Thursday, September 19, 2024

ಪ್ರಾಯೋಗಿಕ ಆವೃತ್ತಿ

ಕನ್ನಡ ಕೆಲಸಕ್ಕೆ ಯಾವತ್ತೂ ಮುಂದು : ಕೆ.ಕೆ.ರಾಧಾಕೃಷ್ಣ

ಕನ್ನಡ ನಾಡು, ನುಡಿಯನ್ನ ಉಳಿಸಿ, ಬೆಳೆಸುವ ಕೆಲಸಕ್ಕೆ ನಾನ್ಯಾವತ್ತು ಜೊತೆಯಲ್ಲಿ ಕೈಜೋಡಿಸುತ್ತೇನೆಂದು ಸಮಾಜ ಸೇವಕ ಕೆ.ಕೆ.ರಾಧಕೃಷ್ಣ ಹೇಳಿದರು.

ಮಂಡ್ಯದ ಅರ್ಕೇಶ್ವರ ನಗರದಲ್ಲಿ ಜೆಡಿಎಸ್‌ ಮುಖಂಡರಾದ ಸುಜೀತ್‌ ಮತ್ತು ಇನ್ನಿತರರ ಸಂಘಟನೆ ನೇತೃತ್ವದಲ್ಲಿ ನಡೆದ 67ನೇ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ತನ್ನನ್ನು ಕನ್ನಡದ ಹಬ್ಬಗಳಿಗೆ ಹೆಚ್ಚು ಹೆಚ್ಚು ಆಹ್ವಾನ ನೀಡುತ್ತಿರುವುದು ಸಂತಸ ತಂದಿದೆ. ಕನ್ನಡತನವನ್ನು ಪೋಷಿಸಿಕೊಂಡು ಹೋಗಲು ತಾವು ಶ್ರಮಿಸುವುದಾಗಿ ಹೇಳಿದರು.

ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಮಂಜುನಾಥ್ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡ ಭಾಷೆಗೆ 3000 ವರ್ಷಗಳ ಇತಿಹಾಸವಿದೆ. 67ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವುದು ಸಂತಸ ತಂದಿದೆ. ಕನ್ನಡರಾಜ್ಯೋತ್ಸವ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮವನ್ನು ಸಮಾಜ ಸೇವಕರಾದ ಡಾ.ನೂರ್ ಅಹಮದ್‌ ಹಾಗೂ ಗಣ್ಯರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಇದೇ ಸಂಧರ್ಭದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ತಟ್ಟೆ ವಿತರಣೆ, ಆಟೋ ಚಾಲಕರಾಗಿ ಸಮವಸ್ತ್ರ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಸೌಭಾಗ್ಯ, ಸುಜೀತ್, ಶಂಭು ಸೇವಾ ಟ್ರಸ್ಟ್ ನ ಬಿ.ಆರ್.ಸುರೇಶ್‌,  ರಾಜಣ್ಣ, ಅಕ್ಷತಾ, ಮಾಲಿಂಗಚಾರ್,ಲೋಕೇಶ್, ಸೇರಿದಂತೆ ಇನ್ನಿತರರು ಹಾಜರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಡೊಳ್ಳು ಕುಣಿತ, ನೂರಾರು ಆಟೋಗಳ ಮೂಲಕ ಮೆರವಣಿಗೆ ಮಾಡಲಾಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!