Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾಮುಕ ಚಿನ್ಮಯಾನಂದ ಮೂರ್ತಿ ವಜಾಗೊಳಿಸಿ ಕಠಿಣ ಶಿಕ್ಷೆ ಕೊಡಿ

ಪಾಂಡವಪುರ ತಾಲ್ಲೂಕಿನ ಕಟ್ಟೇರಿ ಗ್ರಾಮದ ಆರ್ ಎಂ ಎಸ್ ವಿ ವಿದ್ಯಾರ್ಥಿನಿಯರ ನಿಲಯದ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಮುಖ್ಯ ಶಿಕ್ಷಕ ಚಿನ್ಮಯಾನಂದ ಮೂರ್ತಿಯನ್ನು ಬೇರಡೆ ವರ್ಗಾವಣೆ ಮಾಡಿದರೆ ಅಲ್ಲಿಯೂ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನೀಡುತ್ತಾನೆ. ಆದ ಕಾರಣ ಅವನನ್ನು ಕೆಲಸದಿಂದಲೇ ವಜಾಗೊಳಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ.

ಜೈಲಿಗೆ ಹಾಕಬೇಕು
ಚಿನ್ಮಯಾನಂದ ಮೂರ್ತಿಯ ಅಸಹ್ಯ ಕಾಮ ಪುರಾಣ ಕೇಳಿದರೆ ಆತನನ್ನು ಹಿಡಿದು ಚೆನ್ನಾಗಿ ಬಡಿಯಬೇಕು ಎನಿಸುತ್ತದೆ. ಆತನ ಕಾಮ ವಿಕೃತಿ ಕಂಡು ಈತ ಮಕ್ಕಳಿಗೆ ಏನು ಪಾಠ ಮಾಡ್ತಿದ್ದ.ಇಂತಹ ಕಾಮುಕ ವ್ಯಕ್ತಿ ಗುರುವಾಗಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಾನೆ ಎಂದರೆ ಈತ ಬದುಕಿರಲು ಅರ್ಹನಾದ ವ್ಯಕ್ತಿಯಲ್ಲ.ಈತನಿಗೆ ಹತ್ತು ವರ್ಷಗಳ ಕಾಲ ಜೈಲಿಗೆ ಹಾಕಬೇಕು ಎಂದೆಲ್ಲಾ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದನ್ನು ನೋಡಿದರೆ ಈತನೆಂತಹ ಕಾಮುಕ ಎನ್ನುವುದು ಗೊತ್ತಾಗುತ್ತದೆ.

ಕಟ್ಟೇರಿ ಗ್ರಾಮದ ಪ್ರೌಢ ಶಾಲೆಯ ಮುಖ್ಯ ಶಿಕ್ಷಕನಾಗಿದ್ದ ಚಿನ್ಮಯಾನಂದ ಮೂರ್ತಿಗೆ ಹಾಸ್ಟೆಲ್ ಉಸ್ತುವಾರಿ ನೀಡಲಾಗಿತ್ತು. ನಿತ್ಯ ಸಂಜೆ ಸಮಯದಲ್ಲಿ ಹಾಸ್ಟೆಲ್ ಗೆ ಬರುತ್ತಿದ್ದ ಕಾಮುಕ ಚಿನ್ಮಯಮೂರ್ತಿ. ತನ್ನ ಕೊಠಡಿಗೆ ವಿದ್ಯಾರ್ಥಿನಿಯರನ್ನ ಕರೆಸಿಕೊಂಡು ಅಸಭ್ಯ ವರ್ತಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ.ಹೆಣ್ಣು ಮಕ್ಕಳಿಗೆಅಶ್ಲೀಲ ವಿಡಿಯೋ ತೋರಿಸುವ ಜೊತೆಗೆ ಅಂಗಾಂಗ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ.

ಲೈಂಗಿಕ ದೌರ್ಜನ್ಯದ ಬಗ್ಗೆ ಯಾರಿಗೂ ಹೇಳದಂತೆ ಮಕ್ಕಳಿಗೆ ಬೆದರಿಕೆ ಹಾಕುತ್ತಿದ್ದ. ಯಾರಿಗಾದ್ರೂ ಹೇಳಿದ್ರೆ ಟಿಸಿಯಲ್ಲಿ ಬ್ಯಾಡ್ ಕ್ಯಾರೆಕ್ಟರ್ ಎಂದು ನಮೂದಿಸುವುದಾಗಿ ಬೆದರಿಕೆ ಹಾಕುತ್ತಿದ್ದ ಇವನ ಮೇಲೆ ಕಠಿಣ ಶಿಕ್ಷೆ ಆಗಬೇಕು ಎಂದು ರಾಧಾ ಎಂಬ ಪೋಷಕರು ಆಕ್ರೋಶದಿಂದ ನುಡಿದರು.

ಕಳೆದ 3-4 ವರ್ಷಗಳಿಂದ ಚಿನ್ಮಯಾನಂದ ಮೂರ್ತಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ.ರಾತ್ರಿ 11 ಗಂಟೆ ಸಮಯದಲ್ಲಿ ಹಾಸ್ಟೆಲ್ಗೆ ಬರುತ್ತಿದ್ದ ಈತನನ್ನು ಪ್ರಶ್ನೆ ಮಾಡಿದರೆ ಆಹಾರ ಧಾನ್ಯ ಬಂದಿದೆ.ಅದು ಇದು ಅಂತ ಸುಳ್ಳು ಹೇಳುತ್ತಿದ್ದ.ನಿನ್ನೆ ರಾತ್ರಿ ಕೂಡ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದಾಗ ಮಕ್ಕಳೆಲ್ಲ ಜೋರಾಗಿ ಕೂಗಿಕೊಂಡಾಗ ನಾವೆಲ್ಲ ಅಲ್ಲಿಗೆ ಹೋದೆವು ಎಂದು ಕಟ್ಟೇರಿಯ ನಿವಾಸಿ ವೆಂಕಟೇಶ್ ಆರೋಪಿಸಿದರು.

ಬಿತ್ತು ಗೂಸಾ
ಚಿನ್ಮಯಾನಂದ ಮೂರ್ತಿ ಲೈಂಗಿಕ ಕಿರುಕುಳ ಬಗ್ಗೆ ಬಿಇಒ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳದ ಕಾರಣ ನಿನ್ನೆ ರಾತ್ರಿ ಮಕ್ಕಳೇ ಆತನನ್ನು ಕೊಠಡಿಯಲ್ಲಿ ಕೂಡಿ ಹಾಕಿ ಚೆನ್ನಾಗಿ ಗೂಸಾ ಕೊಟ್ಟಿದ್ದಾರೆ.ನಂತರ ಸ್ಥಳಕ್ಕೆ ಬಂದ ಕೆ ಆರ್ ಎಸ್ ಠಾಣೆ ಪೋಲಿಸರು ಚಿನ್ಮಯಾನಂದ ಮೂರ್ತಿಯನ್ನ ವಶಕ್ಕೆ ಪಡೆದಿದ್ದಾರೆ.ಮಕ್ಕಳು ನಾಲ್ಕು ವರ್ಷಗಳ ಹಿಂದೆಯೇ ಹೇಳಿದಾಗ ಕ್ರಮ ತೆಗೆದುಕೊಂಡಿದ್ದರೆ ಈ ಘಟನೆಯೇ ನಡೆಯುತ್ತಿರಲಿಲ್ಲ.ಕಾಮುಕ ಶಿಕ್ಷಕ ಚಿನ್ಮಯಾನಂದ ಮೂರ್ತಿಯನ್ನು ವಜಾಗೊಳಿಸಿ ಎಂದು ಮಹೇಶ್ ಒತ್ತಾಯಿಸಿದರು.

ಡಿಡಿಪಿಐಗೆ ತರಾಟೆ
ಸ್ಥಳಕ್ಕೆ ಬಂದ ಡಿಡಿಪಿಐ ಜವರೇಗೌಡರನ್ನು ಗ್ರಾಮಸ್ಥರು ಹಾಗೂ ಮಕ್ಕಳ ಪೋಷಕರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. 2018ರಲ್ಲಿ ದೂರು ನೀಡಿದಾಗ ಎಲ್ಲಿಗೆ ಹೋಗಿದ್ರಿ.ಈಗ ಕಾಮುಕ ಶಿಕ್ಷಕನಿಗೆ ಹೊಡೆದ ತಕ್ಷಣ ಬಂದಿದ್ದೀರಾ. ಆಗಲೇ ಅವನನ್ನು ತೆಗೆದು ಹಾಕಿದ್ರೆ ನಮ್ಮ ಹೆಣ್ಣು ಮಕ್ಕಳಿಗೆ ತೊಂದರೆ ಆಗುತ್ತಿರಲಿಲ್ಲ.ಈಗ ನೀವು ಎಮ್ಮೆ ಕಾಯಲು ಬಂದಿದ್ದೀರಾ.ನಿಮ್ಮ ಮನೆ ಮಕ್ಕಳಿಗೆ ಹೀಗೆ ಆಗಿದ್ರೆ ಸುಮ್ಮನೆ ಇರುತ್ತಿದ್ರಾ. ಕಾಮುಕನನ್ನು ಹೆಡ್ ಮಾಸ್ಟರ್ ಮಾಡಿದ್ದೀರಾ. ನಾಚಿಕೆ ಆಗಲ್ವಾ, ಇಷ್ಟು ದಿನ ಅವನನ್ನು ಇಟ್ಟುಕೊಳ್ಳಲು ಎಂದು ಹಿಗ್ಗಾಮುಗ್ಗಾ ಜಾಡಿಸಿದರು.

ವಜಾ ಮಾಡಿಸಲು ಕ್ರಮ
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಈತ ಬೇರೆ ಕಡೆ ಹೋದರೆ ಅಲ್ಲೂ ಕೂಡ ಇದೇ ರೀತಿ ಮಾಡ್ತಾನೆ.ಆದ್ದರಿಂದ ಆತನನ್ನು ವಜಾಗೊಳಿಸಬೇಕು.ಅದಕ್ಕಾಗಿ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡುವುದಾಗಿ ಪೋಷಕರಿಗೆ ಭರವಸೆ ನೀಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!