Tuesday, November 24, 2026

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ| ಕಾಶಿಮುರುಕನಹಳ್ಳಿಯಲ್ಲಿ ಬಿ.ಎಂ.ಸಿ ಕೆಂದ್ರದ ಉದ್ಘಾಟನೆ

ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಕಾಶಿಮುರುಕನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಹಾಗೂ ಮನ್ ಮುಲ್ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ಬಿ.ಎಂ.ಸಿ ಕೆಂದ್ರದ ಉದ್ಘಾಟನೆ ಹಾಗೂ ಸಂಘದ 2022-23ನೇ ಸಾಲಿನ ಸರ್ವ ಸದಸ್ಯರ ವಾರ್ಷೀಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಅನಿತಾ ಶಿವಕುಮಾರ್ ಅಧ್ಯಕ್ಷೆಯಲ್ಲಿ ನಡೆಯಿತು.

ಬಿಎಂಸಿ ಕೇಂದ್ರದ ಉದ್ಘಾಟನೆಯನ್ನು ಶಾಸಕರಾದ ಹೆಚ್.ಟಿ.ಮಂಜು ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿದ ಶಾಸಕ ಮಂಜು ಅವರು ಸಂಘವು ಉತ್ತಮ ರೀತಿಯಲ್ಲಿ ಬೆಳೆಯಬೇಕಾದರೆ ಸಂಘದಲ್ಲಿ ರಾಜಕೀಯ ಬೆರೆಸದೇ ಸಂಘದ ಬೆಳವಣಿಗೆಗೆ ಸಹಕಾರ ನೀಡಬೇಕು. ಶೇರುದಾರರು ತಮ್ಮ ಸಂಘದ ಬೆಳವಣಿಗೆ ಬಗ್ಗೆ ತಿಳಿದುಕೊಳ್ಳಬೇಕಾದರೆ ವಾರ್ಷಿಕ ಮಹಾಸಭೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದರು.

ಐದು ವರ್ಷಗಳಲ್ಲಿ ಕನಿಷ್ಠ ಮೂರು ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಬೇಕು.‌ಇಲ್ಲದಿದ್ದರೆ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗೂ ಮತದಾನ ಮಾಡುವ ಹಕ್ಕನ್ನು ಕಳೆದುಕೊಳ್ಳುತ್ತೀರಿ ಆದ್ದರಿಂದ ಸಂಘದ ಶೇರುದಾರರು ಕಡ್ಡಾಯವಾಗಿ ವಾರ್ಷಿಕ‌ಮಹಾಸಭೆಯಲ್ಲಿ ಭಾಗವಹಿಸಿ, ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಬೇಕು ಎಂದು ಮನವಿ‌ ಮಾಡಿದರು.

ಮಂಡ್ಯ ಹಾಲು ಒಕ್ಕೂಟದ ಹಿರಿಯ ನಿರ್ದೇಶಕರಾದ ಡಾಲು ರವಿ‌ ರವರಯ ಮಾತನಾಡಿ ಹಾಲು ಉತ್ಪಾದಕರು ತಮ್ಮ ಗ್ರಾಮದ ಡೇರಿಗೆ ಉತ್ತಮ ಗುಣಮಟ್ಟದ ಹಾಲು ಪೂರೈಕೆ ಮಾಡಬೇಕು. ಡೆನ್ಮಾರ್ಕ್ ದೇಶದಿಂದ ಅತ್ಯಾಧುನಿಕ ಹಾಲು ಪರೀಕ್ಷೆ ಮಾಡುವ ಯಂತ್ರಗಳನ್ನು ಆಮದು ಮಾಡಿಕೊಂಡು ಡೇರಿಗಳಿಗೆ ಅಳವಡಿಸಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಸಂಘಕ್ಕೆ ಕಳೆದ ಸಾಲಿನಲ್ಲಿ ಅತಿ ಹೆಚ್ಚು ಹಾಲನ್ನು ಸರಬರಾಜು ಮಾಡಿದ ಹಾಲು ಉತ್ಪಾದಕರಿಗೆ ಹಾಲಿನ ಕ್ಯಾನ್ ಗಳನ್ನು ಬಹುಮಾನವಾಗಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಮನ್ ಮುಲ್ ವ್ಯವಸ್ಥಾಪಕ ಡಾ.ಪಿ.ಆರ್.ಮಂಜೇಶ್, ಎಸ್‌.ಪ್ರಭಾಕರ್‌, ವ್ಯವಸ್ಥಾಪಕರು, ಉಪ ವ್ಯವಸ್ಥಾಪಕ ಪ್ರಸಾದ್ ಆರ್, ಮಾರ್ಗದ ವಿಸ್ತರಣಾಧಿಕಾರಿಗಳಾದ ನಾಗಪ್ಪ ಅಲ್ಲಿಬಾದಿ, ಹೆಚ್‌.ಎನ್‌.ರಾಘವೇಂದ್ರ, ಗುರುರಾಜ್ ಸುರಗೀಹಳ್ಳಿ, ಸಂಧ್ಯಾ, ಮಧು, ರಾಘವೇಂದ್ರ, ಜಿ.ಪಂ.ಮಾಜಿ ಉಪಾಧ್ಯಕ್ಷೆ ಗಾಯಿತ್ರಿರೇವಣ್ಣ, ಗ್ರಾ.ಪಂ.ಅಧ್ಯಕ್ಷರಾದ ಮುದುಗೆರೆ ಪರಮೇಶ್, ವಕೀಲ ಕುರುಬಹಳ್ಳಿ ನಾಗೇಶ್, ಗ್ರಾ.ಪಂ.ಮಾಜಿ ಅಧ್ಯಕ್ಷ ಬಲ್ಲೇನಹಳ್ಳಿ ನಂದೀಶ್, ಗ್ರಾಮ ಪಂಚಾಯಿತಿ ಸದಸ್ಯ ಎಂ.ಎ.ಚಂದ್ರಶೇಖರ್ ಉಪಸ್ಥಿತರಿದ್ದರು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ