Thursday, September 19, 2024

ಪ್ರಾಯೋಗಿಕ ಆವೃತ್ತಿ

ಒಳ ಮೀಸಲಾತಿ ಜಾರಿಗೊಳಿಸದಿದ್ದರೆ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ : ಎನ್.ಆರ್.ಚಂದ್ರಶೇಖರ್

ನ್ಯಾಯಮೂರ್ತಿ ಸದಾಶಿವ ಆಯೋಗ ನೀಡಿರುವ ವರದಿಯಂತೆ ರಾಜ್ಯ ಸರ್ಕಾರ ಪರಿಶಿಷ್ಠ ಜಾತಿಗಳಿಗೆ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕು, ಇಲ್ಲವಾದರೆ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಡಾ.ಬಾಬುಜಗಜೀವನ ರಾಮ್ ಸಂಘಗಳ ಒಕ್ಕೂಟದ ಮಂಡ್ಯ ಜಿಲ್ಲಾಧ್ಯಕ್ಷ ಎನ್.ಆರ್.ಚಂದ್ರಶೇಖರ್ ಎಚ್ಚರಿಕೆ ನೀಡಿದರು.

ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರಲ್ಲಿ ವಿವಿಧ ಸಂಘಗಳ ಪದಾಧಿಕಾರಿಗಳೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರವೇ ನೇಮಕ ಮಾಡಿದ್ದ ನ್ಯಾ.ಸದಾಶಿವ ಅವರ ನೇತೃತ್ವದ ಆಯೋಗ ನೀಡಿರುವ ವರದಿಯಂತೆ ಮಾದಿಗ ಜನಾಂಗಕ್ಕೆ ಶೇ.6 ಛಲವಾದಿ ಹೊಲೆಯ ಸಮುದಾಯಕ್ಕೆ ಶೇ 5, ಭೋವಿ ಲಂಬಾಣಿ ಸಮುದಾಯಕ್ಕೆ ಶೇ 3. ಇತರರಿಗೆ ಶೇ. 1 ಸೇರಿದಂತೆ ಒಟ್ಟು ಮೀಸಲಾತಿಯನ್ನು ಹಂಚಿಕೆ ಮಾಡಿ ವರದಿ ಸಲ್ಲಿಸಿದೆ. ಆದರೆ ಸರ್ಕಾರ ಇದನ್ನು ಜಾರಿಗೊಳಿಸಲು ಮೀನಾಮೇಷ  ಏಣಿಸುತ್ತಿದೆ ಎಂದು ಕಿಡಿಕಾರಿದರು.

ಸರ್ಕಾರ ತಕ್ಷಣ ಪರಿಶಿಷ್ಟ ಜಾತಿಗೆಳಿಗೆ ಒಳಮೀಸಲಾತಿ ನೀಡಬೇಕು. ಇಲ್ಲವಾದರೆ ಮುಂದಿನ ಚುನಾವಣೆಯಲ್ಲಿ ನಾವು ಸರ್ಕಾರಕ್ಕೆ ತಕ್ಕ ಪಾಠ ಕಲಿಸವೇಕಾಗುತ್ತದೆ ಎಂದು ಎಚ್ಚರಿಗೆ ನೀಡಿದರು. ಜೊತೆಗೆ ರಾಷ್ಟ್ರೀಯ ಕಾರ್ಯಕ್ರಮ‌ ಹಾಗೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಡಾ.ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರವನ್ನು ಕಡ್ಡಾಯವಾಗಿ ಹಾಕುವಂತೆ ಮನವಿ ಚಂದ್ರಶೇಖರ್ ಮನವಿ ಮಾಡಿದರು.

ಓಟ್ ಬ್ಯಾಂಕ್ ಮಾಡಿಕೊಂಡ ರಾಜಕೀಯ ಪಕ್ಷಗಳು

ಕೆ.ಆರ್.ಪೇಟೆ ತಾಲ್ಲೂಕು ಬಾಬು ಜಗಜೀವನ್ ರಾಂ ಒಕ್ಕೂಟದ ಅಧ್ಯಕ್ಷ ಎಚ್.ಎಂ.ಪುಟ್ಟರಾಜು ಮಾತನಾಡಿ ಕಾಂಗ್ರೆಸ್, ಜೆ.ಡಿ.ಎಸ್ ಮತ್ತು ಬಿಜೆಪಿ ಮೂರು ಪಕ್ಷಗಳು ಒಳ ಮೀಸಲಾತಿ ನೀಡುತ್ತೇವೆಂದು ನಮ್ಮ ಸಮುದಾಯವನ್ನು ಓಟ್ ಬ್ಯಾಂಕ್ ಮಾಡಿಕೊಂಡಿವೆ. ಆದರೆ ಇರುವರೆವಿಗೂ ನ್ಯಾಯಯುತವಾಗಿ ನಮ್ಮ ಬೇಡಿಕೆಯನ್ನು ಈಡೇರಿಸಿಲ್ಲ ಎಂದು ದೂರಿದರು.

ಈ ಹಿಂದೆ ಮಾತುಕೊಟ್ಟು ಅನ್ಯಾಯ ಮಾಡಿರುವವರಿಗೆ ಜನರೇ ತಕ್ಕ ಪಾಠಕಲಿಸಿದ್ದಾರೆ. ಇದೇ ಮಾದರಿಯಲ್ಲಿ ಮುಂದಿನ‌ ಚುನಾವಣೆಯಲ್ಲಿ ಬಿಜೆಪಿಗೆ ಪಾಠ ಕಲಿಸಬಾರದು ಎಂದಾದರೆ ತಕ್ಷಣ ಒಳ ಮೀಸಲಾತಿ ನೀಡಬೇಕು ಎಚ್ಚರಿಗೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಕಾಂತರಾಜು, ಸಂಘಟನಾ ಕಾರ್ಯದರ್ಶಿ ಸುರೇಶ್, ಖಂಜಾಚಿ ಎನ್.ಸ್ವಾಮಿ, ನಿವೃತ ಶಿಕ್ಷಕ ಎಂ.ಶಿವಣ್ಣ, ಮುಖಂಡರಾದ ಕಿಕ್ಕೇರಿ ಕೃಷ್ಣಪ್ಪ, ಎಚ್.ಬಿ.ಚಂದ್ರಶೇಖರ್, ಗೋಪಿನಾಥ್, ದೇವರಾಜು,  ಜಯರಾಮ್, ಪರಮೇಶ್, ಮಹದೇವ್, ಭೋಜರಾಜ್ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!