Saturday, October 26, 2024

ಪ್ರಾಯೋಗಿಕ ಆವೃತ್ತಿ

ಮೋದಿ ರೋಡ್ ಶೋ ನಿಂದ ವಿದ್ಯಾರ್ಥಿಗಳಿಗೆ ತೊಂದರೆ – ಕಿಡಿಕಾರಿದ ಜೆಡಿಎಸ್

ಚುನಾವಣೆಗೆ ಐದೇ ದಿನಗಳಿರುವಾಗ, ಈ ದೇಶದ ಪ್ರಧಾನಿ ಮೋದಿಯವರು ಅದಕ್ಷ ರಾಜ್ಯ ಬಿಜೆಪಿ ಸರ್ಕಾರದ ಮುಖ ಉಳಿಸಲು ಕರ್ನಾಟಕ ಸುತ್ತುತ್ತಲೇ ಇದ್ದಾರೆ. ಶನಿವಾರ, ಭಾನುವಾರ ರಾಜಧಾನಿಯಲ್ಲಿ ಬೃಹತ್ ರೋಡ್ ಶೋ ಮಾಡಲಿದ್ದಾರಂತೆ. ಭಾನುವಾರ ನೀಟ್ ಪರೀಕ್ಷೆ ಇದ್ದು, ಟ್ರಾಫಿಕ್ ವ್ಯತ್ಯಯದಿಂದ ವಿದ್ಯಾರ್ಥಿಗಳು ಸಮಸ್ಯೆಗೆ ಸಿಲುಕುವುದು ಖಚಿತ ಎಂದು ಜೆಡಿಎಸ್ ಪಕ್ಷವು ಮೋದಿ ರೋಡ್ ಶೋ ವಿರುದ್ದ ಕಿಡಿಕಾರಿದೆ.

“>

ಹೋದ ವಾರವಷ್ಟೇ ಬೆಂಗಳೂರಿಗೆ ಪ್ರಧಾನಿಗಳು ಬರುವಾಗ ಉಂಟಾದ ಟ್ರಾಫಿಕ್ ವ್ಯತ್ಯಯವನ್ನು ಜನತೆ ಇನ್ನೂ ಮರೆತಿಲ್ಲ. ಈಗ ಕೊನೆ ಕ್ಷಣದ ಕಸರತ್ತಿಗಾಗಿ ಬೆಂಗಳೂರು ನಗರದ ಜೀವನಕ್ಕೆ ಕೊಕ್ಕೆ ಹಾಕುವುದು ಎಷ್ಟು ಸರಿ? ಜನತೆಯ ಬದುಕಿನ ಮೇಲೆ ಚುನಾವಣಾ ಪ್ರಚಾರವು ಇಷ್ಟು ದೊಡ್ಡ ಹೊರೆಯಾದರೆ ಹೇಗೆ? ಮಕ್ಕಳ ಪರೀಕ್ಷೆಯಾದರೂ ಗಮನಕ್ಕೆ ಬರಬೇಕಲ್ಲವೆ? ಮೋಸಿಯವರನ್ನು ಛೇಡಿಸಿದೆ.

ಯಡಿಯೂರಪ್ಪನವರನ್ನು ಕೆಳಗಿಳಿಸಿದ ಮೇಲೆ, ರಾಜ್ಯ ಬಿಜೆಪಿ  ಪಕ್ಷ ಯಾವ ಮುಖಗಳು ಮತ ತರುವುದಿಲ್ಲ ಎಂಬ ಸತ್ಯ ಗೊತ್ತಿರುವಂತದ್ದೆ. ಅದಕ್ಕೆ ತೇಪೆ ಹಚ್ಚಲು ಪ್ರಧಾನಿ, ದೇಶದ ಗೃಹ ಸಚಿವ, ಕೇಂದ್ರ ಬಿಜೆಪಿಯ ಹಲವು ಮುಖಂಡರುಗಳು ರಾಜ್ಯ ಸುತ್ತುತ್ತಿದ್ದಾರೆ.‌ ಒಂದು ಚುನಾವಣೆಗೋಸ್ಕರ ದೇಶದ ಪ್ರಧಾನಿಗಳು ‌ಇಷ್ಟು ತಲೆಕೆಡಿಸಿಕೊಂಡಿರುವುದು ನಾಚಿಕೆಗೇಡು! ಎಂದು ಟ್ವೀಟ್ ನಲ್ಲಿ ಕೆಂಡಕಾರಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!