Thursday, October 10, 2024

ಪ್ರಾಯೋಗಿಕ ಆವೃತ್ತಿ

ಕನ್ನಡ ಸಾಹಿತ್ಯ ಪರಿಷತ್ತು ಕಟ್ಟಲು ದತ್ತಿ ಉಪನ್ಯಾಸ ನೆರವು

ದಾನಿಗಳ ದತ್ತಿ ಉಪನ್ಯಾಸಗಳಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಟ್ಟುವ ಕೆಲಸಕ್ಕೆ ನೆರವು ಸಿಗುತ್ತಿದೆ ಎಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರೊ. ಜಿ.ಟಿ..ವೀರಪ್ಪ ಹೇಳಿದರು.

ಮಂಡ್ಯ ನಗರದಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಡ್ಯ ತಾಲೂಕು ಮತ್ತು ನಗರ ಘಟಕ ಆಯೋಜಿಸಿದ್ದ ಲಕ್ಷ್ಮಮ್ಮ ಪಟೇಲ್ ಸಿ. ಮಾದೇಗೌಡ ಸ್ಮಾರಕ ದತ್ತಿ, ಗೌರಮ್ಮ ಸಿದ್ದರಾಮಯ್ಯ ದತ್ತಿ,ಸ್ವಾತಂತ್ರ‍್ಯ ಹೋರಾಟಗಾರ ಇಂಡುವಾಳು ಹೊನ್ನಯ್ಯ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದತ್ತಿ ಎಂದರೆ ಗಣ್ಯ ವ್ಯಕ್ತಿಗಳನ್ನು ಸ್ಮರಿಸಿಕೊಳ್ಳಲು ಮತ್ತು ಅವರ ಸಾಧನೆಯನ್ನು ಜನತೆಯ ಮುಂದಿಡಲು ಕುಟುಂಬಸ್ಥರು ಕನ್ನಡಸಾಹಿತ್ಯ ಪರಿಷತ್ತಿನಲ್ಲಿ ಇಡಿಗಂಟು ಹಣವನ್ನು ಬ್ಯಾಂಕ್‌ನಲ್ಲಿಟ್ಟು ಬರುವ ಬಡ್ಡಿಹಣದಲ್ಲಿ ವಾರ್ಷಿಕ ಕಾರ್ಯಕ್ರಮಗಳನ್ನು ಮಾಡುವುದೇ ದತ್ತಿ ಉಪನ್ಯಾಸ. ಇಂತಹ ದಾನಿಗಳ ನೆರವಿನಂದ ಸಾಹಿತ್ಯ ವೃದ್ಧಿ, ಸಂಘಟನೆ ಕಟ್ಟುವ ಕಾರ್ಯ ಸುಗಮವಾಗಿ ಸಾಗುತ್ತದೆ ಎಂದು ನುಡಿದರು.

ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ವಿಶ್ವವ್ಯಾಪಿಯಾಗಿದೆ. ಅಂಗೈಯಲ್ಲೇ ಪ್ರಪಂಚವನ್ನು ನೋಡುವಷ್ಟರ ಮಟ್ಟಿಗೆ ತಂತ್ರಜ್ಞಾನ ಜಗತ್ತು ಬೆಳೆಯುತ್ತಿದೆ. ಯುವಜನತೆ ಜಾಲತಾಣಗಳನ್ನು ಅನುಪಯುಕ್ತ ಕಾರ್ಯಗಳಿಗೆ ಬಳಸುವುದೇ ಹೆಚ್ಚು. ಕಾಲಕಳೆಯಲು, ಕಾಲು ಎಳೆಯಲು ಬಳಸಿಕೊಂಡು ದಾರಿತಪ್ಪುತ್ತಿದ್ದಾರೆ.ಇದು ಆಗಬಾರದು ಎಂದು ಹೇಳಿದರು.

ಹಗಲು-ರಾತ್ರಿ ಎನ್ನದೆ ಸದಾ ಮೊಬೈಲ್ ಬಳಕೆ, ಕಂಪ್ಯೂಟರ್ ಬಳಕೆ, ಜಾಲತಾಣಗಳಾದ ವಾಟ್ಸ್ ಆಪ್, ಫೇಸ್‌ಬುಕ್, ಟಿಟ್ಟರ್,ಯುಟೂಬ್, ಗೂಗಲ್ ಸೇರಿದಂತೆ ಇನ್ನೂ ಅನೇಕ ಆ್ಯಪ್ ಬಳಕೆಯಿಂದ ಯುವಜನತೆ ಪುಸ್ತಕ ಓದುವ ಸಂಸ್ಕೃತಿಯನ್ನೇ ಮರೆತರು. ವಿಜ್ಞಾನ-ಸುಜ್ಞಾನವಿಲ್ಲದೆ, ಹುಚ್ಚರಂತೆ ಒಬ್ಬೊಬ್ಬರೇ ಮಾತಾಡಿಕೊಳ್ಳುವ ಕಾಲಬಂದಿದೆ ಎಂದು ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ “ಸಾಮಾಜಿಕ ಜಾಲತಾಣ ಮತ್ತು ಯುವಜನತೆ ಮಾದರಿ ಕೃಷಿ” ಕುರಿತು ಹಿರಿಯ ಸಾಹಿತಿ ಡಾ.ಎಸ್. ಶ್ರೀನಿವಾಸ್ ಶೆಟ್ಟಿ ಮತ್ತು ವಿಶ್ರಾಂತ ಪ್ರಾಧ್ಯಾಪಕ ಪ್ರೊ ಜಿ.ಎಸ್. ಬೋರೇಗೌಡ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾ ಅಧ್ಯಕ್ಷ ಸಿ.ಕೆ. ರವಿಕುಮಾರ್ ಚಾಮಲಾಪುರ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಕೋಶಾಧ್ಯಕ್ಷ ಬಿ.ಎಂ ಅಪ್ಪಾಜಪ್ಪ ದತ್ತಿದಾನಿಗಳಾದ ಚನ್ನಸಂದ್ರ ಮಹದೇವು ಡಾ.ನಿಶ್ಚಲ್‌ರಾಜ್, ಎಚ್. ಚಂದ್ರಶೇಖರ್ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಸುಹಾಲ್, ಧನಂಜಯ ದರಸಗುಪ್ಪೆ ಸೇರಿದಂತೆ ಹಲವರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!