Wednesday, November 18, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಹೊಳಲು ಶಾಲೆಗಳಲ್ಲಿ ಸ್ವಾತಂತ್ರ್ಯೋತ್ಸವ

ಮಂಡ್ಯ ತಾಲೂಕಿನ ಹೊಳಲು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.

ಗ್ರಾ.ಪಂ. ಅಧ್ಯಕ್ಷರಾದ ಎಂ.ಕೆ.ಅರ್ಪಿತ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ, ಸ್ವಾತಂತ್ರ್ಯ ಬಂದು 77 ವರ್ಷಗಳಾಗಿದೆ. ಈ ದಿನದಂದು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಡಿದ ಮಹನೀಯರು, ದೇಶ ಕಾಯುವ ಯೋಧರನ್ನು ಸ್ಮರಿಸಬೇಕೆಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾಜಿ ಎಚ್ ಎಲ್.ಅಭಿನಂದನ್, ಎಚ್ ಡಿ ರವಿ, ಉಪಾಧ್ಯಕ್ಷರಾದ ಎಚ್ ಕೆ ಜಯಪ್ರಕಾಶ್, ಮಾಜಿ ಉಪಾಧ್ಯಕ್ಷರಾದ ಎಚ್ ಡಿ. ಪಲ್ಲವಿ. ಶಾಲಾ ಮುಖೋಪಾಧ್ಯಯರಾದ ಪುಷ್ಪಲತಾ, ಶಿಕ್ಷಕರಾದ ಶ್ರೀನಿವಾಸ್, ಸಂಗಪ್ಪ ರಾಜನಾಲ್, ಪುಟ್ಟಸ್ವಾಮಯ್ಯ ,ಸುಧಾ, ಸುನೀತಾ ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾಗೇಶ್, ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ 2022 -23 ನೇ ಸಾಲಿನಲ್ಲಿ (sslc) ಎಸ್ .ಎಸ್. ಎಲ್. ಸಿ .ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಬಹುಮಾನ ನೀಡಿ ಗೌರವಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ವೆಂಕಟೇಶ್ವರ ವಿದ್ಯಾನಿಕೇತನ ಶಾಲೆ ಸ್ವಾತಂತ್ರ್ಯೋತ್ಸವ

ಮಂಡ್ಯ ತಾಲೂಕು ಹೊಳಲು ಗ್ರಾಮದ ವೆಂಕಟೇಶ್ವರ ವಿದ್ಯಾನಿಕೇತನ ಶಾಲೆಯಲ್ಲಿ 77ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಗ್ರಾ.ಪಂ  ಅಧ್ಯಕ್ಷರಾದ ಎಂ.ಕೆ. ಅರ್ಪಿತಾ ಧ್ವಜಾರೋಹಣ ನೆರವೇರಿಸಿದರು.

ದೇಶದ ಗಡಿ ಭಾಗಗಳಲ್ಲಿ ಗಡಿ ಕಾಯುವ ವೀರಯೋಧರ ಸೇವೆ ಅಪಾರವಾದದ್ದು, ಆದ್ದರಿಂದ ವಿದ್ಯಾರ್ಥಿಗಳು ಅವರ ಜೀವನ ಚರಿತ್ರೆಯನ್ನು ಪ್ರತಿದಿನ ಓದಬೇಕು, ಅವರ ಹಾಗೆ ನಾವು ಜೀವನದಲ್ಲಿ ಮುಂದೆ ಬರಬೇಕೆಂದರು.

ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಎಚ್ ಎಲ್ ಅಭಿನಂದನ್, ಎಚ್ ಡಿ .ರವಿ, ಉಪಾಧ್ಯಕ್ಷರಾದ ಎಚ್. ಕೆ.ಜಯಪ್ರಕಾಶ್, ಮಾಜಿ ಉಪಾಧ್ಯಕ್ಷರಾದ ಎಚ್ ಡಿ .ಪಲ್ಲವಿ, ಶಾಲೆಯ ಆಡಳಿತ ಅಧಿಕಾರಿ ಸುಮ, ಮುಖ್ಯ ಶಿಕ್ಷಕ ಸಿಜೆ .ಜವರೇಗೌಡ, ವೀಣಾ, ಶಾಲೆಯ ಸಂಯೋಜಕಿ ಶೋಭಾ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ 2022 -23ನೇ ಸಾಲಿನ ಎಸ್.ಎಸ್.ಎಲ್.ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಶಾಲೆಯ ಮಕ್ಕಳಿಂದ ಮನೋರಂಜನ ಕಾರ್ಯಕ್ರಮ ನಡೆಯಿತು ಮಕ್ಕಳಿಗೆ ಸಿಹಿ ಹಂಚಲಾಗಿತ್ತು.

ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷರಾದ ಎಚ್ ಎಲ್ ಅಭಿನಂದನ್, ಎಚ್ ಡಿ .ರವಿ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ