Friday, September 20, 2024

ಪ್ರಾಯೋಗಿಕ ಆವೃತ್ತಿ

ಗುರು ಬದುಕಿಗೆ ದಾರಿ ದೀಪ 

ಗುರು ಎಂದರೆ ಒಂದು ಶಕ್ತಿ, ಸೃಷ್ಟಿಯ ಸಕಲ ವೈಶಿಷ್ಟ್ಯಗಳನ್ನು ಕಣ್ಣೆದುರು ತೆರದಿಡುವ ವ್ಯಕ್ತಿತ್ವ ಮತ್ತು ಬದುಕಿಗೆ
ದಾರಿದೀಪ ಎಂದು ಶಿಕ್ಷಣ ತಜ್ಞ  ಡಾ.ಟಿ.ಎನ್.ರಾಜು ಅಭಿಪ್ರಾಯ ಪಟ್ಟರು.

ನಾಗಮಂಗಲ ತಾಲ್ಲೂಕಿನ ಬಿ.ಜಿ.ನಗರದ ಬಿಜಿಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ಕಂಡ ವಿವಿಧ ಶಿಕ್ಷಣ ಪದ್ಧತಿಗಳನ್ನು, ಮಕ್ಕಳ ಕಲಿಕೆ ಮತ್ತು ಸರ್ಕಾರದ ಸೌಲಭ್ಯಗಳನ್ನು ಭಾವಿ ಶಿಕ್ಷಕರಿಗೆ ನಿದರ್ಶನಗಳ ಮೂಲಕ ವಿವರಿಸಿದರು.

ಆದಿಚುಂಚನಗಿರಿ ವಿಶ್ವವಿದ್ಯಾಲಯದ ಡೀನ್ ಡಾ.ಎ.ಟಿ.ಶಿವರಾಮು ಅಧ್ಯಕ್ಷತೆ ವಹಿಸಿ ಮಾತನಾಡಿ, ಇಡೀ ಜಗತ್ತಿಗೆ ಗುರುಕುಲ ಪದ್ಧತಿಯ ಮೇರು ಪರಿಕಲ್ಪನೆಯನ್ನು ಕೊಟ್ಟಿದ್ದು ಭಾರತ, ಈ ದೇಶದ ವಿಶಿಷ್ಟ ಸಂಸ್ಕಾರಗಳು ವಿಶ್ವವನ್ನೇ ವ್ಯಾಪಿಸಿ, ಅನುಸರಿಸಲು ಪ್ರೇರಣೆ ನೀಡಿವೆ ಎಂದರು.

ವಿದ್ಯಾರ್ಥಿಗಳಿಂದ ಗುರುಭಕ್ತಿ ಸಮರ್ಪಣೆಯ ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ಕಾಲೇಜಿನ ಎಲ್ಲ ಅಧ್ಯಾಪಕ ಮತ್ತು ಅಧ್ಯಾಪಕೇತರರನ್ನು ಗೌರವಿಸಿ, ಗುರು ನಮನ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಜಿಎಸ್ ನರ್ಸಿಂಗ್ ಕಾಲೇಜು ಪ್ರಾಂಶುಪಾಲ ಪ್ರೊ.ಹೆಚ್.ಸಿ.ಚಂದ್ರಶೇಖರ್, ಪಿಯು ಕಾಲೇಹು ಪ್ರಾಂಶುಪಾಲ ಡಾ.ಯೋಗಾನಂದ, ಮಾದರಿ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲೆ ಎನ್.ಕುಸುಮ, ಪ್ರಾಧ್ಯಾಪಕರಾದ ವಿ.ಪುಟ್ಟಸ್ವಾಮಿ, ಎ.ಹೆಚ್.ಗೋಪಾಲ್, ವಿ.ಲೋಕೇಶ್, ಎಚ್.ಎಂ ಪ್ರವೀಣ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!