Tuesday, November 24, 2026

ಪ್ರಾಯೋಗಿಕ ಆವೃತ್ತಿ

ಟಿಪ್ಪು ನಡೆದಾಡಿದ ನೆಲದಲ್ಲಿ ನಿಷೇಧಾಜ್ಞೆ ಹೇರಿಕೆ ದುರಂತ- ಡಾ. ವಾಸು

ಅಪ್ರತಿಮ ಹೋರಾಟಗಾರ ಟಿಪ್ಪು ಸುಲ್ತಾನ್ ನಡೆದಾಡಿದ ಶ್ರೀರಂಗಪಟ್ಟಣದಲ್ಲಿ, ಆತನ ಜನ್ಮದಿನದಂದು ನಾವೆಲ್ಲರೂ ಬಯಸಿ ತಂದಂತಹ ಸರ್ಕಾರವೇ 144 ಸೆಕ್ಷನ್ ಜಾರಿ ಮಾಡಿ, ನಿಷೇಧಾಜ್ಞೆ ಹೇರಿರುವುದು ದುರಂತ ಎಂದು ಈದಿನ.ಕಾಂ ಮಾಧ್ಯಮ ಸಂಸ್ಥೆಯ ಮುಖ್ಯಸ್ಥ ಡಾ.ವಾಸು ಹೆಚ್.ವಿ ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರಿನ ಸಿದ್ದಿಕ್ ನಗರದ ಮಿಲನ್ ಫಂಕ್ಷನ್ ಹಾಲ್ ನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಮತ್ತು ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ಪ್ರಸ್ತುತ ಸಂದರ್ಭದಲ್ಲಿ ಟಿಪ್ಪುವನ್ನು ಮುಸಲ್ಮಾನನಾಗಿ, ಬಸವಣ್ಣನನ್ನು ಲಿಂಗಾಯತನಾಗಿ, ಕುವೆಂಪು ಅವರನ್ನು ಒಕ್ಕಲಿಗನಾಗಿ, ಕಿತ್ತೂರು ರಾಣಿ ಚನ್ನಮ್ಮ ಅವರನ್ನು ಪಂಚಮಶಾಲಿ ಲಿಂಗಾಯಿತರನ್ನಾಗಿ ನೋಡುವ ಸಮಾಜದಲ್ಲಿದ್ದೇವೆ, ಆದರೆ 4-5 ದಶಕಗಳ ಹಿಂದೆ ಇಂತಹ ಪರಿಸ್ಥಿತಿ ಇರಲಿಲ್ಲ, ಈಗ ಇರುವ ಪರಿಸ್ಥಿತಿಯಲ್ಲಿ ನಮ್ಮ ಮೇಲೆ ದೊಡ್ಡ ಜವಾಬ್ದಾರಿ ಇದೆ, ಅದನ್ನು ನಾವು ನಿಭಾಯಿಸಬೇಕಿದೆ ಎಂದರು.

70 ದಶಕದಲ್ಲಿ ಹಿಂದೂ ಮಹಾಸಭಾದ ನಾಯಕ ರಾಮದಾಸ್ ಕಿದ್ವಾಯಿ ಅವರ ಮಗ ಭಗವಾನ್ ಎಸ್ ಕಿದ್ವಾಯಿ ಅವರು, ಟಿಪ್ಪುವಿನ ಅಪ್ರತಿಮ ಹೋರಾಟವನ್ನು ಫ್ರೆಂಚ್ ಸಂಶೋಧನಾ ವಿದ್ಯಾರ್ಥಿಯಿಂದ ತಿಳಿದು ಕೊಂಡು, ಟಿಪ್ಪುವಿನ ಬಗ್ಗೆ ಐತಿಹಾಸಿಕ ಕಾದಂಬರಿ ರಚನೆ ಮಾಡಿದ್ದರು. ಅದು ಲಕ್ಷಾಂತರ ಸಂಖ್ಯೆಯಲ್ಲಿ ವಿಶ್ವದಾದ್ಯಂತ ಮಾರಾಟವಾಗಿತ್ತು. ಆದರೆ ಇಂದು ಅನ್ಯ ಧರ್ಮಕ್ಕೆ ಸೇರಿದ ವ್ಯಕ್ತಿಯ ಸಾಹಸವನ್ನು ದಾಖಲಿಸುವ ಕಾಲಘಟ್ಟದಲ್ಲಿ ನಾವಿದ್ದೇವೆಯೇ ? ಎಂಬುದನ್ನು ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ ಎಂದರು.

ವಿಶ್ವದಲ್ಲಿ ಯುದ್ದಭೂಮಿಯನ್ನೇ ಹೋರಾಟ ಮಾಡಿ ಸಾವನ್ನಪ್ಪಿದ ರಾಜರುಗಳು ಕೆಲವೇ ಕೆಲವು ಮಂದಿ ಅವರಲ್ಲಿ ನಮ್ಮ ಕರ್ನಾಟಕದ ಟಿಪ್ಪು ಸುಲ್ತಾನ್ ಅವರು ಒಬ್ಬರು ಎಂಬುದಕ್ಕೆ ಹಲವಾರು ದಾಖಲೆಗಳು ಲಭ್ಯವಾಗುತ್ತವೆ, ಇದು ಹೆಮ್ಮಯ ಸಂಗತಿ ಎಂದರು.

ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಶಾಸಕ ತನ್ಬೀರ್ ಸೇಠ್ ಮಾತನಾಡಿದರು. ಮೈಸೂರು ನಗರದಲ್ಲಿ ಸ್ತಬ್ದ ಚಿತ್ರಗಳ ಮೆರವಣಿಗೆ, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ನಾಡ ಗೀತೆ ಗಾಯನ ಕಾರ್ಯಕ್ರಮಗಳು ನಡೆದವು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ