Friday, September 20, 2024

ಪ್ರಾಯೋಗಿಕ ಆವೃತ್ತಿ

ಕನ್ನಡೀಕರಣಗೊಂಡ ಕನ್ನಂಬಾಡಿ| ನಾಳೆ ಕಾವೇರಿಗೆ ಸಿಎಂ ಸಿದ್ದರಾಮಯ್ಯ ಬಾಗಿನ

ಹನಿಯಂಬಾಡಿ ಜಗದೀಶ್

ಕಾವೇರಿ ನದಿ ಪಾತ್ರ ಪ್ರಮುಖ ಅಣೆಕಟ್ಟೆಯಾದ ಕೃಷ್ಣರಾಜಸಾಗರ ಅಣೆಕಟ್ಟೆ ತುಂಬಿ ತುಳುಕಾಡುತ್ತಿದೆ, ವಾಡಿಕೆಯಂತೆ ನಾಡ ದೊರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆ.ಆರ್.ಎಸ್ ಅಣೆಕಟ್ಟೆಯಲ್ಲಿ ಕಾವೇರಿಗೆ ನಾಳೆ  (ಜು.29) ಬಾಗಿನ ಅರ್ಪಿಸಲಿದ್ದಾರೆ. ಅವರೊಂದಿಗೆ ಡಿಸಿಎಂ ಡಿ.ಕೆ.ಶಿವಕುಮಾರ್, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ರಾಜ್ಯ ಸಚಿವ ಸಂಪುಟದ ಪ್ರಮುಖ ಸಚಿವರ ದಂಡೆ ಭಾಗವಹಿಸಲಿದೆ. ಈ ಸಂದರ್ಭದಲ್ಲಿ ಇಡೀ ಕನ್ನಂಬಾಡಿಯನ್ನೂ ಕನ್ನಡಕರಣಗೊಳಿಸಿ ಸಿಂಗಾರ ಮಾಡಿರುವುದು ವಿಶೇಷವಾಗಿದೆ.

ಅಣೆಕಟ್ಟೆಯ ಮೇಲಿನ ರಸ್ತೆಯುದ್ದಕ್ಕೂ ಅಲ್ಲಲ್ಲಿ ಕಂಬಗಳನ್ನು ನೆಟ್ಟು ಕನ್ನಡ ತಾಯಿ ಭುವನೇಶ್ವರಿ ಚಿತ್ರವಿರುವ ಕೆಂಪು-ಹಳದಿ ಬಾವುಟಗಳನ್ನು ಹಾರಿಸಲಾಗಿದೆ, ಇದರಿಂದ ಕನ್ನಂಬಾಡಿಗೆ ವಿಶೇಷ ಕಳೆಯೇ ಬಂದಂತಾಗಿದೆ. ಇದೇ ವರ್ಷ ಡಿಸೆಂಬರ್ ನಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಮಂಡ್ಯದಲ್ಲೇ ನಡೆಯುತ್ತಿರುವುದರಿಂದ ವಿಶೇಷ ಮೆರಗು ತರುವ ಉದ್ದೇಶದಿಂದ ಮಂಡ್ಯ ಜಿಲ್ಲಾಡಳಿತವು ಕನ್ನಂಬಾಡಿ ವ್ಯಾಪ್ತಿಯಲ್ಲಿ ಕನ್ನಡದ ಬಾವುಟಗಳು ರಾರಾಜಿಸುವಂತೆ ಮಾಡಿರುವುದು ಕನ್ನಡತನವನ್ನು ಎಲ್ಲರಲ್ಲೂ ಬಡಿದೆಬ್ಬಿಸುವಂತೆ ಮಾಡಿದೆ.

“>

 

ಸಿಎಂ ಬಾಗಿನ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 29 ರಂದು ಬೆಳಿಗ್ಗೆ 10.30 ಗಂಟೆಗೆ ಮೈಸೂರಿನಿಂದ ಹೊರಟು  ರಸ್ತೆ ಮೂಲಕ ಕೆ.ಆರ್.ಎಸ್ ಗೆ ಆಗಮಿಸಿ ಕೃಷ್ಣರಾಜಸಾಗರ ಜಲಾಯಶಯದ ಕಾವೇರಿ ಪ್ರತಿಮೆಯ ಬಳಿ ಕಾವೇರಿ ಮಾತೆಯ ಪೂಜೆ ಸಲ್ಲಿಸಿ ಬಾಗಿನ ಸಮರ್ಪಣೆ  ಮಾಡಲಿದ್ದಾರೆ.

ಬಾಗಿನದ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರ ನೇತೃತ್ವದಲ್ಲಿ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಸೇರಿದಂತೆ ಹಲವು ಅಧಿಕಾರಿಗಳುಗಳು ಭಾನುವಾರ ಸಿದ್ದತೆ ಕಾರ್ಯವನ್ನು ಪರಿಶೀಲಿಸಿದರು.

“>

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!