ಎಲ್ಲಿಯ ಐಪಿಎಲ್… ಎಲ್ಲಿಯ ಚಿಕ್ಕರಸಿಕೆರೆ ಶ್ರೀ ಕಾಲಭೈರವೇಶ್ವರ ಕಲಾತಂಡ…ಸದ್ಯಕ್ಕೆ ಏನಂತ ಅಂದ್ರೆ, ನಮ್ಮ ಮದ್ದೂರು ತಾಲ್ಲೂಕಿನ ಭಾರತೀನಗರ ಸಮೀಪದ ಚಿಕ್ಕರಸಿನಕೆರೆ ಗ್ರಾಮದ ಚಿಕ್ಕಬೋರಯ್ಯ ನೇತೃತ್ವದ ಶ್ರೀ ಕಾಲಭೈರವೇಶ್ವರ ಕಲಾ ತಂಡವು ಇಂದು ಜೂ.29 ರಂದು ಸಂಜೆ ಗುಜಾರತ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ 14ನೇ ಆವೃತ್ತಿಯ ಐಪಿಎಲ್ ಫೈನಲ್ ಪಂದ್ಯದಲ್ಲಿ ತಮ್ಮ ಕಲಾ ಪ್ರದರ್ಶನ ನೀಡುವುದಕ್ಕೆ ಆಯ್ಕೆಯಾಗಿದೆ.
ಈ ಹಿಂದೆ ಇದೇ ತಂಡವೂ ಮೂರು ಭಾರಿ ಬೆಂಗಳೂರು ಹಾಗೂ ಹೈದರಾಬಾದಿನಲ್ಲಿ ತನ್ನ ಕಲಾ ಪ್ರತಿಭೆಯನ್ನು ತೋರಿಸಿತ್ತು. ಚಿಕ್ಕರಸಿನಕೆರೆ ಚಿಕ್ಕಬೋರಯ್ಯನವರ ಪೂಜಾಕುಣಿತ ತಂಡ ಹಲವು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದು ಈಗ 6ನೇ ಬಾರಿ ಐಪಿಎಲ್ ಪಂದ್ಯದಲ್ಲಿ ಭಾಗವಹಿಸಿದೆ. ಈ ಕಲಾತಂಡದಲ್ಲಿ 10 ಮಂದಿ ಕಲಾವಿದರು ಭಾಗಿಯಾಗಿದ್ದು ,ಈ ತಂಡಕ್ಕೆ ಶಿವಮೊಗ್ಗದ ಕಲಾವಿದರ ತಂಡವು ಸಾಥ್ ನೀಡಲಿರುವುದು ವಿಶೇಷ.
ಮಂಡ್ಯ ಜಿಲ್ಲೆಯ ಚಿಕ್ಕರಸಿನಕೆರೆ ಹೋಬಳಿಯ ಚಿಕ್ಕ ಬೋರಯ್ಯ, ನಂದೀಶ್ ಶೆಟ್ಟಹಳ್ಳಿ, ಸಿದ್ದೇಗೌಡ, ಮೆಣಸಗೆರೆ ನಿಂಗರಾಜು . ಎಂ ಎನ್ ರಾಜೇಶ್, ಕೊತ್ತತ್ತಿ ಸಿದ್ದಯ್ಯ, ಜೋಗಿ ಬೇವಿನಹಳ್ಳಿ, ಪುನೀತ್ ಗೌಡ, ಸಂತೆಕಸಲಗೆರೆ ಬಸವರಾಜು ಈ ತಂಡದಲ್ಲಿ ಪಾಲ್ಗೊಂಡಿದ್ದಾರೆ.
ಒಟ್ಟಾರೆ ಮಂಡ್ಯ ಕಲಾವಿದರ ಕಂಪು ದೂರದ ಗುಜರಾತಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಸರಿಸುತ್ತಿರುವುದು ಮಂಡ್ಯ ಜಿಲ್ಲೆಗೆ ಹಾಗೂ ನಾಡಿಗೆ ಹೆಮ್ಮೆಯ ಸಂಗತಿಯಾಗಿದೆ.