ಡಿಸೆಂಬರ್ ತಿಂಗಳಿನಲ್ಲಿ ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹೊರತರಲಿರುವ ಸ್ಮರಣ ಸಂಚಿಕೆಗೆ ಸಮಕಾಲೀನ ಸಂದರ್ಭದಲ್ಲಿ ಸಾಹಿತ್ಯ ಕೃಷಿ ಮಾಡುತ್ತಿರುವ ಮಂಡ್ಯ ಜಿಲ್ಲೆಯ ಕವಿಗಳು ಮತ್ತು ಕವಯಿತ್ರಿಯರು ತಮ್ಮ ಪರಿಚಯಾತ್ಮಕ ಲೇಖನ ಕಳುಹಿಸಿಕೊಡುವಂತೆ ಸಾಹಿತಿ ಟಿ. ಸತೀಶ್ ಜವರೇಗೌಡ ಮನವಿ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯಲ್ಲೇ ಇರುವ ಹಾಗೂ ಮೂಲತಃ ಮಂಡ್ಯ ಜಿಲ್ಲೆಯವರಾಗಿದ್ದು, ಹೊರ ಜಿಲ್ಲೆಗಳಲ್ಲಿ ವಾಸವಿರುವ ಕವಿಗಳು ಮತ್ತು ಕವಯಿತ್ರಿಯರು ತಮ್ಮ ಪ್ರಕಟಿತ ಕೃತಿಗಳು, ವರ್ಷ, ಅವು ಯಾವ ಸಾಹಿತ್ಯ ಪ್ರಕಾರಕ್ಕೆ ಸೇರಿದವು, ಸಾಹಿತ್ಯ ಸಾಧನೆಗೆ ಸಂದಿರುವ ಪ್ರಶಸ್ತಿಗಳ ವಿವರದ ಜೊತೆಗೆ ಸಂಪೂರ್ಣ ಪರಿಚಯವನ್ನು ಕಳುಹಿಸಿಕೊಡಬಹುದು.
ಡಿ.1ರ ಸಂಜೆಯೊಳಗೆ ತಲುಪುವಂತೆ ವಾಟ್ಸಾಪ್ 9880264678 ಸಂಖ್ಯೆಗೆ ಸಾಹಿತ್ಯ ಕೃಷಿಯ ವಿವರಾತ್ಮಕ ಪರಿಚಯವನ್ನು ಮೊಬೈಲಿನಲ್ಲೇ ಬರೆದು (ಟೈಪ್ ಮಾಡಿ) ಕಳುಹಿಸಿಕೊಡಬೇಕೆಂದು ಅವರು ಕೋರಿದ್ದಾರೆ.




