Sunday, November 22, 2026

ಪ್ರಾಯೋಗಿಕ ಆವೃತ್ತಿ

ಯುವಜನರು ಕನ್ನಡ ಭಾಷೆ, ನಾಡು – ನುಡಿ ಬಗ್ಗೆ ಅರಿಯಬೇಕು : ನಿರ್ಮಲಾನಂದನಾಥಶ್ರೀ

ಇಂದಿನ ಕಾಲದ ಯುವಕರು ((Gen Z) ಕೇವಲ ಮೊಬೈಲ್ ಸಾಮಾಜಿಕ ಜಾಲತಾಣಗಳಿಗೆ ಸೀಮಿತರಾಗದೆ ಕನ್ನಡ ಭಾಷೆ ನಾಡು ನುಡಿಗಳ ಬಗ್ಗೆ ಅರಿತುಕೊಳ್ಳಬೇಕು. ಅಲ್ಲದೆ ಕನ್ನಡದ ಲೇಖನ, ಪುಸ್ತಕಗಳನ್ನು ಓದುವ ಹವ್ಯಾಸ ಬಳಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಸಲಹೆ ನೀಡಿದರು.

ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಬಿ.ಜಿ.ಎಸ್ ಸಭಾಂಗಣದಲ್ಲಿ ಬುಧವಾರ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಕನ್ನಡ ಭಾಷೆಯ ಬಗ್ಗೆ ಜ್ಞಾನಪೀಠ ಪುರಸ್ಕೃತ ಕುವೆಂಪುರವರ ಕನ್ನಡ ಅಭಿಮಾನದ ಬಗ್ಗೆ ತಿಳಿಸಿ, ಕನ್ನಡಕ್ಕೆ ಹೋರಾಡು ಕನ್ನಡದ ಕಂದ, ಕನ್ನಡವ ಕಾಪಾಡು ನನ್ನ ಆನಂದ ಎಂದು ಹೇಳಿ ಪ್ರತಿನಿತ್ಯ ನಾವು ಕನ್ನಡ ಭಾಷೆಯನ್ನು ನಮ್ಮ ತಾಯಿ ಭಾಷೆ ಎಂದು ಪ್ರತಿದಿನ ಬಳಸಬೇಕೆಂದು ಹಾಗೂ ನಮ್ಮ ಮಾತೃಭಾಷೆಯನ್ನು ಪ್ರೀತಿಸಬೇಕು, ಆರಾಧಿಸಬೇಕು, ಅದರ ಜೊತೆಗೆ ಬೇರೆ ಭಾಷೆಗಳಿಗೆ ಗೌರವ ನೀಡಿ ಹೆಚ್ಚು ಭಾಷೆಗಳ ಕಲಿಕೆಗೆ ಗಮನ ಕೊಡಿ ಎಂದು ತಿಳಿಸಿದರು.

ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಜಿ ಶಿವರಾಮ ಅವರು ಗಣ್ಯತಿ ಗಣ್ಯರನ್ನು ಸ್ವಾಗತಿಸಿ ಕನ್ನಡದ ಏಕೀಕರಣಕ್ಕೆ ಕನ್ನಡದ ಸಾಹಿತಿಗಳು, ಲೇಖಕರ ಕೊಡುಗೆ ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ ವಿದ್ಯಾರ್ಥಿಗಳು ಮಾತೃಭಾಷೆ ಕನ್ನಡಕ್ಕೆ ಆದ್ಯತೆ ನೀಡಿ ಬೆಳೆಸಬೇಕು ಎಂಬ ಸಂದೇಶವನ್ನು ನೀಡಿ, ಇಂದಿನ ಕಾಲದ ಯುವಶಕ್ತಿ ಪುಸ್ತಕಗಳನ್ನು ಓದುವ ಮೂಲಕ ಸಾವಿರಾರು ವರ್ಷಗಳ ವಿಚಾರಗಳನ್ನು ತಿಳಿಸುತ್ತವೆ ಕನ್ನಡ ಪುಸ್ತಕಗಳನ್ನು ಓದೋಣ ಎಂದು ತಿಳಿಸಿ, ನಾನು ಎಂದಿಗೂ ಬೇರೆ ಭಾಷೆಯ ಚಿತ್ರಗಳನ್ನು ನಿರ್ದೇಶನ ಮಾಡುವುದಿಲ್ಲ ಎಂದು ತಿಳಿಸಿದರು.

2025ನೇ ಸಾಲಿನ ರಾಜ್ಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಎಸ್.ಎನ್. ರಾಮೇಗೌಡ ಮಾತನಾಡಿ, ಅನೇಕ ವರ್ಷಗಳ ಶ್ರಮದ ಫಲದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರಕಿದ್ದು ನನಗೆ ಖುಷಿ ತಂದಿದೆ ಶ್ರೀಮಠವು ನಮ್ಮನ್ನು ಇಂದು ಗೌರವಿಸುತ್ತಿರುವುದು ನಮಗೆ ಹೆಮ್ಮೆ ಉಂಟುಮಾಡಿದೆ ಎಂದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಪುರಸ್ಕೃತ ಎಂ. ಸಿದ್ದರಾಜು ಮಾತನಾಡಿ, ನಾವು ಎಂದು ಭಾಷಣ ಮಾಡಿದವರಲ್ಲ ಭಾಷಣ ಮಾಡಿದ್ದನ್ನು ವರದಿ ಮಾಡಿ ಅಭ್ಯಾಸ ಉಂಟು, ನಾವು ಪತ್ರಿಕೋದ್ಯಮದಲ್ಲಿ ನೈಜ ಕಠಿಣ ಲೇಖನದ ಮೂಲಕ ಸಮಾಜಕ್ಕೆ ಹಾಗೂ ಪತ್ರಿಕೋದ್ಯಮಕ್ಕೆ ಸೇವೆ ನೀಡಿದ್ದೇವೆ, ಇದನ್ನು ಗುರುತಿಸಿ ಪ್ರಶಸ್ತಿ ನೀಡಿದ ನಿಮಗೆ ಧನ್ಯವಾದಗಳು ತಿಳಿಸಿದರು.

ಆದಿಚುಂಚನಗಿರಿ ವಿಶ್ವವಿದ್ಯಾಲಯ ಕುಲಸಚಿವ ಡಾ.ಎಸ್ ಎನ್ ಶ್ರೀಧರ ಮಾತನಾಡಿ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಕೋರಿ ಕನ್ನಡ ಭಾಷೆ ಹಾಗೂ ರಾಜ್ಯದ ಇತಿಹಾಸ ಕನ್ನಡದ ಶಾಸನಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು, ಕನ್ನಡದ ಬಳಕೆಯಿಂದ ಇನ್ನಷ್ಟು ಕನ್ನಡವನ್ನು ಬೆಳೆಸೋಣ ಎಂದು ಕರೆ ನೀಡಿದರು.

ಕನ್ನಡ ಭಾಷೆಗೆ ಆದ್ಯತೆ ನೀಡಿದ ಒಬ್ಬ ಭಾರತೀಯ ಕಾದಂಬರಿಕಾರ, ತತ್ವಜ್ಞಾನಿ ಮತ್ತು ಚಿತ್ರಕಥೆಗಾರರಾಗಿ ಮರೆಯಾದ ಪ್ರೊಫೆಸರ್ ಎಸ್ ಎಲ್ ಭೈರಪ್ಪರವರನ್ನು ಸ್ಮರಿಸಿ ಗೌರವ ಸಲ್ಲಿಸಲಾಯಿತು. ಪೂಜ್ಯ ಶ್ರೀಗಳ ಹಸ್ತದಿಂದ ಆದಿಚುಂಚನಗಿರಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಿಬ್ಬಂದಿ ವರ್ಗ ರಚಿಸಿದ್ದ ಅನೇಕ ಲೇಖನ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಡಾ.ಸಿ.ಕೆ ಸುಬ್ಬರಾಯ ಸನ್ಮಾನಿತರನ್ನು ಪರಿಚಯಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಸತ್ಕೀರ್ತಿನಾಥ ಸ್ವಾಮೀಜಿ, ಟ್ರಸ್ಟಿ ಡಿ. ದೇವರಾಜ್, ಆದಿಚುಂಚನಗಿರಿ ಆಸ್ಪತ್ರೆಯ ಡೆಫ್ಯೂಟಿ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ರವಿ ಕೆ.ಎಸ್., ಹಾಗೂ ಅಕಾಡೆಮಿಕ್ ಡೀನ್ ಡಾ. ರಮೇಶ್ ರವರು, ಡಾ.ಆಲಿಯಾ ನುಸ್ರತ್, ಚಂದನ್ ರಾಜ್ C N ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಕನ್ನಡ ನಾಡಿನ ಸಾಂಸ್ಕೃತಿಕ ಕಲೆಗಳಾದ ಯಕ್ಷಗಾನ ಭರತನಾಟ್ಯ, ಜಾನಪದ ಕಲೆಗಳ ಸಾಂಸ್ಕೃತಿಕ ಭವ್ಯ ಮೆರವಣಿಗೆ ಜರುಗಿತು. ಆದಿಚುಂಚನಗಿರಿ ವಿಶ್ವವಿದ್ಯಾಲಯದ , ಪ್ರಾಂಶುಪಾಲರು ಭೋದಕ ಬೋಧಕ್ಕೆತರ ಸಿಬ್ಬಂದಿ ವರ್ಗ ಸೇರಿದಂತೆ 2000 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ