ಮಂಡ್ಯದ ದ್ವಾರಕಾನಗರದಲ್ಲಿ ಗೋವು ರಕ್ಷಣಾ ಸಮಿತಿ ವತಿಯಿಂದ ಮೂರನೇ ವರ್ಷದ ಗೋವು ಪೂಜಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕ ಇಂಡುವಾಳು ಸಚ್ಚಿದಾನಂದ ಮಾತನಾಡಿ, ಗೋಮಾತೆ ಪೂಜೆ ಮಾಡಿ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುವ ಇಂತಹ ಕಾರ್ಯಕ್ರಮ ಶ್ಲಾಘನೀಯ ಎಂದರು.
ದ್ವಾರಕಾ ನಗರ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿದ್ದು, ಅಭಿವೃದ್ಧಿಯಲ್ಲಿ ಬಹಳ ಹಿಂದುಳಿದಿದೆ. ಮುಂಬರುವ ದಿನಗಳಲ್ಲಿ ದ್ವಾರಕ ನಗರ ಸುತ್ತಮುತ್ತಲ ಬಡಾವಣೆಗಳು ಅಭಿವೃದ್ಧಿ ಕಾಣಲು ಕೈ ಜೋಡಿಸಿ ಎಂದು ಜನರಿಗೆ ಮನವಿ ಮಾಡಿದರು.
ಅಶೋಕ್ ಜಯರಾಂ ಮಾತನಾಡಿ, ಗೋವುಗಳನ್ನು ಉಳಿಸಿ ಬೆಳೆಸುವ ಕೆಲಸವನ್ನು ಗೋವು ರಕ್ಷಕಾ ಸಮಿತಿ ಮಾಡುತ್ತಿರುವುದು ಸಂತಸದ ವಿಷಯ. ಗೋವುಗಳಿಂದ ಆಗುವ ಅನುಕೂಲವನ್ನು ದೇಶದಲ್ಲೆಡೆ ಪಸರಿಸು ವಂತಾಗಬೇಕು. ಇಂದು ದೇಶಾದ್ಯಂತ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ದಿನ ರೈತರು ಸೂರ್ಯ ದೇವರಿಗೆ ನಮನ ಸಲ್ಲಿಸುತ್ತಾರೆ ಮತ್ತು ಉತ್ತಮ ಫಸಲನ್ನು ಬಯಸುತ್ತಾರೆ. ಅದರಂತೆ ಇಂದು ರೈತರು ಭತ್ತ,ರಾಗಿಯನ್ನು ರಾಶಿ ಮಾಡಿ ಸಿಂಗರಿಸಿ, ಗೋವುಗಳಿಗೆ ಸಿಂಗರಿಸಿ ಪೂಜೆ ಸಲ್ಲಿಸುತ್ತಾರೆ.ಇದರಿಂದ ಭಾರತೀಯ ಸಂಸ್ಕೃತಿ ಮತ್ತಷ್ಟು ಬೆಳೆಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ರೈತಸಂಘದ ಮುಖಂಡ ಮಧುಚಂದನ್, ಗೋರಕ್ಷಕ ಸಮಿತಿ ಅಧ್ಯಕ್ಷ ಎಚ್ ಆರ್ ಅಶೋಕ್ ಕುಮಾರ್, ಸಮಿತಿಯ ರಘು, ವೀರಭದ್ರ,ಪೂರ್ಣ, ನಾಗಾರ್ಜುನ್, ಬಸವರಾಜು, ಪ್ರಕಾಶ್, ಮಲ್ಲೇಶ್, ದುರ್ಗೇಗೌಡ,ಪ್ರಭು ಸೇರಿದಂತೆ ಇನ್ನಿತರರಿದ್ದರು.




