Thursday, November 19, 2026

ಪ್ರಾಯೋಗಿಕ ಆವೃತ್ತಿ

ವಿದ್ಯಾಸಂಸ್ಥೆ ವ್ಯಾಪ್ತಿಯಲ್ಲಿ ತಂಬಾಕು ಮಾರಬೇಡಿ

ವಿದ್ಯಾಸಂಸ್ಥೆಗಳ ವ್ಯಾಪ್ತಿಯಲ್ಲಿ ಶೇ.100ರಷ್ಟು ತಂಬಾಕು ಮುಕ್ತಗೊಳಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ನಿರಂತರ ಕೋಟ್ಪಾ ಕಾರ್ಯಾಚರಣೆ ಇಂದು ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ನಿಯಮಬಾಹಿರವಾಗಿ ತಂಬಾಕು ಉತ್ಪನ್ನಗಳನ್ನು ವಿದ್ಯಾಸಂಸ್ಥೆಗಳ 100 ಅಡಿ ವ್ಯಾಪ್ತಿಯಲ್ಲಿ ನಿಯಮಬಾಹಿರವಾಗಿ ಮಾರಾಟ ಹಾಗೂ ಬಳಕೆಯಲ್ಲಿದ್ದ ಅಂಗಡಿಗಳ ಮೇಲೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಶಾಲಾ ಕಾಲೇಜುಗಳ ಬಳಿ, ಸಾರ್ವಜನಿಕ ಸ್ಥಳಗಳಲ್ಲಿ ಕೋಟ್ಪಾ ಕಾರ್ಯಾಚರಣೆ ನಡೆಸಲಾಯಿತು.

ಈ ಕಾರ್ಯಾಚರಣೆಯಲ್ಲಿ ಸೆಕ್ಷನ್ 4 ರ ಅಡಿಯಲ್ಲಿ 6 ಪ್ರಕರಣ ದಾಖಲಿಸಿ ರೂ 700 ದಂಡ ಮತ್ತು ಸೆಕ್ಷನ್ 6ಬಿ ಅಡಿಯಲ್ಲಿ 10 ಪ್ರಕರಣ ರೂ.1700/- ದಂಡ ಒಟ್ಟಾರೆಯಾಗಿ 16 ಪ್ರಕರಣಗಳನ್ನು ದಾಖಲಿಸಿ ರೂ 2400/- ದಂಡ ವಿಧಿಸಲಾಯಿತು.

ಹಾಗೆಯೇ ಇನ್ನು ಮುಂದೆ ಈ ರೀತಿಯಾಗಿ ನಿಯಮ ಉಲ್ಲಂಘನೆ ಮಾಡದಂತೆ ಹಾಗೂ ಸಿಗರೇಟು ಚಟ ತ್ಯಜಿಸುವವರು ಸಮುದಾಯ ಆರೋಗ್ಯ ಕೇಂದ್ರ, ಕೆ.ಎಂ. ದೊಡ್ಡಿಯ ತಂಬಾಕು ವ್ಯಸನಮುಕ್ತ ಕೇಂದ್ರದ ಉಚಿತ ಸೇವಾ ಸೌಲಭ್ಯಗಳನ್ನು ಬಳಸಿಕೊಳ್ಳಲು ಕರಪತ್ರಗಳನ್ನು ವಿತರಿಸಿ ಅರಿವು ಮೂಡಿಸಲಾಯಿತು.

ಇಂದಿನ ಕಾರ್ಯಾಚರಣೆಯಲ್ಲಿ ಆರಕ್ಷಕ ಉಪ ನಿರೀಕ್ಷಕರಾದ ಭೀಮಪ್ಪ, ಜಿಲ್ಲಾ ಸಲಹೆಗಾರರಾದ ತಿಮ್ಮರಾಜು ಎಸ್. ಎನ್., ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣೇಗೌಡ, ಸಾಮಾಜಿಕ ಕಾರ್ಯಕರ್ತರಾದ ಮೋಹನ್ ಕುಮಾರ್, ಆರೋಗ್ಯ ನಿರೀಕ್ಷಣಾಧಿಕಾರಿ ಶಿವರಾಜು,ಆರಕ್ಷಕರಾದ ಮಹೇಶ್ ಹಾಜರಿದ್ದರು.

ನಮ್ಮ ನುಡಿ ಕರ್ನಾಟಕ YouTube ಚಾನಲ್ ವೀಡಿಯೋ ಗಳನ್ನು ನೋಡಲು ಕೆಳಗಿನ ಲಿಂಕ್ ನ್ನು ಕ್ಲಿಕ್ ಮಾಡಿ.

https://bit.ly/3DEHvvv

ನೆಚ್ಚಿನ ಸುದ್ದಿಗಳ ಓದಿಗಾಗಿ ನಮ್ಮ WhatsApp ಗ್ರೂಪ್ ಸೇರಲು 👇 ಈ ಲಿಂಕ್ ಮೇಲೆ ಸೇರಿರಿ.

https://chat.whatsapp.com/KWv6TFFjpipBRKbqUKkHKJ

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ