ಯದಲ್ಲಿ ದಲಿತರ ಗಂಭೀರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮೀನಾಮೇಷ : ಕರ್ನಾಟಕ ದಲಿತ ಸಂಘರ್ಷ ಸಮಿತಿ ಖಂಡನೆ

ಕರ್ನಾಟಕ ರಾಜ್ಯದಲ್ಲಿ ದಲಿತರ ಗಂಭೀರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ. ಆಳುವ ಎಲ್ಲಾ ಸರ್ಕಾರಗಳು ಮೀನಾಮೇಷ ಎಣಿಸುತ್ತಿರುವುದನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಭಾರತ ಸಂವಿಧಾನದ ಆಶಯದಂತೆ ಸ್ವಾತಂತ್ರ್ಯ ಸಮಾನತೆ ಸಹೋದರತ್ವದ ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸಿ ಶೋಷಿಕ ಸಮುದಾಯಗಳನ್ನು ಸಮಾಜ ಮುಖ್ಯವಾಹಿನಿಯಲ್ಲಿ ತರುವ ಜವಬ್ದಾರಿಯಿಂದ ವೈಫಲ್ಯ ಕಂಡ ಬಿ.ಜೆ.ಪಿ, ಕಾಂಗ್ರೇಸ್ ಜನತಾದಳ ಪಕ್ಷಗಳು – ಪ್ರಜಾಪ್ರಭುತ್ವ . ವಿರೋಧಿಯಾಗಿದೆ ಎಂಬುದಂತು ವಿಷಾದಕರ ಸಂಗತಿ. ತಮ್ಮ ಸರ್ಕಾರ ಈಗಲಾದರೂ ಜವಾಬ್ದಾರಿಯುತ ಹೋಣೆಯನ್ನು ನಿರ್ವಹಿಸಿ ಈ ಕೆಳಕಂಡ ಒತ್ತಾಯಗಳಿಗೆ ಸ್ವಂದಿಸಲು ಕರ್ನಾಟಕ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.

ಮದ್ದೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ  ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಘಟನೆಯು ಒತ್ತಾಯವನ್ನು ಪತ್ರವನ್ನು ಸಲ್ಲಿಸಿ ಈ ಕೆಳಗಿನ ಹಕ್ಕೋತ್ತಾಗಳಿಗೆ ಸ್ಪಂದಿಸಲು ಕೋರಿದೆ.

  • ಪರಿಶಿಷ್ಟಜಾತಿ ಮೀಸಲಾತಿ ವರ್ಗಿಕರಣಕ್ಕಾಗಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸಂಪುಟ ಸಭೆಯಲ್ಲಿ ಮಂಡಿಸಿ, ವಿಧಾನ ಮಂಡಲದಲ್ಲೂ ಚರ್ಚಿಸಿ ಜಾರಿಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಸಲ್ಲಿಸಬೇಕು.
  • ಪರಿಶಿಷ್ಟಜಾತಿ ಮತ್ತು ಪಂಗಡಗಳ ಮೀಸಲಾತಿ ದೋಖಾ ಮಾಡುವ ದುರುದ್ದೇಶದಿಂದ ಸುಳ್ಳುಜಾತಿ ದಂಧೆಕೋರರು ಮಿತಿ ಮೀರುತ್ತಿರುವುದರಿಂದಾಗಿ ಈ ದಂದೆಯನ್ನು ತಡೆಯುವ
    ಕಠಿಣ ಕಾನೂನು ರೂಪಿಸಬೇಕು, ದಂದೆಕೋರರನ್ನು ಈ ಕೂಡಲೇ ಬಂಧಿಸಬೇಕು.
  • ರಾಜ್ಯ ಪರಿಶಿಷ್ಟ  ಮತ್ತು ಪಂಗಡಗಳ ಕೆಲವು ಭೂ ಪರಭಾರ ನಿಷೇಧ ಕಾಯಿದೆ( ಪಿ.ಟಿ.ಸಿ.ಎಲ್)ಗೆ ತಿದ್ದುಪಡಿ ತಂದು ಸಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆಯ ಮೂಲಕ ದಲಿತರ ಭೂಮಿ ಹಕ್ಕನ್ನು ಸಂರಕ್ಷಿಸಬೇಕು.
  • ಎಸ್ಪಿ ಎಸ್.ಪಿ ಮತ್ತು ಟಿ.ಎಸ್.ಪಿ ಉಪಯೋಜನೆ ಕಾಯಿದೆ, ಕಲಂ 7 (ಡಿ) ತಿದ್ದುಪಡಿ ಮಾಡಿ ದಲಿತರಿಗೆ ಮೀಸಲಾದ ಪೂರ್ಣ ಹಣವನ್ನು ವಿನಿಯೋಗಕ್ಕೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು. ಮೀಸಲಾದ ಹಣವನ್ನು ಸಮಪರ್ಕವಾಗಿ ಖರ್ಚು ಮಾಡದ ಇಲಾಖಾ ಅಧಿಕಾರಿಗಳ ಮೇಲಿ ಕಾನೂನು ಕ್ರಮ ಕೈಗೊಳ್ಳಬೇಕು.
  • ರಾಜ್ಯ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಹಿಂದುಳಿದ ವರ್ಗ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಸೇರಿದಂತೆ, ಉಚಿತ ಶಿಕ್ಷಣ ವ್ಯವಸ್ಥೆಯನ್ನು ವಿಕೃತಿಗೊಳಿಸಿ ವಿಶ್ವವಿಧ್ಯಾನಿಲಯಗಳಲ್ಲಿ ಶುಲ್ಕ ವಸೂಲಾತಿಗೆ ಮುಂದಾಗಿರು ಕ್ರಮವನ್ನು ಈ ಕೂಡಲೇ ತಡೆಯಬೇಕು.
  • ಈ ಹಿಂದಿನ  ವಿದ್ಯಾರ್ಥಿ ವೇತನ ಪದ್ಧತಿಯನ್ನು ಮುಂದುವರಿಸಬೇಕು.
  • ಮಂಡ್ಯ ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಬೃಹತ್ ಪ್ರಮಾಣದಲ್ಲಿ ನಿಮಾಣವಾಗಿರುವ ಡಾ ಅಂಬೇಡ್ಕರ ಭವನದ ಮುಂದುವರಿದ ಕಾಮಗಾರಿಗಾಗಿ 5 ಕೋಟಿ ಅನುದಾನವನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಘಟನೆಯ ರಾಜ್ಯಾಧ್ಯಕ್ಷರಾದ ವೆಂಕಟಗಿರಿಯಯ್ಯ ಮತ್ತು ಜಿಲ್ಲಾಧ್ಯಕ್ಷರಾದ ಕಬ್ಬಿನಕೆರೆ ಕೆ.ಎಂ.ಶ್ರೀನಿವಾಸ್ ರವರು ಆಗ್ರಹಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!