Thursday, September 19, 2024

ಪ್ರಾಯೋಗಿಕ ಆವೃತ್ತಿ

ಜ.1ರಿಂದ ಬೆಂಬಲ ಬೆಲೆಯಲ್ಲಿ ಭತ್ತ-ರಾಗಿ ಖರೀದಿ ಆರಂಭ

2022-23ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸರ್ಕಾರದ ಆದೇಶದಂತೆ ಮಂಡ್ಯ ತಾಲ್ಲೂಕಿನಲ್ಲಿ ರೈತರಿಂದ ಭತ್ತ ಮತ್ತು ರಾಗಿಯನ್ನು ಖರೀದಿಸಲು ಖರೀದಿ ಪ್ರಕ್ರಿಯೆಯ ಅವಧಿಯು ಜನವರಿ 1 ರಿಂದ ಮಾರ್ಚ್ 31 ರವರೆಗೆ ಆಗಿರುತ್ತದೆ.

ನೋಂದಣಿ ಕೇಂದ್ರಗಳಾದ ರೈತ ಸಂಪರ್ಕ ಕೇಂದ್ರ ಕೊತ್ತತ್ತಿಗೆ ಕರ್ನಾಟಕ ರಾಜ್ಯ ಉಗ್ರಾಣ ನಿಗಮ SWC ( State Warehousing Corporation) ಯಲಿಯೂರು ದಾಸ್ತಾನು ಕೇಂದ್ರವಾಗಿದೆ.

ರೈತ ಸಂಪರ್ಕ ಕೇಂದ್ರ ಕೆರಗೋಡು, ನಾಡಕಛೇರಿ ಬಸರಾಳು, ರೈತ ಸಂಪರ್ಕ ಕೇಂದ್ರ ದುದ್ದ ಕೇಂದ್ರಗಳಿಗೆ SWC ಉಮ್ಮಡಹಳ್ಳಿ ಆಗಿರುತ್ತದೆ.

ಭತ್ತ ಖರೀದಿ ಕೇಂದ್ರಗಳಾದ  SWC  ಉಮ್ಮಡಹಳ್ಳಿ,  SWC ಯಲಿಯೂರು, ಖಾಸಗಿ ಗೋದಾಮು ಶಿವಳ್ಳಿ, ಖಾಸಗಿ ಗೋದಾಮು ಬಸರಾಳು, ಖಾಸಗಿ ಗೋದಾಮು ಕೊತ್ತತ್ತಿ, ಖಾಸಗಿ ಗೋದಾಮು ಕೆರಗೋಡು ಆಗಿರುತ್ತದೆ. ರಾಗಿ ಖರೀದಿ ಕೇಂದ್ರಗಳಿಗೆ  SWC  ಉಮ್ಮಡಹಳ್ಳಿ ಮತ್ತು  SWC ಯಲಿಯೂರು ಆಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಶಾಖಾ ವ್ಯವಸ್ಥಾಪಕರನ್ನು ಸಂಪರ್ಕಿಸಬಹುದೆಂದು ಮಂಡ್ಯ ತಾಲ್ಲೂಕು ತಹಶೀಲ್ದಾರ್ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!