Tuesday, November 24, 2026

ಪ್ರಾಯೋಗಿಕ ಆವೃತ್ತಿ

ರೋಟ್ರಾಕ್ಟ್ ಸಂಸ್ಥೆಯಿಂದ ಶಿಸ್ತು- ಸಮಯ ಪ್ರಜ್ಞೆ ಕಲಿಕೆ : ಡಾ.ಅನಿಲ್ ಹಗಡೆ

ರೋಟ್ರಾಕ್ಟ್ ಸಂಸ್ಥೆಯು ಮಹತ್ವಪೂರ್ಣವಾದ ಸಂಸ್ಥೆಯಾಗಿದ್ದು, ಇಲ್ಲಿ ಯುವಕ- ಯುವತಿಯರು ಮತ್ತು ಮಕ್ಕಳು ಶಿಸ್ತು, ಸಮಯ ಪ್ರಜ್ಞೆ ಕಲಿಯಲು ಸಾಧ್ಯವಾಗುತ್ತದೆ ಎಂದು ಬೆಂಗಳೂರಿನ ರೋ.ಡಾ.ಅನಿಲ್ ಹಗಡೆ ಹೇಳಿದರು.

ಮಂಡ್ಯದ ಕೋಣನಹಳ್ಳಿಯ ಖಾಸಗಿ ರೇಸಾರ್ಟ್ ನಲ್ಲಿ ನಡೆದ ರೋಟ್ರಾಕ್ಟ್ ಆಪ್ ಮಂಡ್ಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವ್ಯಸನಗಳಿಂದ ದೂರ ಉಳಿಯುವುದು, ವೇದಿಕೆಗಳಲ್ಲಿ ಮಾತನಾಡುವ ಧೈರ್ಯ, ದೈಹಿಕ, ಆತ್ಮ ಸ್ಥೈರ್ಯ, ವಿದ್ಯಾಭ್ಯಾಸದ ಬಗ್ಗೆ ಮಾಹಿತಿ, ಅಂತರಾಷ್ಟ್ರೀಯ ಉದ್ಯೋಗಗಳ ಮಾಹಿತಿ, ಸಮಾಜಕ್ಕೆ ತೊಡಕುಂಟು ಮಾಡುವ ಹಲವು ವ್ಯಸನಗಳ ವಿರುದ್ಧ ಜಾಗೃತಿ, ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಜಾಗೃತಿ, ಸರ್ಕಾರದ ಶಾಲೆಗಳ ಮೂಲಭೂತ ಸೌಕರ್ಯಗಳ ಜಾಗೃತಿ ಇನ್ನೂ ಹಲವಾರು ವಿಷಯಗಳನ್ನು ಇಲ್ಲಿ ಕಲಿಯುತ್ತಾರೆ ಎಂದರು.

ರೋಟರಿ ಸಕ್ಕರೆ ನಾಡು ಸಂಸ್ಥೆಯ ಕಮುನಿಟಿ ಸರ್ವಿಸ್ ಛೇರ್ಮನ್ ಡಾ.ಎಸ್.ನಾರಾಯಣ್ ಮಾತನಾಡಿ, ಸಮಾಜದಲ್ಲಿ ಇವತ್ತು ಪೋಲಿಯೊ ಮುಕ್ತ ಭಾರತವಾಗಲು ರೋಟರಿ ಸಂಸ್ಥೆಯು ಮುಖ್ಯ ಕಾರಣ. ಇವತ್ತು ನಮ್ಮ ಸಮಜಕ್ಕೆ ಒಳ್ಳೆಯ ಶಿಕ್ಷಣ, ಒಳ್ಳೆಯ ಪರಿಸರ, ಒಳ್ಳೆಯ ಆರೋಗ್ಯ, ಬೇಕಿದೆ ಅವುಗಳ ವಿಚಾರದಲ್ಲಿ ಹೆಚ್ಚಿನ ಜಾಗೃತಿ ಮಾಡಬೇಕಿದೆ. ಯುವಕ ಯುವತಿಯರು ಅತಿ ಹೆಚ್ಚು ವ್ಯಸನಗಳ ಕಡೆ ವ್ಯಾಮೋಹ ಜಾಸಿವ್ಯಿದೆ. ಮತ್ತೆ ಅವಿಭಕ್ತ ಕುಟುಂಬಗಳು ಒಡೆದು ವಿಭಕ್ತ ಕುಟುಂಬಗಳಾಗಿ ತಮ್ಮ ತಂದೆ ತಾಯಿ, ಅಜ್ಜ ಅಜ್ಜಿ ಆಶ್ರಮಗಳ ಕಡೆ ಹೋಗುತ್ತಿದ್ದಾರೆ, ಇದು ಬಹಳ ದುರಂತ, ಎಂದರು.

ರೋಟರಿ ಸಕ್ಕರೆ ನಾಡು ಅಧ್ಯಕ್ಷ ನಂದಿಶ್ ಮಾತನಾಡಿ, ನಮ್ಮ ರೋಟ್ರಾಕ್ಟ್ ಸಂಸ್ಥೆ ಮಂಡ್ಯದಲ್ಲಿ ಸ್ಥಾಪನೆಯಾದುದ್ದು ನಮಗೆ ಸಂತೋಷವಾಗಿದೆ. ಇದಕ್ಕೆ ನಮ್ಮ ರೋಟರಿ ಕ್ಲಬ್ ಬೆಂಗಳೂರು ಮತ್ತು ನಾವು ಜೊತೆಯಲ್ಲಿ ಸೇರಿ ನಮ್ಮ ಎಲ್ಲಾ ನಿರ್ದೇಶಕರುಗಳಿಂದ ಈ ಸಮಾರಂಭ ಯಶಸ್ವಿಯಾಗಿ ನಡೆದಿದೆ. ಹಾಗಾಗಿ ಪತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದರು

ರೋಟ್ರಾಕ್ಟ್ ಆಪ್ ಮಂಡ್ಯ ಸಂಸ್ಥೆಯ ನೂತನ ಅಧ್ಯಕ್ಷ ಗೆಲುವಂತ್ ಎನ್.ಗೌಡ ಮಾತನಾಡಿ. ಗುರು ಹಿರಿಯರು, ರೋಟೇರಿಯನ್ ಮಾರ್ಗದರ್ಶನದಲ್ಲಿ ಸಮಾಜಮುಖಿ ಕಾರ್ಯಕ್ರಮ ರೂಪಿಸುತ್ತೇವೆ. ನಮ್ಮೆಲ್ಲರಿಗೂ ತಿಂಗಳುಗಳ ಕಾಲ ತರಬೇತಿ ನೀಡಿ, ಮಾರ್ಗದರ್ಶಕರಾದ ಅಭಿಜಿತ್ ಶಂಕರವರು ನಮಗೆ ಸಹಕಾರ ನೀಡಿದ್ದಾರೆ. ನಮ್ಮ ಮುಂದಿನ ಯೋಜನೆಗಳು ಸಮಾಜಕ್ಕೆ ಸಹಕಾರಿಯಾಗುವ ಶಿಕ್ಷಣ, ಆರೋಗ್ಯ, ಪರಿಸರ ಇವುಗಳ ವಿಷಯದಲ್ಲಿ ಹಿರಿಯರ ಮಾರ್ಗದರ್ಶನ ಪಡೆದು ಈ ಸಂಸ್ಥೆ ನಡೆಸುತ್ತೇವೆ ಎಂದು ತಿಳಿಸಿದರು.

ರೋಟ್ರಾಕ್ಟ್ ಆಪ್ ಮಂಡ್ಯ ಸಂಸ್ಥೆಯ ನೂತನ ಅಧ್ಯಕ್ಷ ಗೆಲುವಂತ್ ಎನ್.ಗೌಡ ಅಧಿಕಾರ ಸ್ವೀಕಾರ ಮಾಡಿದರು. ರೋಟ್ರಾಕ್ಟ್ ಮಂಡಳಿ ಕಾರ್ಯದರ್ಶಿ ಎಂ.ಎಸ್.ಯಶಸ್, ಜಂಟಿ ಕಾರ್ಯದರ್ಶಿ ಎಸ್.ನೇಹಾಲ್, ಪ್ರಣವ್ ಪಟೇಲ್, ಎಚ್.ಪಿ.ಅಮೋಘ್, ಎಸ್.ಚಿರಾಗ್, ಅರುಣ್‌ಕುಮಾರ್, ನಿಶ್ಚಿತ್‌ಗೌಡ, ಕೆ.ಎನ್.ಪನೀತ್, ಮೋನಿಶ್ ಆರ್.ಗೌಡ, ಜಿ.ಎಸ್.ಸುಹಾಸ್, ಎಸ್.ಚಿರಾಂತ್ ಇತರರಿದ್ದರು. ಎಲ್ಲ ಸದಸ್ಯರಿಗೆ ಇದೇ ಸಂದರ್ಭದಲ್ಲಿ ಗುರುತಿನ ಚೀಟಿ ವಿತರಿಸಲಾಯಿತು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ