Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಕರವೇಯಿಂದ ‘ಕನ್ನಡಮ್ಮನ ಜಾನಪದ ಸಮಾವೇಶ’

ಕನ್ನಡ ನಾಡು, ನುಡಿ, ನೆಲ, ಜಲ ಸಂರಕ್ಷಣೆಗಾಗಿ ಮತ್ತು ಕನ್ನಡಿಗರ ಉದ್ಯೋಗಕ್ಕಾಗಿ ನಿರಂತರವಾಗಿ ಕಳೆದ 25 ವರ್ಷಗಳಿಂದ ಕರ್ನಾಟಕದಲ್ಲಿ ದುಡಿಯುತ್ತಿರುವ “ಕರ್ನಾಟಕ ರಕ್ಷಣಾ ವೇದಿಕೆ – ಶಿವರಾಮೇಗೌಡರ ಬಣ”ವು ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಬೆಂಗಳೂರಿನ ಪುರಭವನದಲ್ಲಿ ಫೆ.1ರಂದು “ಕನ್ನಡಮ್ಮನ ಜಾನಪದ ಸಮಾವೇಶ” ಆಯೋಜಿಸಿದೆ.

ಈ ಹಿನ್ನೆಲೆಯಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ಮತ್ತು ಕಾವೇರಿ ನೀರಿನ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮಂಡ್ಯ ಕರವೇ ಜಿಲ್ಲಾ ಘಟಕವು ಜ.31ರಂದು ಸಂಜೆ 4 ಗಂಟೆಗೆ ಮಂಡ್ಯನಗರದ  ಜಯಚಾಮ ರಾಜೇಂದ್ರ ವೃತ್ತ (ಸಂಜಯ ಸರ್ಕಲ್)‌ದಿಂದ ಬೆಂಗಳೂರಿಗೆ  “ಕನ್ನಡ ಜ್ಯೋತಿ ಯಾತ್ರೆ”ಯನ್ನು ಕೊಂಡೊಯ್ಯಲಿದೆ ಎಂದು ಜಿಲ್ಲಾಧ್ಯಕ್ಷ ಹೆಚ್.ಡಿ. ಜಯರಾಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ