ಕರ್ನಾಟಕ ಜನಶಕ್ತಿ ಸಂಘಟನೆಯ ನೇತೃತ್ವದಲ್ಲಿ ನಡೆಯುತ್ತಿದ್ದ ಶ್ರಮಿಕ ನಿವಾಸಿಗಳ ಹೋರಾಟವು ಇಂದು ಕೊನೆಗೊಂಡಿದೆ.
ಮಂಡ್ಯದ ಹಾಲಳ್ಳಿ ಸ್ಲಂ, ಕಾಳಿಕಾಂಬ ಸ್ಲಂ ಮತ್ತು ನ್ಯೂ ತಮಿಳ್ ಕಾಲೋನಿ ಸೇರಿದಂತೆ ಹಲವು ಕಡೆ ಮನೆಗಳನ್ನು ಹಂಚಿಕೆ ಮಾಡುವ ವಿಚಾರವಾಗಿ ನಡೆಯುತ್ತಿದ್ದ ಪ್ರತಿಭಟನೆಯುನ್ನು ಇಂದು ಹಿಂಪಡೆದಿದ್ದಾರೆ.
ಪ್ರತಿಭಟನೆಗೆ ಸ್ಪಂದಿಸಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ನಿಂದ ಎಲ್ಲಾ ಶ್ರಮಿಕ ನಿವಾಸಿಗಳ ಮನೆ ಹಂಚಿಕೆ ಮಾಡುವ ಬಗ್ಗೆ ಭರವಸೆಯ ಪತ್ರದಲ್ಲಿ ತಿಳಿಸಿದ್ದಾರೆ.
ಮಂಡ್ಯದ ಹಾಲಳ್ಳಿ ಸ್ಲಂ ಸರ್ವೆ ನಂಬರ್ 14 ಮತ್ತು 16 ರಲ್ಲಿ ರಾಜೀವ್ ಆವಾಸ್ ಯೋಜನೆಯ ಮೂಲಕ ನಿರ್ಮಿಸಲಾಗಿರುವ 162 ಮನೆಗಳ ಹಂಚಿಕೆಯನ್ನು ದಿನಾಂಕ 22/6/22 ರ ಅಂತ್ಯದೊಳಗೆ ಬಗೆಹರಿಸಲಾಗುವುದು ಎಂದು ತಿಳಿಸಿದ್ದಾರೆ.
ಕಾಳಿಕಾಂಬ ದೇವಸ್ಥಾನದ ಹಿಂಭಾಗ ಇರುವ ಜಾಗದಲ್ಲಿ ಅಲ್ಲಿನ ಸ್ಥಳೀಯರಿಗೆ ಮನೆಗಳನ್ನು ನಿರ್ಮಿಸುವ ಸಂಬಂಧವಾಗಿ ಅಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು. ಹಾಗೂ ನ್ಯೂ ತಮಿಳು ಕಾಲೋನಿ ಕೊಳಚೆ ಪ್ರದೇಶದಲ್ಲಿ ಸಾರ್ವಜನಿಕರಿಗೆ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಹಿಂಬರಹ ಪತ್ರದಲ್ಲಿ ತಿಳಿಸಿದ್ದಾರೆ.
ತಾವಿರುವ ನಿವೇಶನಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ, ಹಕ್ಕು ಪತ್ರಗಳನ್ನು ನೀಡಿ ತಮ್ಮ ಎಲ್ಲಾ ಬೇಡಿಕೆಗಳನ್ನು ಕಾರ್ಯರೂಪಕ್ಕೆ ತರುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದಿದ್ದಾರೆ.