ಮಂಡ್ಯ ಜಿಲ್ಲೆಯ ಏಕೈಕ ಅಪರೇಷನ್ ಕಮಲದ ಶಾಸಕ ಕೆ.ಸಿ.ನಾರಾಯಣ ಗೌಡರಿಗೆ ಕೆ.ಆರ್. ಪೇಟೆ ಕ್ಷೇತ್ರದ ಜನರು ಮತ್ತೆ ಆಪರೇಷನ್ ಮಾಡಿ ಮೂರನೇ ಸ್ಥಾನಕ್ಕೆ ತಳ್ಳಿದ್ದಾರೆ.
ಬಿಜೆಪಿ ಖಾತೆ ತೆರೆದಿದ್ದ ನಾರಾಯಣಗೌಡರಿಂದಲೇ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಖಾತೆ ಮುಕ್ತಾಯವಾಗಿದೆ.
ಜೆಡಿಎಸ್ ಪಕ್ಷದ ಪಕ್ಷದಿಂದ ಎರಡು ಬಾರಿ ಶಾಸಕರಾಗಿದ್ದ ಕೆ.ಸಿ. ನಾರಾಯಣಗೌಡ 2019 ರಲ್ಲಿ ಆಪರೇಷನ್ ಕಮಲಕ್ಕೆ ಒಳಗಾಗಿ ಜೆಡಿಎಸ್ ಪಕ್ಷಕ್ಕೆ ಕೈಕೊಟ್ಟು ಬಿಜೆಪಿ ಸೇರಿ, ಉಪಚುನಾವಣೆಯಲ್ಲಿ ಗೆದ್ದು ಬಂದಿದ್ದರು.
ಮಂಡ್ಯ ಜಿಲ್ಲೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆದಿತ್ತು. ಆದರೆ ಈ ಬಾರಿಯ ಚುನಾವಣೆಯಲ್ಲಿ ಕೇವಲ 38,151 ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
ಈ ಮೂಲಕ ಆಪರೇಷನ್ ಕಮಲದ ಏಕೈಕ ಶಾಸಕ ನಾರಾಯಣ ಗೌಡರಿಗೆ ಕೆ.ಆರ್.ಪೇಟೆಯ ಜನರೇ ಆಪರೇಷನ್ ಮಾಡಿ ಮೂರನೇ ಸ್ಥಾನಕ್ಕೆ ಕಳಿಸಿರುವುದು ಅಚ್ಚರಿಯ ಸಂಗತಿ.




