Thursday, September 19, 2024

ಪ್ರಾಯೋಗಿಕ ಆವೃತ್ತಿ

ಭಾರತದ ಹಸಿವಿನ ಸೂಚ್ಯಂಕ 101ನೇ ಸ್ಥಾನದಿಂದ 107ನೇ ಸ್ಥಾನಕ್ಕೆ ಜಿಗಿತ

ವಿಶ್ವಸಂಸ್ಥೆಯು ಬಿಡುಗಡೆ ಮಾಡಿರುವ 121 ರಾಷ್ಟ್ರಗಳ ಪೈಕಿ ಹಸಿವಿನ ಸೂಚ್ಯಂಕದಲ್ಲಿ ಭಾರತವು 107 ನೇ ಸ್ಥಾನಕ್ಕೆ ಏರಿದೆ.

ಆದರೆ ಭಾರತ ಸರ್ಕಾರ ವಿಶ್ವಸಂಸ್ಥೆಯ ಹಸುವಿನ ಸೂಚ್ಯಂಕದ ಪಟ್ಟಿಯನ್ನೇ ಸುಳ್ಳು ಎಂದು ಹೇಳುವುದರ ಮೂಲಕ ವಿಶ್ವಸಂಸ್ಥೆಯ ಹೇಳಿಕೆಯನ್ನೇ ಧಿಕ್ಕರಿಸಿದೆ‌.

ಧಿಕ್ಕರಿಸಿದ ಹಿನ್ನೆಲೆಯಲ್ಲಿ ನಾನಾ ದೇಶಗಳ ದೃಷ್ಟಿಕೋನ ಭಾರತದ ಮೇಲೆ ಪರೋಕ್ಷ ಕಣ್ಣೋಟವನ್ನೇ ಸೃಷ್ಟಿಸಿದೆ.

2011ನೇ ವರ್ಷದ ಪಟ್ಟಿಯನ್ನು ಹೋಲಿಸಿದರೆ 116 ದೇಶಗಳ ಸರ್ವೆಯ ಪ್ರಕಾರ 101ನೇ ಸ್ಥಾನದಲ್ಲಿದ್ದ ಭಾರತದ ಹಸಿವಿನ ಸೂಚ್ಯಂಕ, ಪ್ರಸ್ತುತ ವರ್ಷದಲ್ಲಿ 107ನೇ ಸ್ಥಾನಕ್ಕೆ ಬಂದು ನಿಂತಿದೆ.

ವಿಶ್ವಸಂಸ್ಥೆಯು 2014 ರಲ್ಲಿ ಹಸಿವಿನ ಸೂಚ್ಯಂಕದ ಮಾಪನವನ್ನು ಕಂಡುಕೊಳ್ಳಲು ನಾಲ್ಕು ರೀತಿಯ ಮಾನದಂಡನೆಗಳನ್ನು ಇಟ್ಟುಕೊಂಡಿತ್ತು.

1. ಒಬ್ಬ ವ್ಯಕ್ತಿಗೆ ದಿನನಿತ್ಯದ ಆಹಾರ ಸಿಗದೇ ಇರುವುದು.( ಅಪೌಷ್ಟಿಕತೆ)(33ಅಂಕ)
2. ವಯಸ್ಸಿಗೆ ತಕ್ಕ ಎತ್ತರ ಇಲ್ಲದಿರುವುದು.(16 ಅಂಕ)
3. ಎತ್ತರಕ್ಕೆ ತಕ್ಕ ತೂಕ ಇಲ್ಲದಿರುವುದು.(16 ಅಂಕ)
4. ಐದು ವರ್ಷ ತುಂಬದ ಮಕ್ಕಳ ಮರಣ ಪ್ರಮಾಣ.(33ಅಂಕ)

ಈ ನಾಲ್ಕು ಮಾನದಂಡಗಳ ಪ್ರಕಾರ ಭಾರತವು ಅತ್ಯಂತ ಹೀನಾಯ ಸೂಚ್ಯಂಕದ ಮೇರೆಗೆ 107ನೇ ಸ್ಥಾನಕ್ಕೆ ಏರಿದೆ ಎಂದು ವಿಶ್ವಸಂಸ್ಥೆಯ ಜೊತೆಗೆ ಹೊಂದಾಣಿಕೆ ಹೊಂದಿರುವ ಜರ್ಮನಿಯ ಸಂಸ್ಥೆಯು ಹಸಿವಿನ ಸೂಚ್ಯಂಕದ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಹಿಂದೂ ಪತ್ರಿಕೆಯು ಸುದ್ದಿ ಮಾಡಿರುವುದನ್ನೂ ನೋಡಬಹುದು.

ದಿನೇ ದಿನೇ ಅಪೌಷ್ಟಿಕತೆಯಿಂದ ಕೂಡಿದ ಆಹಾರದ ಲಭ್ಯದ ಕುರಿತಾಗಿ ಐದು ವರ್ಷವನ್ನು ಪೂರೈಸದ ಮಕ್ಕಳ ಮರಣ ಪ್ರಮಾಣ ಹೆಚ್ಚಾಗಿದೆ ಎಂದು ವಿಶ್ವಸಂಸ್ಥೆಯು ತನ್ನ ಪಟ್ಟಿಯಲ್ಲಿ ಬಿಡುಗಡೆ ಮಾಡಿದೆ.

ಇತ್ತೀಚೆಗಷ್ಟೇ ಅತ್ಯಂತ ಆರ್ಥಿಕ ಸಂಕಷ್ಟ ಎದುರಿಸಿದ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಒಳಗೊಂಡಂತೆ ಇನ್ನೂ ಅನೇಕ ದೇಶಗಳು ಸಹ ಹಸಿವಿನ ಸೂಚ್ಯಂಕದ ಪಟ್ಟಿಯಲ್ಲಿ ಭಾರತಕ್ಕಿಂತ ಸುಸ್ಥಿರತೆ ಕಾಪಾಡಿಕೊಂಡಿವೆ.

ಇಷ್ಟಿದ್ದರೂ ಸಹ ಭಾರತದ ಸರ್ಕಾರ ಹಸುವಿನ ಸೂಚ್ಯಂಕದ ಮಾಪನವನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಳ್ಳಿ ಹಾಕಿದೆ. ಈ ಹೇಳಿಕೆಯು ನಾಗರಿಕರ ನಡುವೆ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!