Thursday, September 19, 2024

ಪ್ರಾಯೋಗಿಕ ಆವೃತ್ತಿ

ಬರ ಅಧ್ಯಯನಕ್ಕೆ ಜೆಡಿಎಸ್‌ ತಂಡಗಳ ರಚನೆ: ನ.18ರೊಳಗೆ ವರದಿ ಸಲ್ಲಿಕೆಗೆ ಸೂಚನೆ

ರಾಜ್ಯದಲ್ಲಿ ಬರ ಪರಿಸ್ಥಿತಿ ಅಧ್ಯಯನ ಮಾಡಲು 31 ಜಿಲ್ಲೆಗಳಿಗೂ ತಂಡಗಳನ್ನು ರಚನೆ ಮಾಡಿರುವ ಜೆಡಿಎಸ್‌ ಪಕ್ಷವು, ದೀಪಾವಳಿ ಹಬ್ಬದ ಒಳಗಾಗಿ ಅಧ್ಯಯನ ಮುಗಿಸಿ ಕೇಂದ್ರ ಕಚೇರಿಗೆ ವರದಿ ನೀಡಬೇಕೆಂದು ಆಯಾ ತಂಡಗಳಿಗೆ ಸೂಚನೆ ನೀಡಿದೆ.

ಆಯಾ ಜಿಲ್ಲೆಗಳ ಪಕ್ಷದ ಜಿಲ್ಲಾಧ್ಯಕ್ಷರು, ಹಾಲಿ ಶಾಸಕರು, ಮಾಜಿ ಶಾಸಕರು, ಪರಾಭವಗೊಂಡಿರುವ ಅಭ್ಯರ್ಥಿಗಳು, ಮತ್ತಿತರೆ ಹಿರಿಯ ಮುಖಂಡರನ್ನು ಒಳಗೊಂಡ 31 ತಂಡಗಳನ್ನು ರಚನೆ ಮಾಡಿರುವ ಪಕ್ಷವು, ನವೆಂಬರ್‌ 18ರೊಳಗೆ ವರದಿಗಳನ್ನು ಸಲ್ಲಿಸುವಂತೆ ತಿಳಿಸಿದೆ.

ಈ ಬಗ್ಗೆ ಇವರೆಲ್ಲರ ಜತೆ ಪಕ್ಷದ ಕಚೇರಿಯಲ್ಲಿಂದು ಸಮಾಲೋಚನೆ ನಡೆಸಿದ ನಂತರ ಪಕ್ಷದ ಹಿರಿಯ ಮುಖಂಡರ ಜತೆ ಮಾಧ್ಯಮಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು; ಹಾನಿಗೆ ಒಳಗಾಗಿರುವ ಪ್ರತಿ ಪ್ರದೇಶಕ್ಕೂ ಭೇಟಿ ನೀಡಬೇಕು. ಸಂಕಷ್ಟದಲ್ಲಿರುವ ರೈತರ ಜತೆ ನೇರ ಮಾತುಕತೆ ನಡೆಸಿ ವರದಿಗಳನ್ನು ಸಿದ್ಧ ಮಾಡಬೇಕು. ಅದಾದ ಪಕ್ಷವು ವಿಧಾನ ಮಂಡಲದ ಒಳಗೆ, ಹೊರಗೆ ದೊಡ್ಡ ಮಟ್ಟದಲ್ಲಿ ರೈತರ ಪರವಾಗಿ ದನಿ ಎತ್ತಲಿದೆ ಎಂದು ತಿಳಿಸಿದರು.

ರೈತರು ಮತ್ತೆ ಆತ್ಮಹತ್ಯೆಗೆ ಶರಣಾಗುವ ಸಂದರ್ಭದವನ್ನು ಈ ಸರಕಾರವೇ ಸೃಷ್ಟಿ ಮಾಡುತ್ತಿದೆ. ರೈತರು ಬಿಕಾರಿಗಳಾ ಅಥವಾ ಬಿಕ್ಷುಕರಾ? ಅವರ ಬಗ್ಗೆ ಯಾಕೆ ಇಷ್ಟೊಂದು ಅಸಡ್ಡೆಯಿಂದ ಸರಕಾರ ವರ್ತಸುತ್ತಿದೆ? ಐದು ತಿಂಗಳಿಗೆ ಇವರ ಪಾಪದ ಕೊಡ ತುಂಬಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬರ ಅಧ್ಯಯನ ತಂಡಗಳು

ಮೈಸೂರು: ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಜಿ.ಡಿ.ಹರಿಶ್ ಕುಮಾರ್, ಕೆ.ಮಹದೇವ್, ಅಶ್ವಿನ್ ಕುಮಾರ್, ಎನ್.ನರಸಿಂಹಸ್ವಾಮಿ

ಚಾಮರಾಜನಗರ: ಜಿ.ಟಿ.ದೇವೇಗೌಡ, ಎಂ.ಆರ್.ಮಂಜುನಾಥ್

ಕೊಡಗು: ಸಾ.ರಾ.ಮಹೇಶ್, ಕೆ.ಮಹದೇವ್

ಮಂಡ್ಯ: ಡಿ.ಸಿ.ತಮ್ಮಣ್ಣ, ಸಿ.ಎಸ್.ಪುಟ್ಟರಾಜು, ಡಿ.ರಮೇಶ್, ಕೆ.ಅನ್ನದಾನಿ, ಸುರೇಶ್ ಗೌಡ, ಎ.ಎಸ್.ರವೀಂದ್ರ, ಹೆಚ್.ಟಿ.ಮಂಜು

ಹಾಸನ: ಹೆಚ್.ಡಿ.ರೇವಣ್ಣ, ಹೆಚ್.ಕೆ.ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ, ಸಿ.ಎನ್.ಬಾಲಕೃಷ್ಣ, ಎ.ಮಂಜು, ಕೆ.ಎಸ್.ಲಿಂಗೇಶ್, ಸ್ವರೂಪ್ ಪ್ರಕಾಶ್, ಸೂರಜ್ ರೇವಣ್ಣ

ಶಿವಮೊಗ್ಗ: ಶಾರದಾ ಪೂರ್ಯಾ ನಾಯಕ್, ವೈ.ಎಸ್.ವಿ ದತ್ತಾ, ಬಿ.ಕೆ.ಪ್ರಸನ್ನ ಕುಮಾರ್, ಶಾರದಾ ಅಪ್ಪಾಜಿಗೌಡ

ಚಿಕ್ಕಮಗಳೂರು: ಎಸ್.ಎಲ್.ಭೋಜೇಗೌಡ, ರಂಜನ್ ಅಜಿತ್ ಕುಮಾರ್, ಸುಧಾಕರ್ ಶೆಟ್ಟಿ, ವೈ.ಎಸ್.ವಿ.ದತ್ತಾ

ಕೋಲಾರ: ಜಿ.ಕೆ.ವೆಂಕಟ ಶಿವಾರೆಡ್ಡಿ, ಸಮೃದ್ಧಿ ಮಂಜುನಾಥ್, ಗೋವಿಂದರಾಜು, ಆರ್.ಚೌಡರೆಡ್ಡಿ ತೂಪಲ್ಲಿ

ಚಿಕ್ಕಬಳ್ಳಾಪುರ: ಎಂ.ಕೃಷ್ಣಾರೆಡ್ಡಿ, ಬಿ.ಎನ್.ರವಿಕುಮಾರ್, ಕೆ.ಪಿ.ಬಚ್ಚೇಗೌಡ, ಕೆ.ಎಂ.ಮುನೇಗೌಡ

ತುಮಕೂರು: ಎಂ.ಟಿ.ಕೃಷ್ಣಪ್ಪ, ಸುರೇಶ್ ಬಾಬು, ಡಿ.ನಾಗರಾಜಯ್ಯ, ಡಿ.ಸಿ.ಗೌರಿಶಂಕರ್, ಎಂ.ವಿ.ವೀರಭದ್ರಯ್ಯ, ಕೆ.ಎಂ.ತಿಮ್ಮರಾಯಪ್ಪ, ಸುಧಾಕರ ಲಾಲ್, ಆರ್.ಸಿ.ಅಂಜಿನಪ್ಪ

ಚಿತ್ರದುರ್ಗ: ರವೀಂದ್ರಪ್ಪ, ಎಂ.ಜಯಣ್ಣ, ಡಿ.ಯಶೋಧರಾ, ರವೀಶ್

ದಾವಣಗೆರೆ: ಹೆಚ್.ಎಸ್.ಶಿವಶಂಕರ್, ಬಿ.ಚಿದಾನಂದಪ್ಪ

ಬೆಂಗಳೂರು ಗ್ರಾಮಾಂತರ: ಡಾ.ಕೆ.ಶ್ರೀನಿವಾಸಮೂರ್ತಿ, ಎಲ್.ಎನ್.ನಾರಾಯಣಸ್ವಾಮಿ, ಬಿ.ಮುನೇಗೌಡ, ಇ.ಕೃಷ್ಣಪ್ಪ

ರಾಮನಗರ: ಎ.ಮಂಜುನಾಥ್

ಬಳ್ಳಾರಿ-ವಿಜಯನಗರ: ಕೆ.ನೇಮಿರಾಜ್ ನಾಯಕ್, ಪಿ.ಎಸ್.ಸೋಮಲಿಂಗನ ಗೌಡ, ಮೀನಳ್ಳಿ ತಾಯಣ್ಣ

ರಾಯಚೂರು: ಕರೆಮ್ಮ ನಾಯಕ, ವೆಂಕಟರಾವ್ ನಾಡಗೌಡ, ರಾಜಾ ವೆಂಕಟಪ್ಪ ನಾಯಕ ದೊರೆ, ಎಂ.ವಿರೂಪಾಕ್ಷಿ, ಸಿದ್ದುಬಂಡಿ

ಕೊಪ್ಪಳ: ಸಿ.ವಿ.ಚಂದ್ರಶೇಖರ್, ವೀರೇಶ್ ಮಹಾಂತಯ್ಯಮಠ

ಕಲಬುರಗಿ-ಯಾದಗಿರಿ: ಶರಣುಗೌಡ ಕಂದಕೂರ, ದೊಡ್ಡಪ್ಪಗೌಡ ಪಾಟೀಲ, ನರಿಬೋಳ್ ಸುರೇಶ್ ಮಹಾಗಾಂವ್ಕರ್, ಡಾ.ಎ.ಬಿ.ಮಾಲಕರೆಡ್ಡಿ, ಬಾಲರಾಜ್ ಗುತ್ತೇದಾರ್, ಶಿವಕುಮಾರ್ ನಾಟೇಕಾರ್, ಸಂಜೀವನ್ ರಮೇಶ ಯಾಕಾಪುರ, ಕೃಷ್ಣಾರೆಡ್ಡಿ

ಬೀದರ್: ಬಂಡೆಪ್ಪ ಕಾಶೆಂಪೂರ್, ರಮೇಶ್ ಸೋಲಾಪುರ, ಸೂರ್ಯಕಾಂತ ನಾಗಮಾರಪಳ್ಳಿ

ವಿಜಯಪುರ-ಬಾಗಲಕೋಟೆ: ರಾಜೂಗೌಡ, ಬಸವಗೌಡ ಮಾಡಗಿ, ಬಿ.ಡಿ.ಪಾಟೀಲ್, ಸುನೀತಾ ಚೌಹಾಣ್, ದೇವಾನಂದ ಚೌಹಾಣ್, ಹನುಮಂತಪ್ಪ ಮಾವಿನಮರದ

ಹಾವೇರಿ-ದಾರವಾಢ-ಗದಗ: ಆಲ್ಕೋಡ್ ಹನುಂತಪ್ಪ, ಗುರುರಾಜ ಹುಣಸಿಮರದ, ವೀರಭದ್ರಪ್ಪ ಹಾಲರವಿ, ಮಂಜುನಾಥ ಗೌಡ

ಉತ್ತರ ಕನ್ನಡ: ಗಣಪಯ್ಯ ಗೌಡ, ಸೂರಜ್ ನಾಯಕ್ ಸೋನಿ

ಬೆಳಗಾವಿ-ಚಿಕ್ಕೋಡಿ ಲೋಕಸಭೆ ಕ್ಷೇತ್ರಗಳು: ಜಿ.ಟಿ.ದೇವೇಗೌಡ, ಶಂಕರ ಮಾಡಲಗಿ, ಪ್ರತಾಪ್ ರಾವ್ ಪಾಟೀಲ್, ನಾಸೀರ್ ಭಗವಾನ್, ಕೆ.ಪಿ.ಮೇಘಣ್ಣನವರ್, ಸೌರಭ್ ಚೋಪ್ರಾ

ದಕ್ಷಿಣ ಕನ್ನಡ-ಉಡುಪಿ: ಎಸ್.ಭೋಜೇಗೌಡ, ಬಿ.ಎಂ.ಫಾರೂಕ್, ಸುಧಾಕರ್ ಶೆಟ್ಟಿ, ಜಾಕೆ ಮಾಧವಗೌಡ, ಯೋಗೇಶ್ ಶೆಟ್ಟಿ

ಬೆಂಗಳೂರು ನಗರ: ಕುಪೇಂದ್ರ ರೆಡ್ಡಿ, ಟಿ.ಎ.ಶರವಣ, ಹೆಚ್.ಎಂ.ರಮೇಶ ಗೌಡ, ಆರ್. ಮಂಜುನಾಥ್, ರೂಥ್ ಮನೋರಮಾ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!