ಪೊಲೀಸರು ಹಾಗೂ ಆಟೋ ಚಾಲಕರು ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು. ನಾನು ಮೇಲೂ ಎಂಬ ಪ್ರತಿಷ್ಠೆಯನ್ನು ಯಾರೂ ವ್ಯಕ್ತಪಡಿಸಬಾರದು ಎಂದು ಶಾಸಕ ರವಿಕುಮಾರ್ ಗಣಿಗ ಸಲಹೆ ನೀಡಿದರು.
ಮಂಡ್ಯ ಜಿಲ್ಲಾ ಪೊಲೀಸ್ ಉಪ ವಿಭಾಗದ ವತಿಯಿಂದ ಮಂಡ್ಯ ನಗರದ ಕಾಳಿಕಾಂಬ ಸಮುದಾಯ ಭವನದಲ್ಲಿ ಶನಿವಾರ ನಡೆದ ಮಂಡ್ಯ ನಗರದ ಆಟೋ ಚಾಲಕರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಂಡ್ಯನಗರದಲ್ಲಿ ಆಟೋ ರಿಜಿಸ್ಟ್ರೇಷನ್ಗಳು ಆಗುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿವೆ, ಪ್ರತಿಯೊಬ್ಬರು ರಿಜಿಸ್ಟ್ರೇಷನ್ ಮಾಡಿಕೊಂಡೇ ರಸ್ತೆಗಿಳಿಯಬೇಕು. ಎಲ್ಲರೂ ನೆಲದ ಕಾನೂನನ್ನು ಗೌರವಿಸಬೇಕು. ಮುಂದಿನ ದಿನಗಳಲ್ಲಿ ಮಂಡ್ಯ ನಗರದ ರಸ್ತೆಗಳನ್ನು ಸಂಪೂರ್ಣ ಡಾಂಬರೀಕರಣ ಮಾಡಿ, ವಾಹನಗಳ ಓಡಾಟಕ್ಕೆ ಅನುಕೂಲ ಮಾಡಿ ಕೊಡಲಾಗುವುದು. ಅ.31 ರೊಳಗೆ ಪ್ರತಿಯೊಬ್ಬರು ಆಟೋಗಳಿಗೆ ನಂಬರ್ಗಳನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಬಸ್ಗಳು ಸಹ ಮಂಡ್ಯನಗರದಲ್ಲಿ ಎಲ್ಲೆಂದರಲ್ಲಿ ನಿಲ್ಲಿಸುವುದಕ್ಕೆ ಕಡಿವಾಣ ಹಾಕಲಾಗುವುದು, ಬಸ್ನವರು ನಿಲ್ದಾಣಗಳಲ್ಲಿಯೇ ನಿಲ್ಲಿಸುವಂತೆ ಸಂಬಂಧಪಟ್ಟ ಇಲಾಖೆಯವರಿಗೆ ತಿಳಿಸುತ್ತೇನೆ, ನನ್ನ ಅನುದಾನದಲ್ಲಿ ₹1 ಲಕ್ಷ ನೀಡುತ್ತೇನೆ ಇದರ ಸದ್ಭಳಕೆ ಮಾಡಿಕೊಳ್ಳಿ ಆಟೋ ಚಾಲಕರಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಶಿವಮೂರ್ತಿ, ಮಂಡ್ಯ ನಗರ ಸಿಪಿಐ ಜಾಯ್ ಆಂಥೋನಿ, ಸಿಪಿಐ ನವೀನ್ ಸುಬೇದಾರ್, ರಾಜೀವ್ ಗಾಂಧಿ ಆಟೋ ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಕೃಷ್ಣ, ಉಪಾಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಸತ್ಯನಾರಾಯಣ ಸೇರಿದಂತೆ ಆಟೋ ಚಾಲಕರು ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.




