Wednesday, November 18, 2026

ಪ್ರಾಯೋಗಿಕ ಆವೃತ್ತಿ

 ಮೈಸೂರಿನಲ್ಲಿ ಜೂ.17ರಂದು ಉದ್ಯೋಗ ಮೇಳ

ಮೈಸೂರಿನ ಮಾನವ ಸಂಪನ್ಮೂಲ ಸಂಸ್ಥೆಯಾದ ಲೀಡ್ ಟ್ರೈನಿಂಗ್ ಅಂಡ್ ಕಾರ್ಪೋರೇಟ್ ಸೆಲ್ಯೂಷನ್ಸ್ ಸಹಯೋಗದಲ್ಲಿ ಜೂನ್‌ 17ರ ಶನಿವಾರ ಮೈಸೂರಿನ ಟಿ.ನರಸೀಪುರ ರಸ್ತೆಯ ಚಿಕ್ಕಹಳ್ಳಿಯಲ್ಲಿರುವ ಇಂಜಿನಿಯರಿಂಗ್ ಕಾಲೇಜು(Mysore College of Engineering and Management)ವಿನಲ್ಲಿ ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಲೀಡ್ ಟ್ರೈನಿಂಗ್ ಅಂಡ್ ಕಾರ್ಪೋರೇಟ್ ಸೆಲ್ಯೂಷನ್ಸ್ ಸಿಇಓ ಶ್ರೀವಿದ್ಯಾ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋ‍ಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ನ ನಂತರದ ಉದ್ಯೋಗ ಅವಕಾಶಗಳು ಹೆಚ್ಚಾಗಿದ್ದರೂ, ಬಹಳಷ್ಟು ಹುದ್ದೆಗಳು ಇಂದಿಗೂ ಸೂಕ್ತ ಅಭ್ಯರ್ಥಿಗಳಿಗಾಗಿ ಕಾದಿವೆ. ಈ ನಿಟ್ಟಿನಲ್ಲಿ, ಉತ್ತಮ ಸಂಸ್ಥೆಗಳು ಮತ್ತು ಸೂಕ್ತ ಅಭ್ಯರ್ಥಿಗಳ ನಡುವೆ ಸೇತುವೆ ನಿರ್ಮಿಸುವ ಕೆಲಸವನ್ನು ಮೈಸೂರು ಇಂಜಿನಿಯರಿಂಗ್ ಕಾಲೇಜು ಮಾಡುತ್ತಿದೆ ಎಂದರು.

ಶನಿವಾರ ನಡೆಯುವ ಉದ್ಯೋಗ ಮೇಳದಲ್ಲಿ ಸುಮಾರು 35ಕ್ಕೂ ಹೆಚ್ಚು ಸಂಸ್ಥೆಗಳು ಭಾಗವಹಿಸುತ್ತಿದ್ದು, 600 ಕ್ಕೂ ಹೆಚ್ಚು ಉದ್ಯೋಗಾವಕಾಶಗಳಿವೆ. ಸುಮಾರು 3,500 ಉದ್ಯೋಗಾಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆ ಇದೆ. SSLC, PUC, B.Com, BBM, BA ITI Diplorna, ಇನ್ನಿತರ  ಯಾವುದೇ ಪದವಿ ವಿದ್ಯಾರ್ಹತೆ ಹೊಂದಿದವರು ಈ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಮೇಳವು ಅಂದು ಬೆಳಗ್ಗೆ 9.30 ರಿಂದ ಆರಂಭವಾಗಲಿದೆ ಎಂದರು.

ಹೆಚ್ಚಿನ ಮಾಹಿತಿಗೆ 97314 31074 ಅಥವಾ 9742472777 ಅನ್ನು ಸಂಪರ್ಕಿಸಬಹುದು. ಎಲ್ಲ ಉದ್ಯೋಗಾಕಾಂಕ್ಷಿಗಳೂ ಈ ಮೇಳದ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಗೋ‍ಷ್ಠಿಯಲ್ಲಿ ಮೈಸೂರಿನ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್. ಪ್ರಭುಸ್ವಾಮಿ ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ