Sunday, November 22, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ರಾಘವೇಂದ್ರ ಆಯ್ಕೆ

ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಂಡ್ಯ ಜಿಲ್ಲಾ ಘಟಕಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ವಿಜಯವಾಣಿ ಪತ್ರಿಕೆಯ ಜಿಲ್ಲಾ ವರದಿಗಾರ ಕೆ.ಎಸ್.ರಾಘವೇಂದ್ರ 113 ಮತಗಳನ್ನು ಪಡೆದು ಚುನಾಯಿತರಾಗಿದ್ದಾರೆ. ಇವರ ಸಮೀಪ ಸ್ಪರ್ಧಿ ಜೆ.ಎಂ.ಬಾಲಕೃಷ್ಣ 106 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.

ರಾಜ್ಯ ಕಾರ್ಯಕಾರಿ ಸಮಿತಿ ಹುದ್ದೆಗೆ ಸ್ಪರ್ದಿಸಿದ್ಧ ಸಿ.ಎನ್.ಮಂಜುನಾಥ್ 141 ಮತ ಗಳನ್ನು ಪಡೆದು ಜಯಗಳಿಸಿದರೆ, ಪ್ರತಿಸ್ಪರ್ಧಿ ಸುನೀಲ್‌ಕುಮಾರ್.ಹೆಚ್.ಬಿ 71 ಮತ ಗಳನ್ನು ಪಡೆದು ಸೋಲು ಕಂಡಿದ್ದಾರೆ.

ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಡಿ.ಶಶಿಧರ 131 ಮತ ಗಳನ್ನು ಪಡೆದು ಜಯಗಳಿಸಿದರೆ,  ಕೆ.ಶಂಭುಲಿಂಗೇಗೌಡ 82 ಮತಗಳನ್ನು ಪಡೆದು ಸೋಲನ್ನಪ್ಪಿದ್ದಾರೆ.

ಖಜಾಂಚಿ ಹುದ್ದೆಗೆ ಆರ್.ಎನ್.ನಂಜುಂಡಸ್ವಾಮಿ 128 ಮತಗಳನ್ನು ಪಡೆದು ಜಯಗಳಿಸಿದರೆ, ಪ್ರತಿಸ್ಪರ್ಧಿ ಸಿದ್ದರಾಜು 83 ಮತ ಗಳನ್ನು ಪಡೆದು ಪರಾಜಿತ ರಾಗಿದ್ದಾರೆ.

ಉಪಾಧ್ಯಕ್ಷ ಹುದ್ದೆಗೆ ಸಿ.ಎ.ಲೋಕೇಶ್ (140), ಕೆ.ಸಿ.ಮಂಜುನಾಥ್ (132) ಹಾಗೂ  ರವಿ ಸಾವಂದಿಪುರ 100 ಮತಗಳನ್ನು ಪಡೆದು ಚುನಾಯಿತರಾಗಿದ್ದಾರೆ.

ಕಾರ್ಯದರ್ಶಿ ಹುದ್ದೆಗೆ ಶಿವರಾಜು.ಹೆಚ್ (179), ಕೆ.ಎನ್.ನಾಗೇಗೌಡ (147) , ಎನ್.ನಾಗರಾಜು (ನಾಗೇಶ್)0 (133) ಅವರು ಚುನಾಯಿತರಾಗಿದ್ದಾರೆ.

ಜಿಲ್ಲಾ ನಿರ್ದೇಶಕ ಸ್ಥಾನಕ್ಕೆ ಚುನಾಯಿತರಾದವರು, ಅವರು ಪಡೆದ ಮತಗಳ ವಿವರ

1. ಅಶೋಕ- (149 ಮತಗಳು)
2. ಆನಂದ- 128
3. ಕುಮಾರಸ್ವಾಮಿ- 133
4. ಚೇತನ್ ಕುಮಾರ್- 120
5. ಸಿದ್ದೇಗೌಡ- 128
6. ದೀಪಕ್- 127
7. ನಾಗೇಶ್- 119
8. ಪುಟ್ಟಲಿಂಗೇಗೌಡ- 116
9. ಪುಟ್ಟಸ್ವಾಮಿ- 125
10. ಮೋಹನ್ ಕುಮಾರ್- 137
11. ರೋಹಿತ್- 140
12. ವಿನಯ್- 122
13. ಸಂತೋಷ್- 128
14. ಶೇಷಣ್ಣ- 159
ನಿರ್ದೇಶಕ ಸ್ಥಾನಕ್ಕೆ ಸ್ಪರ್ದಿಸಿದ್ಧ ತೇಜಸ್ವಿ ಮತ್ತು ವಿನೋದ್ ತಲಾ 113 ಮತಗಳನ್ನು ಪಡೆದು ಸಮ ಬಲ ಸಾಧಿಸಿದ್ದು, ಇಬ್ಬರು ಅಧಿಕಾರ ಹಂಚಿಕೆ ಮಾಡಿಕೊಂಡಿದ್ದಾರೆ.

ವಿವಿಧ ಸ್ಥಾನಗಳಿಗೆ ಅಂತಿಮವಾಗಿ 45 ಮಂದಿ ಸ್ಪರ್ಧಾಕಣದಲ್ಲಿದ್ದರು. ಮಂಡ್ಯ ಜಿಲ್ಲಾ ಘಟಕದ 24 ಹಾಗೂ ಒಂದು ರಾಜ್ಯ ಕಾರ್ಯಕಾರಿ ಸಮಿತಿಯ ಸ್ಥಾನಗಳಿಗೆ ಒಟ್ಟು 83 ನಾಮಪತ್ರಗಳ ಸಲ್ಲಿಕೆಯಾಗಿದ್ದವು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ