Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯದಲ್ಲಿ ಕರ್ನಾಟಕ ಅಂಧರ ಕ್ರಿಕೆಟ್ ಟೂರ್ನಮೆಂಟ್

ಸಮರ್ಥನಂ ಅಂಗವಿಕಲರ ಸಂಸ್ಥೆ ಮತ್ತು ಕರ್ನಾಟಕ ಅಂಧರ ಕ್ರಿಕೆಟ್ ಮಂಡಳಿ (ಕೆಸಿಎಬಿ) ಜಂಟಿಯಾಗಿ ಮಂಡ್ಯದಲ್ಲಿ ಜನವರಿ 2 ರಿಂದ 4 ರವರೆಗೆ ಮೂರು ದಿನಗಳ ಕಾಲ ಕರ್ನಾಟಕ ಚಾಲೆಂಜರ್ಸ್ ಅಂಧರ ಕ್ರಿಕೆಟ್ ಟೂರ್ನಮೆಂಟ್‍ನ್ನು ಆಯೋಜನೆ ಮಾಡಲಾಗಿದೆ. ರಾಜ್ಯದ 19 ಜಿಲ್ಲೆಗಳಿಂದ 44 ಆಟಗಾರರು ಭಾಗವಹಿಸಲಿದ್ದಾರೆ.

ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ 17 ಆಟಗಾರರನ್ನು ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆ ಮಾಡಲಾಗುವುದು. ಈ ರಾಜ್ಯ ತಂಡ ಮುಂಬರುವ ರಾಷ್ಟ್ರ ಮಟ್ಟದ 5ನೇ ಟಿ-20  ಕ್ರಿಕೆಟ್ ನಾಗೇಶ ಟ್ರೋಪಿಯಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ. ಕರ್ನಾಟಕ ಅಂಧರ ಕ್ರಿಕೆಟ್ ಟೂರ್ನಮೆಂಟ್ ಜನವರಿ 2 ರಂದು ಬೆಳಿಗ್ಗೆ 8.30ಕ್ಕೆ ಪಿಇಟಿ ಮೈದಾನದಲ್ಲಿ ಉದ್ಘಾಟನೆಗೊಳ್ಳಲಿದೆ.

ಭಾರತದಲ್ಲಿ ನಡೆದ ಅಂಧರ ಟಿ-20, 3ನೇ ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ರಾಜ್ಯದ ಮೂರು ಆಟಗಾರರು ಈ ಟೂರ್ನಮೆಂಟ್‍ನಲ್ಲಿ ಭಾಗವಹಿಸಿ, ಟೂರ್ನಮೆಂಟ್‍ನ್ನು ವೀಕ್ಷಿಸಿ ಅತ್ಯುತ್ತಮ ಆಟಗಾರರನ್ನು ಆಯ್ಕೆ ಮಾಡಲಿದ್ದಾರೆ.

ವಿಕಲಚೇತನರನ್ನು ಕ್ರೀಡೆ ಮತ್ತು ವಿವಿಧ ರಂಗಗಳಲ್ಲಿ ಪ್ರೋತ್ಸಾಹಿಸಲು ಅವರನ್ನು ಸುಧಾರಿಸಲು ಸಮರ್ಥನಂ ಅಂಗವಿಕಲರ ಸಂಸ್ಥೆಯ ಅಡಿಯಲ್ಲಿ ಭಾರತ ಅಂಧರ ಕ್ರಿಕೆಟ್ ಮಂಡಳಿ (CABI ) ಮತ್ತು ಕರ್ನಾಟಕ ಅಂಧರ ಕ್ರಿಕೆಟ್ ಮಂಡಳಿ (ಕೆಸಿಎಬಿ)  ಅಂಗಸಂಸ್ಥೆಗಳನ್ನು 2010 ರಿಂದ ಸ್ಥಾಪಿಸಿ ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಅಂಧರ ಕ್ರಿಕೆಟ್ ಟೂರ್ನಿಮೆಂಟ್ ಗಳನ್ನು ಆಯೋಜನೆ ಮಾಡುತ್ತ ಬಂದಿದೆ.

ಕಾರ್ಯಕ್ರಮದಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು, ಜಿಲ್ಲಾಧಿಕಾರಿ ಡಾ.ಗೋಪಾಲಕೃಷ್ಣ, ನಗರಸಭೆ ಅಧ್ಯಕ್ಷ ಹೆಚ್.ಎಸ್.ಮಂಜು, ಎಸ್.ಬಿ.ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ, ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯ ಮೈಸೂರು ವಲಯದ ಸಂಚಾಲಕ ಆರ್.ಕೆ.ಹರಿಕೃಷ್ಣ ಕುಮಾರ್, ವಿಕಾಶನ ಸಂಸ್ಥೆಯ ನಿರ್ದೇಶಕ ಮಹೇಶ ಚಂದ್ರ ಗುರು ಭಾಗವಹಿಸಲಿದ್ದಾರೆ ಎಂದು ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಇನ್ ಇಂಡಿಯಾ ( CABI ) ಮ್ಯಾನೇಜಿಂಗ್ ಟ್ರಸ್ಟಿ, ಸಮರ್ಥನಂ ಅಂಗವಿಕಲರ ಸಂಸ್ಥೆ ಅಧ್ಯಕ್ಷ ಡಾ. ಮಹಾಂತೇಶ್ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!