Thursday, November 19, 2026

ಪ್ರಾಯೋಗಿಕ ಆವೃತ್ತಿ

ಜೆಡಿಎಸ್ ಬೆಂಬಲಿತ ಅಭ್ಯರ್ಥಿಗೆ ಉಪಾಧ್ಯಕ್ಷರ ಸ್ಥಾನ

ವರದಿ : ಮನು ಮಾಕವಳ್ಳಿ ಕೆ.ಆರ್. ಪೇಟೆ

ಕೆ.ಆರ್.ಪೇಟೆ ತಾಲ್ಲೂಕಿನ ತೆಂಡೆಕೆರೆ ಗ್ರಾ.ಪಂ.ನಲ್ಲಿ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ರಂಗರಾಜು ಅವಿರೋಧ ಆಯ್ಕೆಯಾದರು.

ಉಳಿದ ಯಾವ ಸದಸ್ಯರು ಕೂಡ ನಾಮಪತ್ರ ಸಲ್ಲಿಸಿದ ಕಾರಣ, ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಸತೀಶ್ ಘೋಷಣೆ ಮಾಡಿದರು.

ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ನಿರ್ದೇಶಕ ಎಚ್.ಟಿ.ಮಂಜು ಮಾತನಾಡಿ, ಜೆಡಿಎಸ್ ಬೆಂಬಲಿತ ಅಭ್ಯರ್ಥಿ ರಂಗರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ, ಪಕ್ಷಭೇದ ಮರೆತು ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಪ್ರತಿಯೊಂದು ಗ್ರಾಮಗಳಿಗೆ ಪ್ರಮುಖವಾಗಿ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದರು.

ಉಪಾಧ್ಯಕ್ಷ ರಂಗರಾಜು ಮಾತನಾಡಿ, ನನ್ನ ಆಡಳಿತಾವಧಿಯಲ್ಲಿ ಕ್ರಿಯಾಶೀಲತೆಯಿಂದ ಜನರ ಸಮಸ್ಯೆ ಆಲಿಸಲಾಗುವುದು ಎಂದರು.

ಜನಸಾಮಾನ್ಯರಿಗೆ ಸದ್ಬಳಕೆ ಆಗುವ ನಿಟ್ಟಿನಲ್ಲಿ ಶ್ರಮವಹಿಸಿ ಗ್ರಾಮ ಪಂಚಾಯಿತಿಗೆ ಬರುವ ಎಲ್ಲ ಗ್ರಾಮಗಳ ಅಭಿವೃದ್ಧಿಗೆ ಪ್ರಯತ್ನಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಅಧ್ಯಕ್ಷೆ ಗಂಗಮ್ಮ, ಸದ್ಯಸರಾದ ಶಿವಲಿಂಗ, ರವಿಕುಮಾರ್, ಜ್ಯೋತಿ, ಹೇಮಾಕುಮಾರ್, ಶಿಲ್ಪ, ಜಯಮ್ಮ, ಶ್ರೀನಿವಾಸ್, ಸವಿತಾ,  ನಾಗರತ್ನ, ರಾಜು, ಸೌಭಾಗ್ಯ, ರೋಹಿಣಿ, ಕಾಂತರಾಜು, ಸ್ವಾಮಿಗೌಡ ಮುಖಂಡರಾದ ಶೇಖರ್, ಹಾದನೂರು ಮಹೇಶ್, ಹೆಗ್ಗಡಹಳ್ಳಿ ಅಲೋಕ್, ವಾಟಾಳ್ ನಾಗರಾಜು, ಉಮೇಶ್, ಪ್ರಸನ್ನ, ಬಸವರಾಜ್, ಗಂಗಾಧರ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ