Friday, September 20, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು | ಕ್ಷೇತ್ರದ ಜನರ ಋಣ ತೀರಿಸಲು ನಿಷ್ಠೆಯಿಂದ ಕೆಲಸ – ಕದಲೂರು ಉದಯ್

ವರದಿ : ವಿ.ಎಸ್.ಪ್ರಭು

ಮದ್ದೂರು ವಿಧಾಸಭಾ ಕ್ಷೇತ್ರದ ನಾಮಪತ್ರ ಸಲ್ಲಿಕೆ ವೇಳೆ ಪಕ್ಷದ ಮುಖಂಡರು, ಕಾರ್ಯಕರ್ತರು ದಾಖಲೆ ಸಂಖ್ಯೆಯಲ್ಲಿ ಆಗಮಿಸಿ ಆಶೀರ್ವದಿಸಿದ್ದು ಮುಂದಿನ ದಿನಗಳಲ್ಲಿ ಈ ಋಣ ತೀರಿಸುವ ಸಂಬಂಧ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುವುದಾಗಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ. ಉದಯ್ ತಿಳಿಸಿದರು.

ಮದ್ದೂರು ಪಟ್ಟಣದ ತಮ್ಮ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ವೇಳೆ ಮಾತನಾಡಿದ ಅವರು ತಾವು ಬಡ, ಹಿಂದುಳಿದ ಮತ್ತು ಎಲ್ಲಾ ವರ್ಗದ ಜನರ ಹಿತದೃಷ್ಠಿಯಿಂದ ಸಮಾಜ ಸೇವೆ ಮಾಡಲೆಂದು ಆಗಮಿಸಿ ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದಿದ್ದು ಕಾಂಗ್ರೆಸ್ ಪಕ್ಷವು ತಮ್ಮ ಸೇವೆಯನ್ನು ಪರಿಗಣಿಸಿ ಟಿಕೆಟ್ ನೀಡಿರುವುದಾಗಿ ಹೇಳಿದರು.

ಮದ್ದೂರು ತಾಲೂಕಿನಾದ್ಯಂತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಜತೆಗೂಡಿ ಮುಂದಿನ ದಿನಗಳಲ್ಲೂ ಸಮಾಜ ಸೇವೆಗೆ ತಮ್ಮನ್ನು ತಾವು ಮತ್ತಷ್ಟು ತೊಡಗಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆ ಸಂಬAಧ ಇತರೆ ಪಕ್ಷಗಳ ಮುಖಂಡರು, ಕಾರ್ಯಕರ್ತರು ಮತ್ತಷ್ಟು ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ ಎಂದರು.

ಕೆಪಿಸಿಸಿ ಅಧ್ಯಕ್ಷರು ಮತ್ತು ವರಿಷ್ಠರು ಮದ್ದೂರು ಟಿಕೆಟ್ ವಿಚಾರವಾಗಿ ಎಸ್. ಗುರುಚರಣ್ ಮತ್ತು ತಮ್ಮನ್ನು ಮುಖಾಮುಖಿ ಕೂರಿಸಿ ಅಭಿಪ್ರಾಯ ವ್ಯಕ್ತಪಡಿಸಿ ಸ್ಥಳೀಯ ಜನರ ಅನಿಸಿಕೆ ಇನ್ನಿತರೆ ಮಾನದಂಡಗಳ ಆಧಾರದಂತೆ ಟಿಕೆಟ್ ನೀಡುವುದಾಗಿ ಇಬ್ಬರು ಒಗ್ಗೂಡಿ ಚುನಾವಣೆ ಎದುರಿಸುವಂತೆ ನಿರ್ದೇಶಕ ನೀಡಿದ್ದಾಗಿ ತಿಳಿಸಿದರು.

ತಾವು ಹಲವು ಭಾರಿ ಇಬ್ಬರಲ್ಲಿ ಯಾರಿಗೆ ಟಿಕೆಟ್ ನೀಡಿದ್ದರೂ ಪಕ್ಷದ ಆದೇಶ ಪಾಲಿಸುವುದಾಗಿ ಹೇಳಿದ್ದು ಇದಕ್ಕೆ ಬದ್ಧರೆಂದಿದ್ದ ಎಸ್. ಗುರುಚರಣ್ ಸಲ್ಲದ ಆರೋಪ ಮಾಡಿ ಪಕ್ಷ ತ್ಯೆಜಿಸಿರುವುದು ತರವಲ್ಲವೆಂದರು.
ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲೇ ಇದ್ದ ಎಸ್. ಗುರುಚರಣ್ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಪಕ್ಷದ ನಾಯಕತ್ವದ ವಿರುದ್ಧ ಸಲ್ಲದ ಟೀಕೆಗಳನ್ನು ಮಾಡುತ್ತಿದ್ದು ಇದು ಶೋಭೆ ತರುವ ವಿಷಯವಲ್ಲವೆಂದರು.

ಕಾಂಗ್ರೆಸ್ ಪಕ್ಷ ಸೇರ್ಪಡೆ
ಸೋಮನಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷ, ಹಾಲಿ ಸದಸ್ಯ, ಯುವ ಮುಖಂಡ ಸಿ.ಟಿ. ಶಂಕರ್ ತಮ್ಮ ನೂರಾರು ಬೆಂಬಲಿಗರೊಡನೆ ಕದಲೂರು ಉದಯ್ ಮತ್ತು ಕೆಪಿಸಿಸಿ ಸದಸ್ಯ ಕದಲೂರು ರಾಮಕೃಷ್ಣ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಸಿ.ಟಿ. ಶಂಕರ್ ಕಳೆದ ಚುನಾವಣೆಯಲ್ಲಿ ತಮ್ಮನ್ನು ಸಮರ್ಥವಾಗಿ ಬಳಸಿಕೊಂಡ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಡಿ.ಸಿ. ತಮ್ಮಣ್ಣ ತಮ್ಮನ್ನು ಮೂಲೆ ಗುಂಪು ಮಾಡುವ ಜತೆಗೆ ತಮ್ಮ ಬೆಂಬಲಿಗರಿಗೆ ಒತ್ತು ನೀಡಿದ ಕಾರಣ ಮನನೊಂದು ಪಕ್ಷ ತ್ಯೆಜಿಸಿ ಕಾಂಗ್ರೆಸ್ ಸೇರುತ್ತಿರುವುದಾಗಿ ಹೇಳಿದರು.

ಮುಂದಿನ ದಿನಗಳಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರದಾದ್ಯಂತ ಅಪಾರ ಸಂಖ್ಯೆಯಲ್ಲಿರುವ ನನ್ನ ಬೆಂಬಲಿಗರ ಜತೆಗೂಡಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ. ಉದಯ್ ಗೆಲುವಿಗೆ ಶ್ರಮಿಸುವ ಜತೆಗೆ ವಿಧಾನಸೌಧಕ್ಕೆ ಕಳುಹಿಸುವ ವಿಶ್ವಾಸ ವ್ಯಕ್ತಪಡಿಸಿದರು.

ವ್ಯಕ್ತಿಗಿಂತ ಪಕ್ಷಮುಖ್ಯ
ಕೆಪಿಸಿಸ ಸದಸ್ಯ, ಮನ್‌ಮುಲ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ ಮಾತನಾಡಿ ಎಸ್. ಗುರುಚರಣ್ ಅವರು ಪಕ್ಷ ತ್ಯೆಜಿಸಿದ್ದು ತಾವು ಅವರನ್ನು ಹಿಂಬಾಲಿಸುವ ಮಾತೇ ಇಲ್ಲವೆಂದು ವ್ಯಕ್ತಿಗಿಂತ ಪಕ್ಷ ಮುಖ್ಯವೆಂಬ ಧ್ಯೆಯ ತಮ್ಮದೆಂದರು.
ಗೋಷ್ಠಿ ವೇಳೆ ತಾ.ಪಂ. ಮಾಜಿ ಸದಸ್ಯ ತೈಲೂರು ಚಲುವರಾಜು, ಗೆಜ್ಜಲಗೆರೆ ಗ್ರಾ.ಪಂ. ಅಧ್ಯಕ್ಷ ಹರೀಶ್ ಇತರರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!