Wednesday, November 18, 2026

ಪ್ರಾಯೋಗಿಕ ಆವೃತ್ತಿ

ಜಗಜ್ಯೋತಿ ಬಸವಣ್ಣ-ಇಮ್ಮಡಿ ಪುಲಕೇಶಿ ಪುತ್ಥಳಿಗಳನ್ನು ಅನಾವರಣ ಮಾಡಲು ನಿರಾಸಕ್ತಿ : ಕದಂಬಸೈನ್ಯ ಆರೋಪ

ಬೆಳಗಾವಿ ಜಿಲ್ಲೆಯಲ್ಲಿ ಶಿವಾಜಿ ಪುತ್ಥಳಿಗಳನ್ನು ಲೋಕಾರ್ಪಣೆ ಮಾಡಲು ಆಸಕ್ತಿ ಆದರೆ ಜಗಜ್ಯೋತಿ ಬಸವಣ್ಣ ಕನ್ನಡ ಚಕ್ರವತಿ ದಕ್ಷಿಣ ಪಥೇಶ್ವರ ಇಮ್ಮಡಿ ಪುಲಕೇಶಿ ಪುತ್ಥಳಿಗಳನ್ನು ಅನಾವರಣ ಮಾಡಲು ನಿರಾಸಕ್ತಿ.
ಮರಾಠಿಗರ ಓಟ್ ಬ್ಯಾಂಕ್ ಓಲೈಕೆಗಾಗಿ, ಕನ್ನಡ ನಾಡನ್ನು ಒಡೆಯುವ ಸಂಚು ಇದು ಎಂದು ಕದಂಬಸೈನ್ಯದ ರಾಜಾಧ್ಯಕ್ಷ  ಬೇಕ್ರಿ ರಮೇಶ್ ಆರೋಪ.

ಬೆಳಗಾವಿ ಗ್ರಾಮೀಣ ಕ್ಷೇತ್ರ ರಾಜಹಂಸಗಡ ಕೋಟಿಯಲ್ಲಿ ೫೦ ಅಡಿ ಎತ್ತರದ ಛತ್ರಪತಿ ಶಿವಾಜಿ ಪುತ್ಥಳಿ ಪ್ರತಿಷ್ಠಾನೆಗಾಗಿ ಬಿ.ಜೆ.ಪಿ.ಶಾಸಕ ರಮೇಶ್ ಜಾರಕಿಹೊಳೆ, ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಭಾರಿ ಪೈಪೋಟಿ ನಡೆಸುತ್ತಿದ್ದಾರೆ. ಮಾರ್ಚ್ 04-05 ರಂದು ಶಿವಾಜಿಮೂರ್ತಿ ಲೋಕಾರ್ಪಣೆಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಿದ್ದತೆ ನಡೆಸಿದ್ದಾರೆ. ಉದ್ಘಾಟನೆಗಾಗಿ ಶಿವಾಜಿ ವಂಶಸ್ಥರಾದ ಸಂಭಾಜೆರಾವ್ ಛತ್ರಪತಿ ಮಹಾರಾಷ್ಟçದ ಸಂಸದರು, ಶಾಸಕರು ಮತ್ತು ಮರಾಠಿ ನಾಟಕ ಸಿನಿಮಾ ನಟರನ್ನು ಆಹ್ವಾನಿಸಿ ಕನ್ನಡ ನಾಡಿಗೆ ಕನ್ನಡಿಗರಿಗೆ ದ್ರೋಹ ಬಗೆಯುತ್ತಿದ್ದಾರೆ ಕನ್ನಡ ನಾಡನ್ನು ಒಡೆಯುವ ಸಂಚು ಎಂದು ಕದಂಬ ಸೈನ್ಯ ಆಕ್ರೋಶ ವ್ಯಕ್ತಪಡಿಸಿದೆ.

ಬೆಳಗಾವಿ ಉತ್ತರದ ಬಿ.ಜೆ.ಪಿ.ಶಾಸಕ ಅನಿಲ್ ಬೆನಕೆ ಸಂಭಾಜಿ ಚೌಕ್‌ನಲ್ಲಿ ಛತ್ರಪತಿ ಸಂಭಾಜೆ ಮೂರ್ತಿಕೋಟೆ
ಮಾದರಿ ನಿರ್ಮಿಸಿದ್ದಾರೆ. ಇದರ ಉದ್ಘಾಟನೆಗೆ ಬಂದಿದ್ದ ಗ್ವಾಲಿಯರ್ ರಾಜವಂಶ ಮಾಹುರ್ಕರ್ ಅವರ ಮೆರವಣಿಗೆ ಮಾಡಿ ಮರಾಠಿಗರನ್ನು ಒಗ್ಗೂಡಿಸಲು ಕಾರಣರಾಗಿ ಕನ್ನಡಿಗರ ವಿರುದ್ದ ಎತ್ತುಕಟ್ಟುವಂತಹ ಕಾರ್ಯ ಮಾಡುತ್ತಿದ್ದಾರೆ. ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಶಿವಾಜಿ ಚರಿತ್ರೆ ಬಿಂಬಿಸುವ ಶಿವಚರಿತ್ತಾ ಎಂಬ ಪ್ರತಿಮೆಗಳ ಲೋಕಾರ್ಪಣೆಗೆ ಶಿವಾಜಿ ಉದ್ಯಾನವನದಲ್ಲಿ. ಇದರ ಉದ್ಘಾಟನೆಗೆ ಸಿದ್ದತೆ ನಡೆಸಿದ್ದಾರೆ.

ಮರಾಠಿಗರ ಪರಂಪರೆ, ಸಂಸ್ಕೃತಿ, ಶೌರ್ಯ ಬಿಂಬಿಸುವ ಈ ಪ್ರತಿಮೆಗಳಿಗೆ ಧ್ವನಿ ಬೆಳಕಿನ ವ್ಯವಸ್ಥೆ ಮಾಡಿದ್ದಾರೆ. ಕನ್ನಡಕ್ಕೆ ಕಡು ವೈರಿಯಾಗಿದ್ದಾರೆ. ಖಾನಾಪುರ ಕ್ಷೇತ್ರ, ಮರಾಠಿಗರಿರುವ 9 ಕ್ಷೇತ್ರಗಳಲ್ಲಿ ಸವದತ್ತಿಯ ಯಲ್ಲಮ್ಮ, ಕೊಲ್ಲಾಪುರದ ಮಹಾಲಕ್ಷ್ಮೀ, ಜ್ಯೋತಿ ಬಾ ಪಂಡರಾಪುರ ಇನ್ನು ಅನೇಕ ಕ್ಷೇತ್ರಗಳಿಗೆ ಮರಾಠಿಗರನ್ನು ಕಳುಹಿಸುತ್ತಿದ್ದಾರೆ. ಊಟ ವಸತಿ, ವಾಹನಗಳ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಕ್ಷೇತ್ರಗಳ ಪ್ರಸಾದ ತಂದು ಮನೆ ಮನೆಗೆ ಹಂಚುವುದರಲ್ಲಿ ಕಾಂಗ್ರೆಸ್, ಬಿ.ಜೆ.ಪಿ. ಅಭ್ಯರ್ಥಿಗಳು ಪೈಪೋಟಿಗಿಳಿದಿದ್ದಾರೆ. ಜೊತೆಗೆ ಮರಾಠಿ ಸಾಹಿತ್ಯ ಸಮ್ಮೇಳನಗಳನ್ನು ನಡೆಸುತ್ತಿದ್ದಾರೆ, ಮರಾಠಿ ನಾಯಕರನ್ನು ಕರೆಸಿ ನಾವು ಮರಾಠಿ ವಿರೋಧಿಗಳಲ್ಲ ಎಂದು
ಬಿಂಬಿಸಲು ಮುಂದಾಗಿದ್ದಾರೆ.

ಮರಾಠಿಗರಿಗೆ ರಕ್ಷಣೆ, ಕನ್ನಡಿಗರಿಗೆ ಶಿಕ್ಷೆ :

ಬೆಳಗಾವಿ ಉತ್ತರ ದಕ್ಷಿಣ ಶಾಸಕರ ನಾಯಕತ್ವದಲ್ಲಿ ಕನ್ನಡಿಗರಿಗೆ ಅವಮಾನ ಮಾಡಿ ಮೇಯರ್, ಉಪ ಮೇಯರ್ ಸ್ಥಾನಗಳನ್ನು ಮರಾಠಿಗರಿಗೆ ಉಡುಗೊರೆಯಾಗಿ ನೀಡಿ ನಾವು ಮರಾಠಿಗರ ಅನುಯಾಯಿಗಳು ಎಂದು ಬಿಂಬಿಸುತ್ತಿದ್ದಾರೆ. 2020 ರಲ್ಲಿ ಎಂ.ಇ.ಎಸ್. ಮುಖಂಡರ ವಿರುದ್ದ ಹೋರಾಟ ಮಾಡಿದ ಸ್ವಾಭಿಮಾನಿ ಇಬ್ಬರು
ಕನ್ನಡಿಗರ ವಿರುದ್ದ ರೌಡಿಶೀಟರ್ ಪ್ರಕರಣಗಳು ದಾಖಲಾಗಲು ಕಾರಣರಾಗಿದ್ದಾರೆ.

ವೀರರಾಣಿ ಕಿತ್ತೂರು ಚನ್ನಮ್ಮ ವೀರಮಾತೆ ಬೆಳವಾಡಿ ಮಲ್ಲಮ್ಮ, ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ರವರ ಬಗ್ಗೆ
ಎಲ್ಲೂ ತುಟಿಕ್ ಪಿಟಿಕ್ ಅನ್ನುತ್ತಿಲ್ಲ. ಎಲ್ಲಾ ಕಡೆ ಶಿವಾಜಿ ಪ್ರತಿಮೆ ಸದ್ದು. ಎಲ್ಲಾ ಪಕ್ಷಗಳಿಗೆ ಮರಾಠಿಗರ ಓಟ್ ಬ್ಯಾಂಕ್ ಮುಖ್ಯವೇ ಹೊರತು. ಕನ್ನಡಿಗರ ಓಟಿಗೆ ಕಿಮ್ಮತ್ತಿಲ್ಲ.

2004 ರಲ್ಲಿ ಹಿರೇಬಾಗೇವಾಡಿ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕ ಜಗಜ್ಯೋತಿ ಬಸವಣ್ಣನವರ ಮೂರ್ತಿ ತಂದು
ನಿಲ್ಲಿಸಲಾಗಿದೆ. 15 ವರ್ಷ ಕಳೆದರೂ ಲೋಕಾರ್ಪಣೆ ಮಾಡಲೇ ಇಲ್ಲ. ಬೆಳಗಾವಿ ಜಿಲ್ಲೆಯ ರಾಜಕಾರಣಿಗಳು ಜೊತೆಗೆ ಸರ್ಕಾರ. ಪೂಜ್ಯ ಬಸವಣ್ಣನವರ ಮೂರ್ತಿ ಲೋಕಾರ್ಪಣೆಗೆ ಯಾವ ಶಾಸಕರು, ಸಂಸದರು ಆಸಕ್ತಿ ತೋರುತ್ತಿಲ್ಲ. ಸತೀಶ್ ಜಾರಕಿಹೊಳೆ ಸಚಿವೆ ಶಶಿಕಲಾ ಜೊಲ್ಲೆ, ಶಾಸಕಿ ಅಂಜಲಿ ನಿಂಬಾಳ್ಕರ, ಬಿ.ಜೆ.ಪಿ.ಆಕಾಂಕ್ಷಿ ಡಾ.ಸೋನುವಾಲಿ ಎಲ್ಲಾ ಅಭ್ಯರ್ಥಿಗಳು ಕೂಡ ಮರಾಠಿಗರ ಒಲವು ತೋರಿ ಕನ್ನಡಿಗರ ಕಡುವೈರಿಯಾಗುತ್ತಿದ್ದಾರೆ ಎಂದು ಕದಂಬ ಸೈನ್ಯ ಆರೋಪಿಸಿದೆ.

ಕನ್ನಡ ಚಕ್ರವರ್ತಿ ಇಮ್ಮಡಿ ಪುಲಕೇಶಿ ಜಗಜ್ಯೋತಿ ಬಸವಣ್ಣನವರ ಪುತ್ಥಳಿ ಲೋಕಾರ್ಪಣೆ ಮಾಡಲು ಸರ್ಕಾರ
ಸಂಸದರುಗಳ ನಿರ್ಲಕ್ಷ್ಯಿಸಿ  ಕನ್ನಡ ನಾಡಿಗೆ, ಕನ್ನಡಿಗರಿಗೆ ಘನ ಘೋರ ಅವಮಾನ ಮಾಡುತ್ತಿದ್ದಾರೆ. ಕನ್ನಡ ಚಕ್ರವರ್ತಿ ದಕ್ಷಿಣ ಪಥೇಶ್ವರ ಇಮ್ಮಡಿ ಪುಲಕೇಶಿ ಮತ್ತು ಜಗಜ್ಯೋತಿ ಬಸವಣ್ಣನವರ ಪುತ್ಥಳಿಗಳು ಅನಾವರಣ
ಮಾಡಲು ಸ್ಥಳಾವಕಾಶ ನೀಡದೆ ಗಾಳಿ, ಬಿಸಿಲಿಗೆ ಒಣಗುತ್ತಿವೆ. ಹಾಗೂ ಮಳೆಯಲ್ಲಿ ನೆನೆಯುತ್ತಿವೆ. ರಾಮದುರ್ಗ ರಸ್ತೆ, ಚಾಲುಕ್ಯರ ರಾಜಧಾನಿ ಬಾದಾಮಿಯಲ್ಲಿ ಚಾಲುಕ್ಯ ಉತ್ಸವ ಮಾಡಿ ಏಳು ವರ್ಷಗಳು ಕಳೆದಿವೆ. ಕರ್ನಾಟಕದಲ್ಲಿ ಶಿವಾಜಿ ಜಯಂತಿಗೆ ಅವಕಾಶ ಕೊಟ್ಟು ಕನ್ನಡ ನೆಲದ ಕನ್ನಡ ಚಕ್ರವರ್ತಿ ದಕ್ಷಿಣಪಥೇಶ್ವರ ಇಮ್ಮಡಿ ಪುಲಕೇಶಿ ಜಯಂತಿ ಏಕೆ ಮಾಡುತ್ತಿಲ್ಲ ಸರ್ಕಾರ ಎಂದು ಕದಂಬ ಸೈನ್ಯ ಆರೋಪ ಮಾಡಿದೆ.

ದಿ:21-12-2022  ರಂದು ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್‌ಗೆ ಸರ್ಕಾರ ಪತ್ರ ಬರೆದು (ಜಿ.ಕೆ.ಸಿ.2015) 53/2022
ಉಲ್ಲೇಖ (3)ರ ಸುತ್ತೋಲೆಯ ಕ್ರಮ ಸಂ.(1) ರಲ್ಲಿ ಸರ್ಕಾರದ /ಸಾರ್ವಜನಿಕ ಜಾಗದಲ್ಲಿ ಯಾವುದೇ ಸಂತರ, ಶರಣರ, ಜನನಾಯಕರ,ಸ್ವಾತಂತ್ರ್ಯ ಹೋರಾಟಗಾರರ ಗಣ್ಯವ್ಯಕ್ತಿಗಳ ಪ್ರತಿಮೆ ಸ್ಮಾರಕಗಳನ್ನು ಸ್ಥಾಪಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಇಮ್ಮಡಿ ಪುಲಕೇಶಿ ಪ್ರತಿಮೆಯನ್ನು ಚಾಲುಕ್ಯ ರಾಜಧಾನಿ ಬೆಂಗಳೂರು ವಿಧಾನಸೌಧದ ಮುಂದೆ ಸ್ಥಾಪಿಸಲು ರಾಜ್ಯಾದ್ಯಂತ ಚಳುವಳಿ ಮಾಡಿತ್ತು. ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಛತ್ರಪತಿ ಶಿವಾಜಿ ಪ್ರತಿಮೆ ಸ್ಥಾಪಿಸಲು ಅವಕಾಶ ಕೊಟ್ಟು ಕನ್ನಡಿಗರನ್ನು ನಿರ್ಲಕ್ಷ್ಯಿಸಿದ್ದಾರೆಂದು ಕದಂಬ ಸೈನ್ಯ  ರಾಜಾಧ್ಯಕ್ಷರ ಬೇಕ್ರಿ ರಮೇಶ್ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ  ರಾಜ್ಯ ಸಹಕಾರ್ಯದರ್ಶಿ ಉಮ್ಮಡಹಳ್ಳಿನಾಗೇಶ್, ರಾಜ್ಯಸಮಿತಿ ಸದಸ್ಯ ಮೈಸೂರ ಮಹದೇವಸ್ವಾಮಿ, ಗುಡಿಗೇನಹಳ್ಳಿ ಆರಾಧ್ಯ ಮಂಡ್ಯ ಜಿಲ್ಲಾ ಉಪಾಧ್ಯಕ್ಷ ರಾಮು, ರಾಜ್ಯ ಕನ್ನಡ ಹೋರಾಟಗಾರ ಥಾಮಸ್ ಬೆಂಜಮಿನ್ ಕಿಟ್ಟಿ, ಮಂಡ್ಯ ನಗರಸಭಾ ಕಾರ್ಯದರ್ಶಿ ಕೃಷ್ಣ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ