Tuesday, November 24, 2026

ಪ್ರಾಯೋಗಿಕ ಆವೃತ್ತಿ

ಟಿಪ್ಪು ಕುರಿತು ಜಗತ್ತಿನಲ್ಲಿರುವ 600 ಕೃತಿಗಳಲ್ಲಿ ಎಲ್ಲೂ ಉರಿಗೌಡ, ನಂಜೇಗೌಡನ ಉಲ್ಲೇಖವಿಲ್ಲ : ಜಗದೀಶ್ ಕೊಪ್ಪ


  • ದಾಖಲೆಗಳಿದ್ದರೆ ಚರ್ಚೆ ಬನ್ನಿ ಎಂದು ಬಿಜೆಪಿ ಸಂಘ ಪರಿವಾರದ ಮುಖಂಡರಿಗೆ ಬಹಿರಂಗ ಆಹ್ವಾನ

  • ಉರಿಗೌಡ ನಂಜೇಗೌಡ ಇದ್ದರೆಂದು ಸಾಬೀತುಪಡಿಸಿದರೆ ತಲೆ ಬೋಳಿಸಿಕೊಳ್ಳುತ್ತೇನೆಂದ ಜಗದೀಶ್ ಕೊಪ್ಪ

ಟಿಪ್ಪುವಿನ ಚರಿತ್ರೆಯನ್ನು ಕುರಿತು ಇಡೀ ಜಗತ್ತಿನಾದ್ಯಂತ ಒಟ್ಟು 600 ಕ್ಕೂ ಹೆಚ್ಚು ಕೃತಿಗಳು ಇವೆ. ಈ ಎಲ್ಲಾ ಪುಸ್ತಕಗಳಲ್ಲಿ ಎಲ್ಲೂ ಕೂಡ ಉರಿಗೌಡ, ನಂಜೇಗೌಡ ಎಂಬ ಹೆಸರುಗಳು ಉಲ್ಲೇಖವೇ ಇಲ್ಲ. ಇವು ಪಾತ್ರಗಳು ಬಿಜೆಪಿ ಹಾಗೂ ಸಂಘಪರಿವಾರದ ಕಪೋಲ ಕಲ್ಪಿತ ಪಾತ್ರಗಳೇ ಹೊರತು ಬೇರೆನೂ ಅಲ್ಲ ಎಂದು ಹಿರಿಯ ಪತ್ರಕರ್ತ ಜಗದೀಶ್ ಕೊಪ್ಪ ಸ್ಪಷ್ಟನೆ ನೀಡಿದರು.

ಮಂಡ್ಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಟಿಪ್ಪುವಿನ ಇತಿಹಾಸದ ಇಂಚಿಂಚು ವಿಷಯಗಳನ್ನು ಬ್ರಿಟಿಸ್ ಕೃತಿಕಾರರು ತಮ್ಮ ಕೃತಿಗಳಲ್ಲಿ ದಾಖಲಿಸಿದ್ದಾರೆ. ಟಿಪ್ಪುವಿನ ಇತಿಹಾಸ ಕುರಿತು 1830ರಿಂದ ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾನಿಲಯ ದಾಖಲೆಗಳ ಸಮೇತ ಸಂಗ್ರಹಣೆ ಮಾಡಿದೆ. ಟಿಪ್ಪುವಿನ ಕುರಿತು ಪ್ರಸಿದ್ದಿ ಕೃತಿಕಾರ ವಿಲಿಯಂ ಡಾರ್ಲಿ ಪಲ್ ಕೃತಿ ರಚನೆ ಮಾಡಿದ್ದು, ಟಿಪ್ಪುವಿನ ಇಂಚಿಂಚು ಇತಿಹಾಸವನ್ನು ದಾಖಲು ಮಾಡಿದ್ದಾರೆ. ಆತ ಹೇಳುವ ಪ್ರಕಾರ ಬ್ರಿಟೀಷ್ ಸೇನೆಯೂ ಸುತ್ತುವೆರೆದು ಬ್ರಿಟಿಷ್ ಸೈನಿಕನೊಬ್ಬ ಗುಂಡಿನ ದಾಳಿಗೆ ಒಳಗಾಗಿ ಟಿಪ್ಪು ಸಾವಿಗೀಡಾದ ಎಂಬುದು ದಾಖಲಾಗಿದೆ. ಇಷ್ಟೆಲ್ಲ ದಾಖಲೆಗಳು ನನ್ನ ಬಳಿಯಲ್ಲೆ ಇವೆ. ಈ ಬಗ್ಗೆ ಯಾರು ಬೇಕಾದರೂ ಬಹಿರಂಗ ಚರ್ಚೆಗೆ ಬರಲಿ ಎಂದು ಪಂಥಾಹ್ವಾನ ನೀಡಿದರು.

ಕಲ್ಕತ್ತಾ ವಿಕ್ಟೋರಿಯಾ ಮೆಮೋರಿಯಲ್ ಹಾಲ್ ನಲ್ಲೂ ಉಲ್ಲೇಖಗಳಿಲ್ಲ

ಟಿಪ್ಪುವಿನ ಸಮಗ್ರ ಇತಿಹಾಸದ ಕುರಿತು ಕಲ್ಕತ್ತಾದಲ್ಲಿರುವ ವಿಕ್ಟೋರಿಯಾ ಮೆಮೋರಿಯಲ್ ಹಾಲ್ ನಲ್ಲಿ ಎಲ್ಲಾ ದಾಖಲೆಗಳು ಲಭ್ಯವಿದೆ. ಅಲ್ಲಿಯೂ ಉರಿಗೌಡ ನಂಜೇಗೌಡನ ಉಲ್ಲೇಖವಿಲ್ಲ. ಅಲ್ಲದೇ ಮೈಸೂರಿನ ದಿವಾನರಾಗಿದ್ದ ದಿವಾನ್ ಪೂರ್ಣಯ್ಯ ದಾಖಲಿಸಿರುವ ಇತಿಹಾಸದಲ್ಲಿಯೂ ಉರಿಗೌಡ, ನಂಜೇಗೌಡನ ಪ್ರಸ್ತಾಪವಿಲ್ಲ. ಅಲ್ಲದೇ ಪಾಶ್ಚಾತ್ಯ ಕೃತಿಕಾರ ಬ್ರೆಯರ್ ಬ್ರೈಡ್ ದಾಖಲಿಸಿರುವ ಕೃತಿಗಳಲ್ಲೂ ಉಲ್ಲೇಖವಿಲ್ಲ ಎಂದು ಸ್ಪಷ್ಟಪಡಿಸಿದರು.

ಹ.ಕ.ರಾಜೇಗೌಡರ ಲಾವಣಿ ಸಂಗ್ರಹದಲ್ಲೂ ಇಲ್ಲ

ಹ.ಕ.ರಾಜೇಗೌಡರು ಟಿಪ್ಪುವಿನ ಲಾವಣಿಗಳ ಸಂಗ್ರಹ ಮಾಡಿದ್ದಾರೆ. ಅವರು ಸಂಗ್ರಹಿಸಿದ ಯಾವ ಲಾವಣಿಯಲ್ಲೂ ಉರಿಗೌಡ ನಂಜೇಗೌಡನ ಪ್ರಸ್ತಾಪವಿಲ್ಲ. ಹ.ಕ.ರಾಜೇಗೌಡರೊಂದಿಗೆ ನನಗೆ ಉತ್ತಮವಾದ ಒಡನಾಟವಿತ್ತು. ಇತ್ತಿಚೇಗೆ ಅವರ ನಿಧನ ಹೊಂದಿದರು. ಆದರೆ ನಿನ್ನೆ ಮೊನ್ನೆಯಷ್ಟೆ ಬಿಜೆಪಿ, ಸಂಘಪರಿವಾರದವರು ಲಾವಣೆಯೊಂದನ್ನು ಮುನ್ನೆಲೆಗೆ ತಂದಿದ್ದಾರೆ. ಆ ಲಾವಣಿಯನ್ನು ಹ.ಕ.ರಾಜೇಗೌಡರದೆಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ವಾಸ್ತವವಾಗಿ ಅದು ಸಂಘಪರಿವಾರದ ಸೃಷ್ಠಿಯೇ ಹೊರತು ಹ.ಕ.ರಾಜೇಗೌಡರ ಸಂಗ್ರಹವಲ್ಲ ಎಂದು ಸ್ಪಷ್ಟಪಡಿಸಿದರು.

ಗೋಷ್ಠಿಯಲ್ಲಿ ದಸಂಸ ಮುಖಂಡ ಗುರುಪ್ರಸಾದ್ ಕೆರಗೋಡು, ರೈತ ಮುಖಂಡ ಕೆ.ಬೋರಯ್ಯ, ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಉಗ್ರ ನರಸಿಂಹೇಗೌಡ, ಪ್ರಗತಿಪರ ಚಿಂತಕ ಎಂ.ವಿ.ಕೃ‍ಷ್ಣ ಹಾಗೂ ಪ್ರಕಾಶಕ ಅಭಿರುಚಿ ಗಣೀಶ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ